ETV Bharat / bharat

ಕೇಂದ್ರ ಸರ್ಕಾರ 'ಲಸಿಕೆ ತಾರತಮ್ಯ ತಂತ್ರ' ಅನುಸರಿಸುತ್ತಿದೆ: ರಾಹುಲ್ ಗಾಂಧಿ ಕಿಡಿ

author img

By

Published : Apr 20, 2021, 2:39 PM IST

ಲಸಿಕೆ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಟ್ವೀಟ್​ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Rahul Gandhi
ರಾಹುಲ್ ಗಾಂಧಿ

ನವದೆಹಲಿ: ಲಸಿಕೆ ಉದಾರೀಕರಣ ತಂತ್ರದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಲಸಿಕೆ ತಾರತಮ್ಯ ತಂತ್ರ" ಎಂದು ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

18 ವರ್ಷದಿಂದ 45 ವರ್ಷದವರೆಗಿನ ವ್ಯಕ್ತಿಗಳಿಗೆ ಕೊರೊನಾ ಲಸಿಕೆ ಉಚಿತವಿಲ್ಲ. ಲಸಿಕೆ ತಾರತಮ್ಯ ತಂತ್ರ ಅನುಸರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Rahul Gandhi
ರಾಹುಲ್​ ಗಾಂಧಿ ಟ್ವೀಟ್​

ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಳ್ಳಲು ಅರ್ಹರು ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಕೋವಿಡ್​ -19 ವ್ಯಾಕ್ಸಿನೇಷನ್‌ನ ಉದಾರೀಕರಣ ಮತ್ತು ವೇಗವರ್ಧಿತ 3ನೇ ಹಂತದ ಕಾರ್ಯತಂತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇನ್ನು ಈ ಹೊಸ ತಂತ್ರದ ಪ್ರಕಾರ, ಲಸಿಕೆಗಳ ಬೆಲೆ, ಸಂಗ್ರಹಣೆ, ಅರ್ಹತೆ ಮತ್ತು ಆಡಳಿತವನ್ನು ಸುಲಭವಾಗಿ ಮಾಡಲಾಗಿದೆ. ಲಸಿಕೆ ತಯಾರಕರು ತಮ್ಮ ಪೂರೈಕೆಯ ಶೇಕಡಾ 50ರಷ್ಟು ಹಣವನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಪೂರ್ವ ಘೋಷಿತ ಬೆಲೆಗೆ ಬಿಡುಗಡೆ ಮಾಡಲು ಅಧಿಕಾರ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.