ETV Bharat / bharat

Ram Navami 2023: ಈ ಬ್ಯಾಂಕ್​ ಅಲ್ಲಿ ದುಡ್ಡಲ್ಲ, ಜಮೆಯಾಗತ್ತೆ 'ರಾಮ ನಾಮ'; ವಾರಾಣಾಸಿಯಲ್ಲೊಂದು ವಿಶೇಷ

author img

By

Published : Mar 30, 2023, 5:11 PM IST

ಜೀವನದಲ್ಲಿ ಅಂದುಕೊಂಡ ಆಸೆ ಪೂರೈಕೆಗಾಗಿ ವಾರಾಣಾಸಿಯ ರಾಮ್​​ ರಾಮ್​ಪತಿ ಬ್ಯಾಂಕ್​ನಲ್ಲಿ ಭಕ್ತರು ಸಾಲ ಪಡೆಯಬಹುದು.

Ram Navami 2023: This bank in Varanasi accepts "Ram Naam" as loan repayment
Ram Navami 2023: This bank in Varanasi accepts "Ram Naam" as loan repayment

ವಾರಾಣಾಸಿ: ಬ್ಯಾಂಕ್​ಗಳಲ್ಲಿ ಮನೆ, ಹೊಲ, ಆಸ್ತಿಗಳ ಮೇಲೆ ಸಾಲ ಪಡೆಯುವುದು ಸಾಮಾನ್ಯ. ಆದರೆ, ವಾರಾಣಾಸಿಯ ಈ ಬ್ಯಾಂಕ್​ ಬಲು ವಿಶೇಷ. ಕಾರಣ ಇಲ್ಲಿನ ಜನರು ಆದರ್ಶ ಪುರುಷ ರಾಮನ ಹೆಸರಿನಲ್ಲಿ ಸಾಲ ಪಡೆಯುತ್ತಾರೆ. ಈ ರೀತಿ ದೇವರ ಹೆಸರಿನಲ್ಲಿ ಪಡೆದ ಸಾಲವನ್ನು ಸಾಲಗಾರರು 8 ತಿಂಗಳು ಮತ್ತು 10 ದಿನದಲ್ಲಿ ವಾಪಸ್​ ಮಾಡಬೇಕು. 1926 ರಲ್ಲಿ ರಾಮ ನವಮಿಯ ದಿನದಂದೇ ಬಾಬಾ ಸತ್ಯರಾಮ್ ದಾಸ್ ಅವರ ಸೂಚನೆಯ ಮೇರೆಗೆ ದಾಸ್ ಚನ್ನುಲಾಲ್ ಎನ್ನುವವರು ರಾಮ್ ರಮಾಪತಿ ಬ್ಯಾಂಕ್ ಅನ್ನು ಸ್ಥಾಪಿಸಿದರು. ಪ್ರಸ್ತುತ ಈ ಬ್ಯಾಂಕಿಗೆ ಮ್ಯಾನೇಜರ್​ ಇದ್ದು, ಲಕ್ಷನೂ ಲಕ್ಷ ಸಂಖ್ಯೆಯಲ್ಲಿ ಖಾತೆದಾರರಿದ್ದಾರೆ. ಅವರು ಬ್ಯಾಂಕ್​ನಿಂದ ನೀಡಲಾಗುವ ಕೆಂಪು ಪೆನ್ನು ಮತ್ತು ಪೇಪರ್​ನಲ್ಲಿ 1.25 ಲಕ್ಷ ಬಾರಿ ರಾಮನ ಹೆಸರನ್ನು ಬರೆದು ಖಾತೆಗೆ ಜಮೆ ಮಾಡಬೇಕು.

