ETV Bharat / bharat

'ಮೋದಿ' ಉಪನಾಮ ಕುರಿತ ವಿವಾದಿತ ಹೇಳಿಕೆ: ಮಾನಹಾನಿ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾದ ರಾಹುಲ್

author img

By

Published : Jun 24, 2021, 12:14 PM IST

ತನ್ನ ಮೇಲೆ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಅಂತಿಮ ಹೇಳಿಕೆ ನೀಡಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಸೂರತ್‌ ನ್ಯಾಯಾಲಯಕ್ಕೆ ಬಂದಿದ್ದಾರೆ.

Rahul Gandhi
Rahul Gandhi

ನವದೆಹಲಿ: 'ಮೋದಿ' ಉಪನಾಮ (surname) ಹೇಳಿಕೆ ಸಂಬಂಧಿಸಿದಂತೆ ದಾಖಲಾದ ಮಾನಹಾನಿ ಪ್ರಕರಣದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಗುಜರಾತ್​ನ ಸೂರತ್‌ ನ್ಯಾಯಾಲಯಕ್ಕೆ ಆಗಮಿಸಿದರು. ಕೈ ನಾಯಕನ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಪ್ರಕರಣ ದಾಖಲಿಸಿದ್ದರು.

  • “The whole secret of existence is to have no fear.”

    — Rahul Gandhi (@RahulGandhi) June 24, 2021 " class="align-text-top noRightClick twitterSection" data=" ">

ಈ ಸಂಬಂಧ ಅಂತಿಮ ಹೇಳಿಕೆ ದಾಖಲಿಸುವಂತೆ ಸೂರತ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್​ ಒಂದು ವಾರದ ಹಿಂದೆ ರಾಹುಲ್ ಗಾಂಧಿಗೆ ಸೂಚಿಸಿತ್ತು. ಇಂದು ನ್ಯಾಯಾಲಯಕ್ಕೆ ಆಗಮಿಸುವ ಮುನ್ನ 'ಅಸ್ತಿತ್ವದ ಸಂಪೂರ್ಣ ರಹಸ್ಯಕ್ಕೆ ಯಾವುದೇ ಭಯವಿರುವುದಿಲ್ಲ' ಎಂದು ರಾಗಾ ಟ್ವೀಟ್​ ಮಾಡಿದ್ದಾರೆ.

ಪ್ರಕರಣ ಹಿನ್ನೆಲೆ:

2019 ರ ಏಪ್ರಿಲ್ 13ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ರಾಹುಲ್​ ಗಾಂಧಿ, 'ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ... ಇವರೆಲ್ಲರೂ 'ಮೋದಿ'ಎಂಬುದನ್ನು ಸಾಮಾನ್ಯ ಉಪನಾಮವಾಗಿ ಹೊಂದಿದ್ದಾರೆ. ಈ ರೀತಿಯ ಸರ್​ನೇಮ್​​ ಹೊಂದಿರುವವರೆಲ್ಲರೂ ಕಳ್ಳರು' ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

ರಾಹುಲ್ ಗಾಂಧಿ ಇಡೀ ಮೋದಿ ಸಮುದಾಯವನ್ನು ದೂಷಿಸಿದ್ದಾರೆ ಎಂದು ಆರೋಪಿಸಿ ಸೂರತ್​ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ರಾಗಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. 2019 ರ ಅಕ್ಟೋಬರ್​ನಲ್ಲಿ ಕೋರ್ಟ್ ಮುಂದೆ ಹಾಜರಾಗಿದ್ದ ರಾಹುಲ್​, ಇದೊಂದು ಸುಳ್ಳು 'ಮಾನಹಾನಿ ಪ್ರಕರಣ' ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.