ETV Bharat / bharat

ಹೆಚ್ಚಿನ ನೆಮ್ಮದಿ ನೀಡದ ಮಳೆ; ಪರಿಸ್ಥಿತಿ ಸುಧಾರಿಸಿದರೂ ದೆಹಲಿ ವಾಯುಗುಣಮಟ್ಟ ಇನ್ನೂ ಕಳಪೆ!

author img

By ETV Bharat Karnataka Team

Published : Nov 11, 2023, 10:45 AM IST

Delhis AQI still in very poor category; ಆನಂದ್​ ವಿಹಾರ್​​ ಸ್ಟೇಷನ್​ನಲ್ಲಿ ವಾಯು ಗುಣಮಟ್ಟ ವರ್ಗ ಈ ಹಿಂದೆ ಪಿಎಂ 2.5 ದಾಖಲಾಗಿದ್ದು, ಕಳಪೆ ವರ್ಗದಲ್ಲಿ ಕಂಡುಬಂದಿದೆ.

Rain provided much needed respite from the escalating air pollution
Rain provided much needed respite from the escalating air pollution

ನವದೆಹಲಿ: ವಾಯು ಮಾಲಿನ್ಯದಿಂದ ತತ್ತರಿಸುತ್ತಿರುವ ನವದೆಹಲಿಯ ಹಲವು ಭಾಗದಲ್ಲಿ ಶುಕ್ರವಾರ ಸುರಿದ ಮಳೆ ಕೊಂಚ ಧೂಳಿನ ಪ್ರಮಾಣವನ್ನು ಕಡಿಮೆ ಮಾಡಿದೆ. ಆದರೆ, ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮತ್ತೆ ಕಳಪೆ ವರ್ಗದಲ್ಲಿ ಕಂಡು ಬಂದಿದೆ. ದೆಹಲಿಯ ಒಟ್ಟಾರೆ ವಾಯುಮಾಲಿನ್ಯ ಮಟ್ಟ 339 ಆಗಿದೆ ಎಂದು ಎಸ್​ಎಎಫ್​ಎಆರ್​​ ತಿಳಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ಆನಂದ್​ ವಿಹಾರ್​​ ಸ್ಟೇಷನ್​ನಲ್ಲಿ ವಾಯು ಗುಣಮಟ್ಟ ವರ್ಗ ಈ ಹಿಂದೆ ಪಿಎಂ 2.5 ಕಂಡು ಬಂದಿದ್ದು, ಕಳಪೆ ವರ್ಗದಲ್ಲಿ ಕಂಡು ಬಂದಿತ್ತು. ಇದೀಗ 137 ಆಗಿದ್ದು, ಮಧ್ಯಮ ವರ್ಗದಲ್ಲಿದೆ.

ಶನಿವಾರ ಬೆಳಗ್ಗೆ ಶುದ್ಧ ಮತ್ತು ನೀಲಿ ಆಕಾಶ ಕಂಡು ಬಂದಿದೆ. ಕಳೆದೆರಡು ವಾರಗಳಿಂದ ಇದ್ದ ಮಬ್ಬು ಕವಿದ ವಾತಾವರಣವೂ ಇಂದು ಸೂರ್ಯನ ಬೆಳಕಿನಿಂದ ಕಂಡು ಬಂದಿದೆ. ದೆಹಲಿಯಲ್ಲಿ ಗುರುವಾರ ಎಕ್ಯೂಐ 437 ದಿನವಾಗಿದ್ದು, ಶನಿವಾರ ಬೆಳಗ್ಗೆ ವಾಯು ಗುಣಮಟ್ಟ 219 ದಾಖಲಾಗಿದೆ.

ಶುಕ್ರವಾರ ಬಿದ್ದ ಮಳೆ ಮತ್ತು ಗಾಳಿಯ ವೇಗವು ಸ್ವಲ್ಪಮಟ್ಟಿನ ಮಾಲಿನ್ಯ ಮತ್ತು ಧೂಳಿನ ಪ್ರಮಾಣ ತಗ್ಗಿಸಲು ಸಹಾಯ ಮಾಡಿದೆ. ಶುಕ್ರವಾರ ಗುರುಗ್ರಾಮದಲ್ಲಿ 181, ಗಾಜಿಯಬಾದ್​​ನಲ್ಲಿ 159, ಗ್ರೇಟರ್​​ ನೋಯ್ಡಾದಲ್ಲಿ 131, ಫರಿದಾಬಾದ್​​ 174 ವಾಯುಗುಣಮಟ್ಟ ಕಂಡು ಬಂದಿದೆ.

ವಾಯು ಗುಣಮಟ್ಟ ಎಷ್ಟಿದ್ದರೆ ಉತ್ತರ? ಎಕ್ಯೂಐ 0 ಯಿಂದ 50 ಅನ್ನು ಉತ್ತಮ, 51 ರಿಂದ 100 ತೃಪ್ತಿದಾಯಕ ಮತ್ತು 101ರಿಂದ 200 ಮಧ್ಯಮದಾಯಕ ಮತ್ತು 201 ಮತ್ತು 300 ಕಳಪೆ, 301 ರಿಂದ 400 ತೀರ ಕಳಪೆ ಎಂದು ಗುರುತಿಸಲಾಗುತ್ತದೆ.

ಶುಕ್ರವಾರದ ಸಣ್ಣ ಮಳೆಯು ವಾಯುಗುಣ ಮಟ್ಟ ಸ್ವಲ್ಪ ಸುಧಾರಣೆ ಕಂಡಿದೆ. ನವೆಂಬರ್​ 11ರಂದು ಶನಿವಾರ ಗಾಳಿಯ ವೇಗ ಗಂಟೆಗೆ 15 ಕಿಲೋ ಮೀಟರ್​ ಆಗಿದೆ. ಈ ಬಾರಿ ಅವಧಿ ಪೂರ್ವಕವಾಗಿ ವಾಯುಗುಣಮಟ್ಟ ಗಂಭೀರವಾಗಿತ್ತು.

ರಾಷ್ಟ್ರರಾಜಧಾನಿಯಲ್ಲಿ ವಾಯು ಮಾಲಿನ್ಯ ಸುಧಾರಣೆ ಕಂಡು ಬಂದಿರುವ ಹಿನ್ನೆಲೆ ಬೆಸ- ಸಮ ಕಾರು ಯೋಜನೆಯನ್ನು ಮುಂದೂಡಲಾಗಿದ್ದು, ಪರಿಸ್ಥಿತಿ ಅವಲೋಕಿಸಿ ಇದರ ನಿರ್ಧಾರ ನಡೆಸಲಾಗುವುದು ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್​ ರೈ ತಿಳಿಸಿದ್ದಾರೆ.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ T3 ಪ್ರದೇಶದಲ್ಲಿನ ಗಾಳಿಯ ಗುಣಮಟ್ಟವು ಮಧ್ಯಮ ವಿಭಾಗದಲ್ಲಿದ್ದು ಪಿಎಂ 2.5 171 ಮತ್ತು ಪಿಎಂ 10 120 ಕ್ಕೆ ಇತ್ತು. ಆದರೆ ಕಾರ್ಬನ್ ಮೊನಾಕ್ಸೈಡ್ ಉತ್ತಮ ಆಗಿದ್ದು, 44 ತಲುಪಿದೆ. ಎನ್​ಒ2 ಮಟ್ಟವು 21 ಇದೆ. (ಎಎನ್​ಐ-ಪಿಟಿಐ)

ಇದನ್ನೂ ಓದಿ: ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವ ಪ್ರಮಾಣ ಅತಿ ಹೆಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.