ರಾಮ್​​ ರಾಮ್​ಪತಿ ಬ್ಯಾಂಕ್
ರಾಮ್​​ ರಾಮ್​ಪತಿ ಬ್ಯಾಂಕ್

96 ವರ್ಷದ ಇತಿಹಾಸ: ಈ ಸಂಬಂಧ ಈಟಿವಿ ಭಾರತ್​ನೊಂದಿಗೆ ಬ್ಯಾಂಕ್​ ಮ್ಯಾನೇಜರ್​ ಸುಮಿತ್​ ಮೆಹರೊತ್ರಾ ಮಾತನಾಡಿದ್ದಾರೆ. ನನ್ನ ಅಜ್ಜನ ಅಜ್ಜ ದಾಸ್​ ಚನ್ನು ಲಾಲ್​ ಜಿ ಈ ಬ್ಯಾಂಕ್​ ಅನ್ನು 96 ವರ್ಷದ ಹಿಂದೆ ಸ್ಥಾಪಿಸಿದರು. ಈ ಬ್ಯಾಂಕ್​ಗೆ ರಾಮ್​​ ರಾಮ್​ಪತಿ ಬ್ಯಾಂಕ್​ ಹೆಸರಿಡಾಗಿದ್ದು, ಜನರು ಇದನ್ನು ವಾಣಿಜ್ಯ ಬ್ಯಾಂಕ್​ ಎಂದು ಭಾವಿಸುತ್ತಾರೆ. ಈ ಬ್ಯಾಂಕ್​ನ ಬಗ್ಗೆ ತಿಳಿಯದ ಮಂದಿ ಇಲ್ಲಿ ವಾಣಿಜ್ಯ ಸಾಲವನ್ನು ನೀಡಲಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಇದು ಆಧ್ಯಾತ್ಮಿಕ ಬ್ಯಾಂಕ್​ ಆಗಿದೆ. ಇಲ್ಲಿ ಹಣಕ್ಕೆ ಮಾನ್ಯತೆ ಇಲ್ಲ. ಈ ಬ್ಯಾಂಕ್​ನಲ್ಲಿ ಯಾವುದೇ ವಿತ್ತೀಯ ವಹಿವಾಟು ನಡೆಯುವುದಿಲ್ಲ. ತಮ್ಮ ಆಸೆ ಈಡೇರಿಕೆಗಾಗಿ ಮಾತ್ರ ಜನರು ಇಲ್ಲಿ ಲೋನ್​ ಪಡೆಯುತ್ತಾರೆ. ಇಲ್ಲಿ ಲೋನ್​ ಪಡೆದ ಬಳಿಕ ಜನರು ತಮ್ಮ ಬೇಡಿಕೆಯನ್ನು ಪೂರೈಸಿಕೊಂಡಿದ್ದಾರೆ.

ರಾಮ್​​ ರಾಮ್​ಪತಿ ಬ್ಯಾಂಕ್
ರಾಮ್​​ ರಾಮ್​ಪತಿ ಬ್ಯಾಂಕ್

ಇಲ್ಲಿ ಜಮೆಯಾಗುವುದು ರಾಮನಾಮ: ರಾಮ್​ ರಾಮಪತಿ ಬ್ಯಾಂಕ್​ ಪ್ರಪಂಚದ ವಿಶಿಷ್ಟ ಬ್ಯಾಂಕ್​ ಆಗಿದೆ. ಈ ಬ್ಯಾಂಕ್​ ಸಾಮಾನ್ಯ ಬ್ಯಾಂಕ್​ನಂತೆ ಎಲ್ಲಾ ಆಫರ್​ ನೀಡುತ್ತದೆ. ಈ ಬ್ಯಾಂಕ್​ಗೂ ಮ್ಯಾನೇಜರ್​ ಇದ್ದು, ಅಕೌಂಟೆಟ್​ ಮತ್ತು ಇತರೆ ಸಿಬ್ಬಂದಿಗಳು ಇದ್ದಾರ. ಇವರು ಬ್ಯಾಂಕ್​ನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಇದು ಸಾಲ ನೀಡುತ್ತದೆ. ಪ್ರಸ್ತುತ 19 ಬಿಲಿಯನ್​, 42 ಕೋಟಿ, 34 ಲಕ್ಷ ಮತ್ತು 25 ಸಾವಿ ಪ್ರತಿಗಳು ರಾಮನ ಹೆಸರಿನಲ್ಲಿ ಇಲ್ಲಿ ಡೆಪಾಸಿಟ್​ ಮಾಡಲಾಗಿದೆ.

