ETV Bharat / bharat

ಹೆಂಡತಿ ಮಕ್ಕಳನ್ನು 'ಫಾಲೋ' ಮಾಡದ ರಾಜ್ ಕುಂದ್ರಾ!

author img

By

Published : Jan 16, 2022, 3:57 PM IST

46 ವರ್ಷದ ಅವರು ತಮ್ಮ ಪತ್ನಿ ಶಿಲ್ಪಾ ಹಾಗೂ ಮಗ ವಿಯಾನ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನೂ ಸಹ ಅನುಸರಿಸುತ್ತಿಲ್ಲ. ವರದಿಯ ಪ್ರಕಾರ, ಶಿಲ್ಪಾ ಅವರು ಸಹ-ಮಾಲೀಕರಾಗಿರುವ ರೆಸ್ಟೋರೆಂಟ್‌ನ ಖಾತೆಯೊಂದನ್ನು ಮಾತ್ರ ಅನುಸರಿಸುತ್ತಿದ್ದಾರೆ..

ಹೆಂಡತಿ ಮಕ್ಕಳನ್ನು 'ಫಾಲೋ' ಮಾಡದ ರಾಜ್ ಕುಂದ್ರಾ!
ಹೆಂಡತಿ ಮಕ್ಕಳನ್ನು 'ಫಾಲೋ' ಮಾಡದ ರಾಜ್ ಕುಂದ್ರಾ!

ಹೈದರಾಬಾದ್ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಕಳೆದ ನವೆಂಬರ್‌ನಲ್ಲಿ ತಮ್ಮ ಖಾತೆಯನ್ನು ಅಳಿಸಿದ ನಂತರ ಈಗ ಮತ್ತೆ ಇನ್‌ಸ್ಟಾಗ್ರಾಮ್‌ಗೆ ಮರಳಿದ್ದಾರೆ. ಕುಂದ್ರಾ ಅಶ್ಲೀಲ ಚಿತ್ರ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ನಂತರ ತಮ್ಮ ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ಗಳನ್ನು ಅಳಿಸಿ ಹಾಕಿದ್ದರು.

ಅವರು ಇನ್‌ಸ್ಟಾಗ್ರಾಮ್‌ಗೆ ಮರಳಿದ್ದರೂ ಸಹ ರಾಜ್ ತಮ್ಮ ಪ್ರೊಫೈಲ್ ಅನ್ನು ಖಾಸಗಿಯಾಗಿ ಇರಿಸಿಕೊಂಡಿದ್ದಾರೆ. ಕುಂದ್ರಾ ಅವರ ಪರಿಶೀಲಿಸಿದ ಖಾತೆಯು 977k ಅನುಯಾಯಿಗಳನ್ನು ಹೊಂದಿದೆ. ಆದರೆ, ಅವರು ಪ್ರಸ್ತುತ ಒಂದು ಖಾತೆಯನ್ನು ಮಾತ್ರ ಅನುಸರಿಸುತ್ತಿದ್ದಾರೆ.

46 ವರ್ಷದ ಅವರು ತಮ್ಮ ಪತ್ನಿ ಶಿಲ್ಪಾ ಹಾಗೂ ಮಗ ವಿಯಾನ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನೂ ಸಹ ಅನುಸರಿಸುತ್ತಿಲ್ಲ. ವರದಿಯ ಪ್ರಕಾರ, ಶಿಲ್ಪಾ ಅವರು ಸಹ-ಮಾಲೀಕರಾಗಿರುವ ರೆಸ್ಟೋರೆಂಟ್‌ನ ಖಾತೆಯೊಂದನ್ನು ಮಾತ್ರ ಅನುಸರಿಸುತ್ತಿದ್ದಾರೆ.

ಹೆಂಡತಿ ಮಕ್ಕಳನ್ನು 'ಫಾಲೋ' ಮಾಡದ ರಾಜ್ ಕುಂದ್ರಾ!
ಹೆಂಡತಿ ಮಕ್ಕಳನ್ನು 'ಫಾಲೋ' ಮಾಡದ ರಾಜ್ ಕುಂದ್ರಾ!

ಇದನ್ನೂ ಓದಿ: ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿಗೆ ಕೊರೊನಾ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದ ನಂತರ ಈ ಎಲ್ಲಾ ಬೆಳವಣಿಗೆ ಕಂಡು ಬಂದಿದೆ. ಅವರಿಗೆ ಜಾಮೀನು ಮಂಜೂರು ಮಾಡಿದ ನಂತರ ಹಿಮಾಚಲ ಪ್ರದೇಶದಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿ ಸಾರ್ವಜನಿಕವಾಗಿ ಕಾಣಿಸಿದ್ದರು. ದಂಪತಿ ಇತ್ತೀಚೆಗೆ ಶಿರಡಿಯ ಸಾಯಿಬಾಬಾ ದೇವಸ್ಥಾನದಲ್ಲಿ ದೇವರ ಆಶೀರ್ವಾದವನ್ನೂ ಪಡೆದಿದ್ದರು.

ರಾಜ್ ಅವರನ್ನು ಜುಲೈ 19, 2021ರಂದು ಪೊಲೀಸರು ಇತರ 11 ಜನರೊಂದಿಗೆ ಅಶ್ಲೀಲ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿದ್ದರು. ಸೆಪ್ಟೆಂಬರ್‌ನಲ್ಲಿ ಮುಂಬೈ ನ್ಯಾಯಾಲಯವು 50,000 ರೂಪಾಯಿಗಳ ಶ್ಯೂರಿಟಿಯ ಮೇಲೆ ಜಾಮೀನು ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.