ETV Bharat / bharat

ಅತ್ಯಾಚಾರ ಮಾಡಿದ್ದೀರಿ, ಆದ್ರೆ ನನ್ನನ್ನು ಕೊಲ್ಲಬೇಡಿ; ಕಾಮುಕರ ಬಳಿ ಯುವತಿ ಮನವಿ!

author img

By

Published : Feb 19, 2021, 9:14 PM IST

ಕಾಮುಕರಿಂದ ಅಪಹರಣಕ್ಕೊಳಗಾಗಿರುವ ಯುವತಿಯೋರ್ವಳು ಅವರ ಬಳಿ ತನ್ನ ಕೊಲೆ ಮಾಡದಂತೆ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ.

Women rape
Women rape

ಭೋಪಾಲ್​(ಮಧ್ಯಪ್ರದೇಶ): ದೇಶದಲ್ಲಿ ಮೇಲಿಂದ ಮೇಲೆ ಅತ್ಯಾಚಾರದಂತಹ ಹೇಯ ಕೃತ್ಯ ಬೆಳಕಿಗೆ ಬರುತ್ತಿದ್ದು, ಸದ್ಯ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

2021ರ ಜನವರಿ 18ರಂದು ಕೋಲಾರ ಪೊಲೀಸ್ ಠಾಣಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, 24 ವರ್ಷದ ಯುವತಿ ಮೇಲೆ ನಿರ್ಭಯಾ ರೀತಿಯಲ್ಲಿ ಹಿಂಸಿಸಲಾಗಿದೆ. ಸಂತ್ರಸ್ತೆ ಸಂಜೆ ವಾಕ್ ಮಾಡಲು ತೆರಳಿದ್ದ ವೇಳೆ ಆಕೆಯನ್ನ ಅಪಹರಣ ಮಾಡಿ ರಸ್ತೆ ಪೊದೆಯೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ.

ಓದಿ: 15 ಲಕ್ಷ ರೂ. ಪಡೆದು ಫೇಸ್​​​ಬುಕ್​​ ಪ್ರಿಯಕರನಿಂದ ಬ್ಲಾಕ್​ಮೇಲ್​ ಆರೋಪ... ನ್ಯಾಯಕ್ಕಾಗಿ ಮಹಿಳೆಯ ಕಣ್ಣೀರು!

ಈ ವೇಳೆ ಮಹಿಳೆ ಪ್ರತಿಭಟಿಸಲು ಮುಂದಾಗುತ್ತಿದ್ದಂತೆ ಆಕೆಯ ತಲೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಪ್ರಾಣ ಬಿಕ್ಷೆ ಕೇಳಿರುವ ಯುವತಿ ನೀವು ನನ್ನ ಅತ್ಯಾಚಾರ ಮಾಡಿದ್ದೀರಿ. ಆದರೆ ನನ್ನ ಜೀವ ಉಳಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಈ ವೇಳೆ ಆಕೆಯ ಮೇಲೆ ಕಾಮುಕರು ಅತ್ಯಾಚಾರಗೈದಿದ್ದಾರೆ. ಈ ವೇಳೆ ಆಕೆ ಜೋರಾಗಿ ಕಿರುಚಿದ್ದರಿಂದ ಇತರೆ ಯುವಕರು ಅಲ್ಲಿಗೆ ಬರುತ್ತಿದ್ದಂತೆ ಆರೋಪಿಗಳು ಓಡಿಹೋಗಿದ್ದಾರೆ.

ತದನಂತರ ಸಂತ್ರಸ್ತೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸದ್ಯ ಆಕೆಗೆ ಚಿಕಿತ್ಸೆ ಮುಂದುವರೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರ ತಂಡ ಆರೋಪಿಗಳ ಬಂಧನ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ಹಸ್ತಾಂತರ ಮಾಡಲಾಗಿದೆ.

ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕನೋರ್ವ ಮಹಿಳೆ ಮೇಲೆ ಹಲ್ಲೆ ಸಹ ನಡೆಸಿದ್ದಾನೆ. ಆರೋಪಿಗಳ ವಿರುದ್ಧ ಸೆಕ್ಷನ್​ 376 ಮತ್ತು 307 ಅಡಿ ಕೇಸ್​ ದಾಖಲು ಮಾಡಿಕೊಳ್ಳಲಾಗಿದ್ದು, ಪ್ರಕರಣ ನಿರ್ಲಕ್ಷ್ಯಕ್ಕಾಗಿ ಕೋಲಾರ ಪೊಲೀಸ್ ಠಾಣೆ ಉಸ್ತುವಾರಿ ಸುಧೀರ್ ಅರ್ಜಾರಿಯಾ ಅವರನ್ನ ಅಮಾನತಿನಲ್ಲಿಡಲಾಗಿದೆ. ಆರಂಭದಲ್ಲಿ ಮಹಿಳೆ ಮೇಲೆ ಕಿರುಕುಳ ಎಂಬ ಪ್ರಕರಣ ಮಾತ್ರ ದಾಖಲು ಮಾಡಿಕೊಂಡಿದ್ದರಿಂದ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.