ರಾಮ್​​ ರಾಮ್​ಪತಿ ಬ್ಯಾಂಕ್
ರಾಮ್​​ ರಾಮ್​ಪತಿ ಬ್ಯಾಂಕ್

ರಾಮನವಮಿಯ ವಿಶೇಷ ದಿನದಂದು ನೂರಾರು ಜನರು ಈ ಬ್ಯಾಂಕಿಗೆ ಭೇಟಿ ನೀಡಿ ಖಾತೆ ತೆರೆಯುತ್ತಾರೆ. ಇಲ್ಲಿ ಖಾತೆ ತೆರೆಯಲು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು. ಖಾತೆದಾರರಿಗೆ ಮರದಿಮದ ಮಾಡಿದ ಕೆಂಪು ಬಣ್ಣದ ಬೆನ್ನು ಅನ್ನು ನೀಡಲಾಗುವುದು. ಬೆಳಗ್ಗೆ 4ರಿಂದ 7ರವರೆಗೆ ರಾಮ ನಾಮವನ್ನು ಭಕ್ತರು ಬರೆಯಬಹುದು. ರಾಮನ ಹೆಸರನ್ನು ಸರಿಯಾಗಿ 1.25 ಲಕ್ಷ ಬಾರಿ ಬರೆಯಬೇಕು. ಈ ಹೆಸರು ಬರೆಯಲು 8 ತಿಂಗಳು 10 ದಿನದ ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯಲ್ಲಿ ಭಕ್ತರು ಮಾಂಸಹಾರ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ ಆಹಾರವನ್ನು ಸೇವಿಸಬಾರದು. ಈ ಬ್ಯಾಂಕ್​ನಲ್ಲಿ ಲಾಲ್​ ಬಹದ್ದೂರ್​ ಶಾಸ್ತ್ರಿ ಮತ್ತ ಬಾಲಿವುಡ್​ ನಟ ಶತ್ರುಘ್ನ ಸಿನ್ಹಾ ಕುಟುಂಬ ಸದಸ್ಯರು ಕೂಡ ಸಾಲ ಪಡೆದಿದ್ದಾರೆ.

ರಾಮ್​​ ರಾಮ್​ಪತಿ ಬ್ಯಾಂಕ್
ರಾಮ್​​ ರಾಮ್​ಪತಿ ಬ್ಯಾಂಕ್

ಈ ಬ್ಯಾಂಕಿನ ಖಾತೆದಾರರಾಗಿರು ಮೀರಾ ದೇವಿ ಮಾತನಾಡಿ, ರಾಮ ನನ್ನ ಜೀವನಕ್ಕೆ ಸಾಕಷ್ಟ ನೀಡಿದ್ದಾನೆ. ನಾನು ಹುಟ್ಟಿದ ಬಳಿಕ ನನ್ನ ತಾಯಿ ಇಲ್ಲಿ ಸಾಲ ಪಡೆದು 1. 25 ಲಕ್ಷ ಬಾರಿ ರಾಮ ನಾಮ ಬರೆದು ಜಮೆ ಮಾಡಿದ್ದರು. ನಾನು ಕೂಡ ನನ್ನ ಆಸೆಗಳ ಪೂರೈಕೆಗೆ ನಾಲ್ಕು ಬಾರಿ ಸಾಲ ಪಡೆದು ರಾಮನಾಮ ಬರದಿದ್ದೇನೆ. ಇನ್ನು ಹೆಚ್ಚು ಬರೆಯಬೇಕು ಎಂಬ ಆಸೆ ನನ್ನಲಿದೆ ಎಂದಿದ್ದಾರೆ.

ಇದನ್ನೂ ಓದಿ: ಶ್ರೀರಾಮನ ಬದುಕು ಪ್ರತಿ ಯುಗದ ಮಾನವೀಯತೆಗೆ ಸ್ಫೂರ್ತಿ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.