ಭಾರತ್​ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಪುಟ್ಟ ಬಾಲಕಿ: ಚಪ್ಪಲಿ ಧರಿಸಲು ನೆರವಾದ ರಾಹುಲ್​

author img

By

Published : Sep 18, 2022, 10:14 PM IST

rahul-gandhi-fixes-young-girls-sandals-as-she-marches-along

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿಯ ಚಪ್ಪಲಿಯನ್ನು ಸರಿಪಡಿಸುವ ಮೂಲಕ ರಾಹುಲ್ ಗಾಂಧಿ ಸರಳತೆ ಮೆರೆದಿದ್ದಾರೆ.

ಅಲಪ್ಪುಳ (ಕೇರಳ): ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ತಮಿಳುನಾಡಿನಿಂದ ಕೇರಳಕ್ಕೆ ಪ್ರವೇಶಿಸಿದ್ದು, ಮಾರ್ಗದುದ್ದಕ್ಕೂ ಸಾಕಷ್ಟು ಜನರು ಯಾತ್ರೆಗೆ ಸಾಥ್​ ನೀಡುತ್ತಿದ್ದಾರೆ. ಭಾರತ್​ ಜೋಡೆ ಯಾತ್ರೆಯಲ್ಲಿ ವೃದ್ಧರಿಂದ ಹಿಡಿದು ಮಕ್ಕಳ ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಇದರ ನಡುವೆ ತಮ್ಮೊಂದಿಗೆ ಯಾತ್ರೆಯಲ್ಲಿ ನಡೆದುಕೊಂಡು ಬಂದ ಪುಟ್ಟ ಬಾಲಕಿಯೊಬ್ಬಳಿಗೆ ಚಪ್ಪಲಿ ಧರಿಸಲು ರಾಹುಲ್​ ನೆರವಾಗಿರುವ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ.

  • सादगी...सरलता...सौम्यता

    देश जोड़ने का इरादा लिए वे कर्मपथ पर बढ़ रहे हैं
    देश को एकजुट करने की ऐतिहासिक इबारत गढ़ रहे हैं#BharatJodoYatra pic.twitter.com/qCHFaDs5jx

    — Congress (@INCIndia) September 18, 2022 " class="align-text-top noRightClick twitterSection" data=" ">

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಭಾನುವಾರ 11ನೇ ದಿನದ ಭಾರತ್​ ಜೋಡೋ ಯಾತ್ರೆ ನಡೆಯಿತು. ಈ ವೇಳೆ ತನ್ನ ತಂದೆಯೊಂದಿಗೆ ಯಾತ್ರೆಯಲ್ಲಿ ಪುಟ್ಟು ಬಾಲಕಿ ಪಾಲ್ಗೊಂಡು ರಾಹುಲ್​ ಗಾಂಧಿ ಒಟ್ಟಿಗೆ ನಡೆದುಕೊಂಡು ಬರುತ್ತಿದ್ದರು. ಆದರೆ, ಆಗ ಬಾಲಕಿಯ ಚಪ್ಪಲಿ ಸಡಿಲಿಕೆಯಾಗಿ ನಡೆಯಲು ತೊಂದರೆ ಅನುಭವಿಸುತ್ತಿದ್ದಳು. ಇದನ್ನು ಗಮನಿಸಿದ ರಾಹುಲ್ ತಕ್ಷಣವೇ ತಾವೇ ಬಾಗಿ ಬಾಲಕಿಯ ಚಪ್ಪಲಿಯನ್ನು ಸರಿಪಡಿಸಿದ್ದಾರೆ.

  • #BharatJodoYatra में दिखा एक खूबसूरत लम्हा...

    हम कदम से कदम मिला रहे हैं, हर मुश्किल को आसान कर, सभी को साथ लेकर आगे बढ़ रहे हैं, क्योंकि हम सभी को अपना मानते हैं, उनका ख़्याल रखना जानते हैं। pic.twitter.com/2YYHjEmvlV

    — Congress (@INCIndia) September 18, 2022 " class="align-text-top noRightClick twitterSection" data=" ">

ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದರ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ತಮ್ಮ ಮಗಳು ಬೆಳಗ್ಗೆ 4 ಗಂಟೆಗೆ ಎದ್ದಿದ್ದಾಳೆ ಎಂದು ಬಾಲಕಿಯ ತಂದೆ ಹೇಳುತ್ತಿರುವುದೂ ಸಹ ದಾಖಲಾಗಿದೆ. ಜೊತೆಗೆ ಅವರು (ರಾಹುಲ್​) ತುಂಬಾ ಸರಳ ವ್ಯಕ್ತಿ. ವಿಐಪಿಯಂತೆ ಏನೂ ಇಲ್ಲ. ಭಾರತಕ್ಕೆ ಅಂತಹ ನಾಯಕನ ಅಗತ್ಯವಿದೆ ಎಂದು ತನ್ನ ಮಗಳನ್ನು ಎತ್ತಿಕೊಂಡ ಆ ವ್ಯಕ್ತಿ ಹೇಳಿದ್ದಾರೆ.

ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಾಗೂ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ. ಅನೇಕ ಕಾಂಗ್ರೆಸ್​ ನಾಯಕರು ರಾಹುಲ್​ ಬಾಲಕಿಯ ಚಪ್ಪಲಿಯನ್ನು ಸರಿಪಡಿಸುವ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಅನೇಕ ಜನರು ರಾಹುಲ್​ ಸರಳತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಖುಲಾಯಿಸಿದ ಅದೃಷ್ಟ: 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.