ETV Bharat / bharat

3 ರಾಜ್ಯಗಳ ಫಲಿತಾಂಶ ಉತ್ತಮ ಆಡಳಿತದ ಹಿಂದೆ ಜನರಿದ್ದಾರೆ ಎಂದು ಸೂಚಿಸುತ್ತದೆ: ಪ್ರಧಾನಿ ಮೋದಿ

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ತೆಲಂಗಾಣ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
author img

By ETV Bharat Karnataka Team

Published : Dec 3, 2023, 7:09 PM IST

ಹೈದರಾಬಾದ್​ : ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಫಲಿತಾಂಶಗಳ ಪೈಕಿ ಭಾನುವಾರ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ಅಚ್ಚರಿ ಫಲಿತಾಂಶ ಬಂದಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಇತ್ತ ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್​ ಗೆಲುವಿನ ಸಂಭ್ರಮಾಚರಣೆಯಲ್ಲಿದೆ.

ಈ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿಯನ್ನು ಅಧಿಕಾರಕ್ಕೆ ತಂದ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಜನರಿಗೆ ಜೊತೆಗೆ ಕೇಸರಿ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ತೆಲಂಗಾಣ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಮೂರು ರಾಜ್ಯಗಳ ಫಲಿತಾಂಶಗಳು ಭಾರತದ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯದೊಂದಿಗೆ ದೃಢವಾಗಿ ಇದ್ದಾರೆ ಎಂಬುದನ್ನು ಸೂಚಿಸುತ್ತವೆ. ಈ ಗೆಲುವಿಗೆ ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಎಂದು ಎಂದು ಎಕ್ಸ್​ ನಲ್ಲಿ ಬರೆದುಕೊಂಡು ಪೋಸ್ಟ್​ ಮಾಡಿದ್ದಾರೆ.

  • My dear sisters and brothers of Telangana,

    Thank you for your support to the @BJP4India. Over the last few years, this support has only been increasing and this trend will continue in the times to come.

    Our bond with Telangana is unbreakable and we will keep working for the…

    — Narendra Modi (@narendramodi) December 3, 2023 " class="align-text-top noRightClick twitterSection" data=" ">

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ಚುನಾವಣೆಯ ಐದು ರಾಜ್ಯಗಳ ಚುನಾವಣೆ ಪ್ರಚಾರದಲ್ಲಿ ಬಿಜೆಪಿಯನ್ನು ಪ್ರಧಾನಿ ಮೋದಿ ಮುನ್ನಡೆಸಿದ್ದರು. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡರೆ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನಿಂದ ಅಧಿಕಾರವನ್ನು ಕಸಿದುಕೊಂಡಿದೆ.

ಈ ಬಾರಿ ತೆಲಂಗಾಣದಲ್ಲಿ ಜನರು ಬಿಆರ್​ಎಸ್​ ಪಕ್ಷವನ್ನು ಕೆಳಗಿಳಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಇತ್ತ ಮತ್ತೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ 1 ರಿಂದ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾಗಿ ಬಿಜೆಪಿಯನ್ನು ಬೆಂಬಲಿಸಿದ ತೆಲಂಗಾಣದ ಸಹೋದರ, ಸಹೋದರಿಯರಿಗೆ ನನ್ನ ಧನ್ಯವಾದಗಳು. ಕಳೆದ ಕೆಲವು ವರ್ಷಗಳಿಂದ, ಈ ಬೆಂಬಲವು ಹೆಚ್ಚುತ್ತಿದೆ. ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯವು ಮುರಿಯಲಾಗದು. ನಾವು ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಶ್ರಮದಾಯಕ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ ಎಂದು ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್‌ನಲ್ಲಿ ಪ್ರಧಾನಿ ಹೇಳಿದ್ದಾರೆ.

  • We bow to the Janta Janardan.

    The results in Chhattisgarh, Madhya Pradesh and Rajasthan indicate that the people of India are firmly with politics of good governance and development, which the @BJP4India stands for.

    I thank the people of these states for their unwavering…

ಬಿಜೆಪಿಗೆ ಗೆಲುವಿನ ಸಂಭ್ರಮ : ಚುನಾವಣಾ ಆಯೋಗ ಹೊರಡಿಸಿದ ಟ್ರೆಂಡ್‌ಗಳ ಪ್ರಕಾರ, ಮಧ್ಯಪ್ರದೇಶದ 230 ಸ್ಥಾನಗಳಲ್ಲಿ 155 ಮತ್ತು ಛತ್ತೀಸ್‌ಗಢದ 90 ಸ್ಥಾನಗಳ ಪೈಕಿ 57ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ರಾಜಸ್ಥಾನದಲ್ಲಿ 199 ಸ್ಥಾನಗಳಲ್ಲಿ ಬಿಜೆಪಿ 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೇ ಈ ಮೂರು ರಾಜ್ಯದಲ್ಲಿ ಬಿಜೆಪಿ ಮ್ಯಾಜಿಕ್​ ಸಂಖ್ಯೆಯನ್ನು ಮೀರಿ ಕ್ಷೇತ್ರಗಳನ್ನು ಪಡೆದುಕೊಂಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ತೆಲಂಗಾಣದಲ್ಲಿ ಕಳೆದ ಚುನಾವಣೆಯಲ್ಲಿ ಕೇಲವ 1 ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೆಚ್ಚು ಕಡಿಮೆ ಈ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ವಿಧಾನಸಭೆ ಚುನಾವಣೆ ಫಲಿತಾಂಶ: ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಸಂಜೆ ಪ್ರಧಾನಿ ಮೋದಿ ಭಾಷಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.