ETV Bharat / bharat

ದೇಶದ ಅತಿ ದೊಡ್ಡ ನೌಕಾನೆಲೆಯಾಗಲಿದೆ ಸೀಬರ್ಡ್​; ಸಚಿವ ರಾಜನಾಥ ಸಿಂಗ್

author img

By

Published : Jun 25, 2021, 1:53 PM IST

ಸ್ವದೇಶಿ ಏರ್​ಕ್ರಾಫ್ಟ್ ಕ್ಯಾರಿಯರ್​ ಬಗ್ಗೆ ಮಾತನಾಡಿದ ರಾಜನಾಥ ಸಿಂಗ್, ಮುಂದಿನ ವರ್ಷ ಸ್ವಾತಂತ್ರ್ಯ ದಿನಕ್ಕೆ 75 ವರ್ಷ ತುಂಬಲಿದ್ದು, ಸ್ವದೇಶಿ ಏರ್​ಕ್ರಾಫ್ಟ್ ಕ್ಯಾರಿಯರ್​ ಮುಂದಿನ ವರ್ಷ ಸೇರ್ಪಡೆ ಮಾಡಲಾಗುತ್ತದೆ ಎಂದಿದ್ದಾರೆ.

rajanath-singh-reaction-after-visit-to-karwar
ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ

ನವದೆಹಲಿ: ಕೇಂದ್ರ ಸರ್ಕಾರ ಬಲಿಷ್ಠವಾದ ನೌಕಾಪಡೆಯನ್ನು ಕಟ್ಟಲು ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಗುರುವಾರ ಕಾರವಾರದ ಸೀಬರ್ಡ್​ ನೌಕಾನೆಲೆಗೆ ಭೇಟಿ ನೀಡಿದ ನಂತರ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಸೀಬರ್ಡ್ ನೌಕಾನೆಲೆ ಭವಿಷ್ಯದಲ್ಲಿ ಭಾರತದ ಅತಿ ದೊಡ್ಡ ನೌಕಾನೆಲೆಯಾಗಲಿದ್ದು, ಇದು ಹಿಂದೂಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಕೆಲಸ ಮಾಡುತ್ತಿದೆ. ಮುಂದಿನ ವರ್ಷ ಸ್ವಾತಂತ್ರ್ಯ ದಿನಕ್ಕೆ 75 ವರ್ಷ ತುಂಬಲಿದ್ದು, ಸ್ವದೇಶಿ ಏರ್​ಕ್ರಾಫ್ಟ್ ಕ್ಯಾರಿಯರ್​ ಮುಂದಿನ ವರ್ಷ ಸೇರ್ಪಡೆ ಮಾಡಲಾಗುತ್ತದೆ ಎಂದು ಅವರು ಹೇಳಿದರು

ಇದನ್ನೂ ಓದಿ: ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಈಗಲಾದರೂ ಜನರ ಕ್ಷಮೆ ಕೇಳಲಿ; ಸಿಎಂ ಬಿಎಸ್​ವೈ

ಭಾರತವು ಸ್ಥಳೀಯ ಉದ್ಯಮವನ್ನು ಬಳಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ. ಭಾರತದಲ್ಲಿ ನಿರ್ಮಿಸಲಾಗುತ್ತಿರುವ 44 ಯುದ್ಧನೌಕೆಗಳ ಪೈಕಿ 42 ರಲ್ಲಿ ಸ್ವದೇಶಿ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ವಿನ್ಯಾಸ, ನೌಕೆಗಳಲ್ಲಿ ಬಳಸುವ ಉಕ್ಕು, ಶಸ್ತ್ರಾಸ್ತ್ರಗಳನ್ನು 75ರಷ್ಟು ಸ್ಥಳೀಯವಾಗಿ ಬಳಸಿಕೊಳ್ಳಲಾಗಿದೆ. ಈ ಮೂಲಕ ಸ್ವದೇಶಿಯತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.