ETV Bharat / bharat

ಚಲಿಸುವ ಕಾರುಗಳು ಆಕಸ್ಮಿಕವಾಗಿ ಧಗಧಗಿಸೋದ್ಯಾಕೆ?

author img

By

Published : Apr 3, 2021, 4:55 PM IST

ಬೇಸಿಗೆಯಲ್ಲಿ ಕಾರುಗಳು ಚಲಿಸುತ್ತಿರುವಾಗಲೇ ಅಗ್ನಿ ಅನಾಹುತ ಸಂಭವಿಸುವ ಪ್ರಕರಣಗಳು ನಡೆಯುತ್ತಿದ್ದು, ಇಂಥಹ ಅವಘಡಗಳಿಗೆ ಕಾರಣವೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

reasons why cars burning accidentally
ಚಲಿಸುವ ಕಾರುಗಳ ಆಕಸ್ಮಿಕವಾಗಿ ಧಗಧಗಿಸೋದ್ಯಾಕೆ...?

ಹೈದರಾಬಾದ್: ಬೇಸಿಗೆ ಕಾಲದಲ್ಲಿ ಎಲ್ಲೆಂದರಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತವೆ. ಆಕಸ್ಮಿಕವಾಗಿ ಸಂಭವಿಸುವ ಈ ಘಟನೆಗಳಿಂದ ಕೆಲವೊಮ್ಮೆ ಸಾಕಷ್ಟು ಹಾನಿಯ ಜೊತೆಗೆ ಪ್ರಾಣಾಪಾಯ ಕೂಡಾ ಸಂಭವಿಸಬಹುದು.

ಇದರಲ್ಲಿ ಪ್ರಮುಖವಾಗಿ ಕಾರುಗಳು ಅಥವಾ ಇತರ ವಾಹನಗಳು ಆಕಸ್ಮಿಕವಾಗಿ ಅಗ್ನಿ ಅನಾಹುತಕ್ಕೆ ಸುಟ್ಟು ಭಸ್ಮವಾಗುತ್ತವೆ. ಅದರಲ್ಲೂ ಚಲಿಸುತ್ತಿರುವ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡು ಸಮಸ್ಯೆ ಸೃಷ್ಟಿಯಾಗುವ ಸನ್ನಿವೇಶಗಳು ಅಲ್ಲಲ್ಲಿ ನಡೆಯುತ್ತವೆ. ಇಂಥಹ ಘಟನೆಗಳಿಗೆ ಕಾರಣಗಳು ಇಲ್ಲಿವೆ.

  1. ಕಾರುಗಳನ್ನು ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸದೇ ಇರುವುದು
  2. ಕಾರಿನ ಆಯಿಲ್ ಕಾಲಕಾಲಕ್ಕೆ ಬದಲಾಯಿಸದಿರುವುದರಿಂದ
  3. ಸಿಸ್ಟಮ್ಯಾಟಿಕ್ ಆಗಿ ಕಾರಿನಲ್ಲಿ ವೈರಿಂಗ್ ಮಾಡದೇ ಇರುವುದು
  4. ಕಾರಿನಲ್ಲಿ ಕನಿಷ್ಠ 1/4ರಷ್ಟು ಪೆಟ್ರೋಲ್ ಅಥವಾ ಡೀಸೆಲ್​ ಇಲ್ಲದಿರುವುದು
  5. ಕಾರುಗಳನ್ನು ದೀರ್ಘ ಸಮಯದವರೆಗೆ ಅತಿ ವೇಗವಾಗಿ ಓಡಿಸುವುದು
  6. ಕಾರುಗಳಿಗೆ ಅನಧಿಕೃತ ಸಿಎನ್​ಜಿ ಮತ್ತು ಎಲ್​ಪಿಜಿ ಬಳಸುವುದು

ಇವೆಲ್ಲಾ ಕಾರಣಗಳಿಂದ ಕಾರುಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕಾರುಗಳನ್ನು ಸರ್ವೀಸ್ ಮಾಡಿಸುವುದರ ಜೊತೆಗೆ ಕಾರಿನ ವೈರಿಂಗ್, ಆಯಿಲ್ ಬದಲಾವಣೆ, ಅಧಿಕೃತ ಸಿಎನ್​ಜಿ ಮತ್ತು ಎಲ್​ಪಿಜಿ ಬಳಕೆ ಮಾಡಬೇಕಾಗುವುದು ಅನಿವಾರ್ಯವಾಗಿರುತ್ತದೆ.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.