ವರದಕ್ಷಿಣೆ ನೀಡುವ 75 ಲಕ್ಷ ರೂ.ದಲ್ಲಿ 'Girl's Hostel'​ ಕಟ್ಟಿಸಿ... ವಧುವಿನ ಡಿಮ್ಯಾಂಡ್​ಗೊಂದು ಹ್ಯಾಟ್ಸಪ್​!

author img

By

Published : Nov 25, 2021, 9:53 PM IST

Updated : Nov 27, 2021, 11:54 AM IST

Rajasthan Bride Asks Girls hostel instead of Dowry

ಮಗಳ ಮದುವೆ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ ಲಕ್ಷ ಲಕ್ಷ ಹಣ ನೀಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೋರ್ವ ವಧು ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೈಪುರ(ರಾಜಸ್ಥಾನ): ಮದುವೆ ಮಾಡುವ ಸಂದರ್ಭದಲ್ಲಿ ವರನ ಕಡೆಯವರಿಗೆ ವಧುವಿನ ಕುಟುಂಬಸ್ಥರು ಲಕ್ಷಾಂತರ ರೂಪಾಯಿ ವರದಕ್ಷಿಣೆ ರೂಪದಲ್ಲಿ ನೀಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೋರ್ವ ವಧು ತನ್ನ ಗಂಡನಿಗೆ ನೀಡುವ ವರದಕ್ಷಿಣೆ ಹಣದಲ್ಲಿ ವಿದ್ಯಾರ್ಥಿನಿಗಳಿಗೋಸ್ಕರ ಹಾಸ್ಟೆಲ್​ ಕಟ್ಟಿಸುವಂತೆ ಕೇಳಿಕೊಂಡಿದ್ದಾಳೆಂದು ವರದಿಯಾಗಿದೆ.

Rajasthan Bride Asks Girls hostel instead of Dowry
ಅಂಜಲಿ ಕನ್ವರ್​​

ಬಾರ್ಮರ್​​ ನಗರದ ಕಿಶೋರ್​ ಸಿಂಗ್ ಕಾನೋಡ್​ ಅವರ ಪುತ್ರಿ ಅಂಜಲಿ ಕನ್ವರ್​​ ನವೆಂಬರ್​​ 21ರಂದು ಪ್ರವೀಣ್​ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರದಿವೊಂದರ ಪ್ರಕಾರ, ಅಂಜಲಿ ಮದುವೆಯಲ್ಲಿ ವರದಕ್ಷಿಣೆಗಾಗಿ ಮೀಸಲಿಟ್ಟಿರುವ ಹಣದ ಬಗ್ಗೆ ತಂದೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆ ಎಲ್ಲ ಹಣ ಬಾಲಕಿಯರ ಹಾಸ್ಟೆಲ್​ ನಿರ್ಮಾಣ ಮಾಡಲು ಬಳಸುವಂತೆ ತಿಳಿಸಿದ್ದಾರೆ. ಮಗಳ ಆಸೆಯಂತೆ ಅಂಜಲಿ ತಂದೆ ಕಿಶೋರ್​ ಸಿಂಗ್​ ಒಪ್ಪಿಗೆ ಸೂಚಿಸಿ, 75 ಲಕ್ಷ ರೂ. ಕಟ್ಟಡ ನಿರ್ಮಾಣಕ್ಕಾಗಿ ನೀಡಿದ್ದಾರೆ.

ಇದನ್ನೂ ಓದಿ: ವಧು-ವರನಿಗೋಸ್ಕರ ಬೆಳ್ಳಿ ಶೂ,ಬೆಲ್ಟ್​ & ಪರ್ಸ್: ಜೋಧಪುರ ವ್ಯಾಪಾರಿ ಆಭರಣಕ್ಕೆ ಇನ್ನಿಲ್ಲದ ಡಿಮ್ಯಾಂಡ್

ಅಂಜಲಿ ತೆಗೆದುಕೊಂಡಿರುವ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮದುವೆ ಸಮಾರಂಭದ ವೇಳೆ ಅಂಜಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಅತಿಥಿಗಳಿಗೂ ತಿಳಿಸಲಾಗಿದೆ. ಈ ನಿರ್ಧಾರಕ್ಕಾಗಿ ಶಹಬ್ಬಾಸ್​​ಗಿರಿ ನೀಡಿದ್ದಾರೆ.

Rajasthan Bride Asks Girls hostel instead of Dowry
ಕಿಶೋರ್​ ಸಿಂಗ್ ಕಾನೋಡ್

ಲಭ್ಯವಾಗಿರುವ ಮಾಹಿತಿ ಪ್ರಕಾರ, ರಾಜಸ್ಥಾನದ ಎನ್​ಎಚ್​​ 68ನಲ್ಲಿ ಹಾಸ್ಟೆಲ್​ ನಿರ್ಮಾಣಕ್ಕಾಗಿ ಕಾನೋಡ್​​ ಈಗಾಗಲೇ 1 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆಂದು ತಿಳಿದು ಬಂದಿದೆ. ಉಳಿದ ಕಾಮಗಾರಿ ಪೂರ್ಣಗೊಳಿಸಲು 50ರಿಂದ 75 ಲಕ್ಷ ರೂ. ಹೆಚ್ಚುವರಿ ಅಗತ್ಯವಿದ್ದು, ಇದೀಗ ಮಗಳು ಆ ಹಣ ನೀಡಿದ್ದಾರೆ.

Last Updated :Nov 27, 2021, 11:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.