ETV Bharat / bharat

ಸಿಂಗ್​ ಬಂಧಿಸದಿದ್ದರೆ ಜೂನ್ 9 ರಂದು ದೇಶಾದ್ಯಂತ ರೈತ ಪ್ರತಿಭಟನೆ: ಡಬ್ಲ್ಯುಎಫ್‌ಐ ಅಧ್ಯಕ್ಷರ ಮೇಲೆ ದಾಖಲಾದ ಎಫ್​ಐಆರ್​ ಹೀಗಿದೆ..

author img

By

Published : Jun 2, 2023, 10:19 PM IST

ಏಪ್ರೀಲ್​ 28ರಂದ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಎಫ್​ಐಆರ್​ ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

rakesh-tikait-issues-7-day-ultimatum-to-centre-for-arresting-wfi-chief
ಸಿಂಗ್​ ಬಂಧಿಸದಿದ್ದರೆ ಜೂನ್ 9 ರಂದು ದೇಶಾದ್ಯಂತ ರೈತ ಪ್ರತಿಭಟನೆ: ಡಬ್ಲ್ಯುಎಫ್‌ಐ ಅಧ್ಯಕ್ಷರ ಮೇಲೆ ದಾಖಲಾದ ಎಫ್​ಐಆರ್​ ಹೀಗಿದೆ..

ನವದೆಹಲಿ: ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಬೆಂಬಲಿಸಿರುವ ರೈತ ಮುಖಂಡರು, ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಕೇಂದ್ರಕ್ಕೆ ಏಳು ದಿನಗಳ ಗಡುವನ್ನು ಕೊಟ್ಟದ್ದಾರೆ. ಅಲ್ಲದೆ, ಸಿಂಗ್ ಅವರನ್ನು ಬಂಧಿಸದಿದ್ದಲ್ಲಿ ಜೂನ್ 9 ರಂದು ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, ಸರ್ಕಾರವು ಕುಸ್ತಿಪಟುಗಳ ಕುಂದು ಕೊರತೆಗಳನ್ನು ಪರಿಹರಿಸಿ ಸಿಂಗ್ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ಜೂನ್​ 9ರಂದು ದೆಹಲಿಯ ಜಂತರ್‌ಮಂತರ್‌ಗೆ ಕುಸ್ತಿಪಟುಗಳೊಂದಿಗೆ ರೈತ ಮುಖಂಡರು ತೆರಳಲಿದ್ದು, ದೇಶಾದ್ಯಂತ ಪಂಚಾಯಿತಿ ನಡೆಸಲಾಗುವುದು ಎಂದು ಟಿಕಾಯತ್ ತಿಳಿಸಿದರು. "ಸರ್ಕಾರವು ಸಿಂಗ್ ಅವರನ್ನು ಬಂಧಿಸಬೇಕು ಅಥವಾ ದೊಡ್ಡ ಪ್ರತಿಭಟನೆಯನ್ನು ಎದುರಿಸಲು ಸಿದ್ಧರಾಗಿರಬೇಕು. ಯಾವುದನ್ನು ಬೇಕಾದರೂ ಸರ್ಕಾರ ಆಯ್ಕೆ ಮಾಡಿಕೊಳ್ಳಲಿ" ಎಂದು ಟಿಕಾಯತ್​ ಹೇಳಿದ್ದಾರೆ.

ಇದಕ್ಕೂ ಮುನ್ನ ರೈತ ಮುಖಂಡರು ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಖಾಪ್ ಮಹಾ ಪಂಚಾಯತ್‌ಗಳನ್ನು ನಡೆಸಿ ಕುಸ್ತಿಪಟುಗಳಿಗೆ ಬೆಂಬಲವನ್ನು ವ್ಯಕ್ತಪಡಿಸಲು ಮತ್ತು ಈ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಅಲ್ಲದೆ, ಸಂಯುಕ್ತ ಕಿಸಾನ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ರೈತರು ರಾಷ್ಟ್ರಪತಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು ಮತ್ತು ಹರಿಯಾಣ, ಪಂಜಾಬ್‌ನ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿದರು. ಕುಸ್ತಿಪಟುಗಳ ಬೇಡಿಕೆಯನ್ನು ಈಡೇರಿಸದಿದ್ದರೆ ದೆಹಲಿಯ ಗಡಿಯನ್ನು ನಿರ್ಬಂಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾಗಿರುವ ಪ್ರಕರಣಗಳು: ಎರಡು ಎಫ್‌ಐಆರ್‌ಗಳು ಕೋರ್ಟ್​ ನಿರ್ದೇಶನದಂತೆ ಸಿಂಗ್​ ವಿರುದ್ಧ ದಾಖಲಾಗಿದೆ. ಡಬ್ಲ್ಯುಎಫ್‌ಐ ಮುಖ್ಯಸ್ಥರು ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೇ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಿರುಕುಳದ ಕನಿಷ್ಠ 10 ದೂರುಗಳು ದಾಖಲಾಗಿವೆ. ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ದೂರುಗಳಲ್ಲಿ ಅನುಚಿತವಾಗಿ ಸ್ಪರ್ಶಿಸುವುದು, ಹುಡುಗಿಯರ ಎದೆಯ ಮೇಲೆ ಕೈ ಹಾಕುವುದು, ಅವರ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಹಾಗೂ ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ.

ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಈ ದೂರುಗಳನ್ನು ಏಪ್ರಿಲ್ 21 ರಂದು ದಾಖಲಿಸಲಾಗಿದೆ. ಆದರೆ, ಅವರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ಏಪ್ರಿಲ್ 28 ರಂದು ದಾಖಲಿಸಲಾಗಿದೆ. ಎಫ್‌ಐಆರ್‌ಗಳನ್ನು ಸೆಕ್ಷನ್ 354, 354 (ಎ), 354 (ಡಿ) ಮತ್ತು 34 ರ ಅಡಿ ಮೂರು ವರ್ಷ ಜೈಲು ಶಿಕ್ಷೆಯ ಪ್ರಕರಣಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಎಫ್‌ಐಆರ್‌ನಲ್ಲಿ ಆರು ಒಲಿಂಪಿಯನ್‌ಗಳ ಆರೋಪಗಳನ್ನು ಉಲ್ಲೇಖಿಸಿದ್ದರೆ, ಎರಡನೆಯದು ಅಪ್ರಾಪ್ತ ವಯಸ್ಕನ ತಂದೆ ಮಾಡಿದ ಆರೋಪಗಳನ್ನು ಉಲ್ಲೇಖಿಸಲಾಗಿದೆ. ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಬ್ರಿಜ್ ಭೂಷಣ್ ಸಿಂಗ್ ತನ್ನನ್ನು ಬಿಗಿಯಾಗಿ ಹಿಡಿದಿದ್ದರು ಎಂದು ಅಪ್ರಾಪ್ತರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಸಿಂಗ್​ ಅವಳ ಭುಜವನ್ನು ಒತ್ತಿ ಮತ್ತು ಉದ್ದೇಶಪೂರ್ವಕವಾಗಿ ಅವಳನ್ನು ಅನುಚಿತವಾಗಿ ಮುಟ್ಟಿದ್ದರು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ: 1983ರ ವಿಶ್ವಕಪ್ ವಿಜೇತ ತಂಡದಿಂದ ಕುಸ್ತಿಪಟುಗಳಿಗೆ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.