ETV Bharat / bharat

ಆರ್​ಬಿಐ ರೆಪೊ ದರ ಹೆಚ್ಚಳ: ಸಾಲ ಹಾಗೂ ಎಫ್​​ಡಿ ಬಡ್ಡಿಯೂ ಏರಿಕೆ

author img

By

Published : Sep 30, 2022, 10:47 AM IST

Updated : Sep 30, 2022, 1:16 PM IST

50 ಮೂಲಾಂಕದಷ್ಟು ರೆಪೊ ದರ ಏರಿಕೆಯಿಂದ ಖಂಡಿತವಾಗಿಯೂ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮವಾಗಲಿದೆ. ಇನ್ನು ಮುಂದೆ ಬ್ಯಾಂಕ್​ಗಳು ಆರ್​ಬಿಐನಿಂದ ಪಡೆಯುವ ಸಾಲದ ಬಡ್ಡಿದರ ಹೆಚ್ಚಾಗುತ್ತದೆ. ಆದರೆ ಬ್ಯಾಂಕ್​ಗಳು ಇದನ್ನು ತಾವು ಭರಿಸುವುದಿಲ್ಲ, ಹೀಗೆ ಹೆಚ್ಚಿನ ಬಡ್ಡಿದರದ ಭಾರವನ್ನು ಅವು ಗ್ರಾಹಕರಿಗೆ ವರ್ಗಾಯಿಸುತ್ತವೆ.

ರೆಪೊ ದರ 50 ಬೇಸಿಸ್ ಪಾಯಿಂಟ್ ಏರಿಕೆ: ಹಣದುಬ್ಬರ ನಿಯಂತ್ರಣಕ್ಕೆ ಆರ್​ಬಿಐ ಕ್ರಮ
http://10.10.50.85:6060/reg-lowres/30-September-2022/repo1_3009newsroom_1664514546_812.jpg

ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಆರ್​ಬಿಐ ಮತ್ತೊಮ್ಮೆ ರೆಪೊ ದರ ಹೆಚ್ಚಿಸಿದೆ. ಈ ಬಾರಿ ಆರ್​ಬಿಐ 50 ಮೂಲಾಂಕ (ಬೇಸಿಸ್ ಪಾಯಿಂಟ್) ಅಥವಾ ಶೇ 0.50 ರಷ್ಟು ರೆಪೊ ಏರಿಕೆ ಮಾಡಿದೆ. ಈ ಹೆಚ್ಚಳದೊಂದಿಗೆ ರೆಪೊ ದರ ಶೇ 5.90ಗೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಹಣದುಬ್ಬರ ಆರ್​ಬಿಐನ ಮಿತಿ ಮೀರಿ ಹೆಚ್ಚಾಗುತ್ತಿದೆ. ಈಗ ದೇಶದಲ್ಲಿ ಶೇ 7 ರಷ್ಟು ಹಣದುಬ್ಬರ ಇರುವುದು ಗಮನಾರ್ಹ. ಹೀಗಾಗಿ ಹಣದುಬ್ಬರ ನಿಯಂತ್ರಿಸಲು ಆರ್​ಬಿಐ ಇದೊಂದೇ ವರ್ಷದಲ್ಲಿ ನಾಲ್ಕು ಬಾರಿ ರೆಪೊ ದರ ಹೆಚ್ಚಿಸಿದೆ.

50 ಮೂಲಾಂಕದಷ್ಟು ರೆಪೊ ದರ ಏರಿಕೆಯಿಂದ ಖಂಡಿತವಾಗಿಯೂ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮವಾಗಲಿದೆ. ಇನ್ನು ಮುಂದೆ ಬ್ಯಾಂಕ್​ಗಳು ಆರ್​ಬಿಐನಿಂದ ಪಡೆಯುವ ಸಾಲದ ಬಡ್ಡಿದರ ಹೆಚ್ಚಾಗುತ್ತದೆ. ಆದರೆ ಬ್ಯಾಂಕ್​ಗಳು ಇದನ್ನು ತಾವು ಭರಿಸುವುದಿಲ್ಲ, ಹೀಗೆ ಹೆಚ್ಚಿನ ಬಡ್ಡಿದರದ ಭಾರವನ್ನು ಅವು ಗ್ರಾಹಕರಿಗೆ ವರ್ಗಾಯಿಸುತ್ತವೆ. ಇದರಿಂದ ಕಾರ್ ಲೋನ್, ಹೋಮ್ ಲೋನ್ ಸೇರಿದಂತೆ ಇನ್ನೂ ಹಲವಾರು ರೀತಿಯ ಸಾಲಗಳು ತುಟ್ಟಿಯಾಗಲಿವೆ. ಆದರೆ ರೆಪೊ ದರ ಏರಿಕೆಯಿಂದ ಒಂದು ಕಡೆ ಲಾಭವೂ ಆಗಲಿದೆ. ಬ್ಯಾಂಕ್​ಗಳಲ್ಲಿ ಹಣ ಎಫ್​ಡಿ ಮಾಡುವ ಜನರಿಗೆ ಹೆಚ್ಚು ಬಡ್ಡಿದರ ಸಿಗುವುದು ಖುಷಿಯ ವಿಚಾರ.

ಎಫ್‌ಡಿ ಬಡ್ಡಿದರದಲ್ಲಿ ಬದಲಾವಣೆ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿರುವ ಪರಿಣಾಮ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲೂ ಆಗಲಿದೆ. ತಮ್ಮ ಸಾಲಗಳ ಬಡ್ಡಿದರಗಳನ್ನು ಹೆಚ್ಚಿಸುವುದರ ಜೊತೆಗೆ, ಬ್ಯಾಂಕುಗಳು ಎಫ್​​ಡಿ ಗಳ ಬಡ್ಡಿದರಗಳನ್ನು ಸಹ ಹೆಚ್ಚಿಸುತ್ತವೆ. ರಿಸರ್ವ್ ಬ್ಯಾಂಕ್ ಆಗಸ್ಟ್‌ನಲ್ಲಿ ರೆಪೊ ದರವನ್ನು ಹೆಚ್ಚಿಸಿದ ನಂತರ ಬಹುತೇಕ ಎಲ್ಲಾ ಬ್ಯಾಂಕ್‌ಗಳು ತಮ್ಮ ಎಫ್‌ಡಿ ಬಡ್ಡಿದರಗಳನ್ನು ಹೆಚ್ಚಿಸಿವೆ. ಈಗ ಮತ್ತೊಮ್ಮೆ ರೆಪೋ ದರ ಹೆಚ್ಚಳದಿಂದ ಎಫ್‌ಡಿ ಬಡ್ಡಿ ದರಗಳು ಮತ್ತಷ್ಟು ಹೆಚ್ಚಾಗಲಿವೆ.

ಯಾರಿಗೆ ಲಾಭ?: ಈಗ ಬ್ಯಾಂಕ್ ಗಳು ನಿಶ್ಚಿತ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಿದರೆ ಎಲ್ಲ ಗ್ರಾಹಕರಿಗೂ ಲಾಭ ಸಿಗುತ್ತದಾ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಶ್ನೆಗೆ ಉತ್ತರ - ಇಲ್ಲ. ಬಡ್ಡಿ ದರ ಏರಿಕೆಗೂ ಮುನ್ನ ಬ್ಯಾಂಕ್ ನಲ್ಲಿ ಎಫ್ ಡಿ ಮಾಡಿದ ಗ್ರಾಹಕರಿಗೆ ಹೆಚ್ಚಿದ ಬಡ್ಡಿದರದ ಲಾಭ ಸಿಗಲಾರದು. ಈಗ ಹೊಸದಾಗಿ ಎಫ್​ಡಿ ಮಾಡುವವರಿಗೆ ಮಾತ್ರ ಹೊಸ ಬಡ್ಡಿದರ ಅನ್ವಯವಾಗುತ್ತದೆ.

ತಕ್ಷಣಕ್ಕೆ ಹೆಚ್ಚಾಗುತ್ತಾ ಬಡ್ಡಿದರ?: ಭಾರತೀಯ ರಿಸರ್ವ್ ಬ್ಯಾಂಕ್​​ನ ರೆಪೊ ದರ ಹೆಚ್ಚಳ ಮಾಡಿದ ತಕ್ಷಣ ಬ್ಯಾಂಕ್​​ಗಳು ನಿಶ್ಚಿತ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸುವುದಿಲ್ಲ. ಇದನ್ನು ಬ್ಯಾಂಕ್​ಗಳು ನಿಧಾನವಾಗಿ ಮಾಡುತ್ತವೆ. ಇದಲ್ಲದೆ, ಅನೇಕ ಬ್ಯಾಂಕುಗಳು ಎಲ್ಲಾ ಅವಧಿಯ ಎಫ್​ಡಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಿಲ್ಲ. ರೆಪೊ ದರದ ಅನುಪಾತದಲ್ಲೇ ಬ್ಯಾಂಕುಗಳು ಎಲ್ಲ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ಅಗತ್ಯವಿಲ್ಲ.

ಇದನ್ನೂ ಓದಿ: ಡಿಜಿಟಲ್ ಸಾಲದ ವಂಚನೆಗಳಿಂದ ಗ್ರಾಹಕರ ರಕ್ಷಣೆ.. RBI ಜಾರಿಗೆ ತಂದಿದೆ ಹೊಸ ನಿಯಮ

Last Updated : Sep 30, 2022, 1:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.