ETV Bharat / bharat

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ದರೋಡೆ: ಬಂದೂಕು ತೋರಿಸಿ 19 ಕೋಟಿ ದೋಚಿ ಪರಾರಿಯಾದ ಖದೀಮರು

author img

By ETV Bharat Karnataka Team

Published : Dec 1, 2023, 10:12 PM IST

ಮಣಿಪುರದಲ್ಲಿನ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ವೊಂದಕ್ಕೆ ನುಗ್ಗಿದ ದರೋಡೆ ಕೋರರ ಗುಂಪು ಬಂದೂಕು ತೋರಿಸಿ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ದರೋಡೆ
ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ದರೋಡೆ

ತೇಜ್​ಪುರ್​: ಮುಸುಕು ದಾರಿ ದರೋಡೆ ಕೋರರ ಗುಂಪೊಂದು ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ನುಗ್ಗಿ ಹಣ​ ದೋಚಿ ಪರಾರಿಯಾಗಿರುವ ಘಟನೆ ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಮುಖವಾಡ ಧರಿಸಿದ್ದ ದುಷ್ಕರ್ಮಿಗಳು ಶಸ್ತ್ರಸಜ್ಜಿತವಾಗಿ ಬ್ಯಾಂಕ್​ಗೆ ನುಗ್ಗಿ ಬರೋಬ್ಬರಿ 18.85 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಬ್ಯಾಂಕ್​ ಹೊರಗೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದರೋಡೆ ಕೋರರ ಗುಂಪು ಬ್ಯಾಂಕ್‌ ಒಳಗೆ ಪ್ರವೇಶಿಸುತ್ತಿರುವ ವಿಡಿಯೋ ಸೆರೆಯಾಗಿದೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್​​ ಅಧಿಕಾರಿ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ 10 ಜನರ ಅಪರಿಚಿತ ಮುಸುಕುಧಾರಿಗಳ ಗುಂಪು ಗುರುವಾರ (ನಿನ್ನೆ) ಸಂಜೆ 5.40ಕ್ಕೆ ಉಖ್ರುಲ್‌ನ ವ್ಯೂಲ್ಯಾಂಡ್ ಪ್ರದೇಶದಲ್ಲಿನ ಪಂಜಾಬ್​ ನ್ಯಾಷನಲ್​ ಬ್ಯಾಂಕ್‌ಗೆ ನುಗ್ಗಿದ್ದಾರೆ. ಮುಖಕ್ಕೆ ಮಾಸ್ಕ್​ ಧರಿಸಿದ್ದ ದುಷ್ಕರ್ಮಿಗಳು ಬೇರೊಂದು ಭಾಷೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ, ಕೆಲ ದುಷ್ಕರ್ಮಿಗಳ ಏಕಾಏಕಿ ತಮ್ಮ ಬಳಿಯಿದ್ದ ಬಂದೂಕುಗಳನ್ನು ತೋರಿಸಿ ನೌಕರರನ್ನು ಎಲ್ಲಿಯೂ ಕದಲದಂತೆ ತಡೆದಿದ್ದಾರೆ, ಉಳಿದ ದರೋಡೆಕೋರರು ನಗದು ಸಂಗ್ರಹಿಸುತ್ತಿದ್ದರು ಎಂದು ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.

ದರೋಡೆ ನಡೆದ ವೇಳೆ ಬ್ಯಾಂಕ್‌ನಲ್ಲಿ ನೌಕರರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಸಂಜೆ 4 ಗಂಟೆಗೆ ಬ್ಯಾಂಕ್​ ವ್ಯವಹಾರಗಳು​ ಮುಕ್ತಾಯಗೊಳ್ಳುವ ಕಾರಣ ಗ್ರಾಹಕರೂ ಇರಲಿಲ್ಲ. ಮ್ಯಾನೇಜರ್ ಕೂಡ ರಜೆಯಲ್ಲಿದ್ದರು. ಬ್ಯಾಂಕ್​ ