ETV Bharat / bharat

Nehru Death Anniversary: ಮೊದಲ ಪ್ರಧಾನಿ, ಮುತ್ತಾತನಿಗೆ ರಾಹುಲ್​ ನಮನ

author img

By

Published : May 27, 2021, 11:57 AM IST

ದೆಹಲಿಯ ಶಾಂತಿವನದಲ್ಲಿರುವ ನೆಹರೂ ಸ್ಮಾರಕಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿ, ಪುಷ್ಪನಮನ ಸಲ್ಲಿಸಿದರು. ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಅವರು, "ಕೆಟ್ಟದ್ದನ್ನು ತಡೆಯದಿದ್ದರೆ ಅದು ಬೆಳೆಯುತ್ತದೆ, ಕೆಟ್ಟದ್ದನ್ನು ನೋಡಿಯೂ ಸಹಿಸಿಕೊಂಡರೆ ಅದು ಇಡೀ ವ್ಯವಸ್ಥೆಯನ್ನು ವಿಷಪೂರಿತಗೊಳಿಸುತ್ತದೆ" ಎಂಬ ತನ್ನ ಮುತ್ತಾತನ ಮಾತು ಹಂಚಿಕೊಂಡಿದ್ದಾರೆ.

Rahul Gandhi pays homage to Pandit Jawaharlal Nehru
ಮೊದಲ ಪ್ರಧಾನಿ, ಮುತ್ತಾತನಿಗೆ ನಮಿಸಿದ ರಾಹುಲ್​ ಗಾಂಧಿ

ನವದೆಹಲಿ: ಭಾರತದ ಮೊದಲ ಪ್ರಧಾನಿ ಪಂಡಿತ್​ ಜವಾಹರ್​ಲಾಲ್​ ನೆಹರೂ ಅವರ 57ನೇ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಗೌರವ ನಮನ ಸಲ್ಲಿಸಿದ್ದಾರೆ.

ನೆಹರೂ ಸ್ಮಾರಕಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿ

ದೆಹಲಿಯ ಶಾಂತಿವನದಲ್ಲಿರುವ ನೆಹರೂ ಸ್ಮಾರಕಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿ, ಪುಷ್ಪನಮನ ಸಲ್ಲಿಸಿದರು. ಇದಕ್ಕೂ ಮುನ್ನ ಟ್ವೀಟ್​ ಮಾಡಿದ್ದ ಅವರು, "ಕೆಟ್ಟದ್ದನ್ನು ತಡೆಯದಿದ್ದರೆ ಅದು ಬೆಳೆಯುತ್ತದೆ, ಕೆಟ್ಟದ್ದನ್ನು ನೋಡಿಯೂ ಸಹಿಸಿಕೊಂಡರೆ ಅದು ಇಡೀ ವ್ಯವಸ್ಥೆಯನ್ನು ವಿಷಪೂರಿತಗೊಳಿಸುತ್ತದೆ" ಎಂಬ ತನ್ನ ಮುತ್ತಾತನ ಮಾತು ಹಂಚಿಕೊಂಡಿದ್ದಾರೆ.

1889 ರ ನವೆಂಬರ್ 14 ರಂದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ (ಇಂದಿನ ಪ್ರಯಾಗ್​ರಾಜ್​) ಜನಿಸಿದ ನೆಹರೂ ಅವರು, 1919 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ, ಮಹಾತ್ಮ ಗಾಂಧಿಯವರೊಂದಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಭಾರತದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದ ನೆಹರು, ದೇಶದಲ್ಲಿ ಕಾಂಗ್ರೆಸ್​ ಪ್ರಬಲವಾಗಿ ಬೇರೂರುವಲ್ಲಿ ಮುಂದಾಳತ್ವ ವಹಿಸಿದ್ದರು.

  • “Evil unchecked grows, evil tolerated poisons the whole system."

    Remembering the wise words of Pandit Jawaharlal Nehru on his death anniversary. pic.twitter.com/aEgHM7hx6T

    — Rahul Gandhi (@RahulGandhi) May 27, 2021 " class="align-text-top noRightClick twitterSection" data=" ">

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ನೆಹರೂ, 1964ರ ಮೇ 27 ರಂದು ತಾವು ಇಹಲೋಕ ತ್ಯಜಿಸುವ ವರೆಗೂ ಆಡಳಿತ ನಡೆಸಿದ್ದರು. ಭಾರತದ ಪ್ರಧಾನಿಯಾಗಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೀರ್ತಿ ಜವಾಹರ್​ಲಾಲ್​ ನೆಹರೂ ಅವರಿಗೆ ಸಲ್ಲುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.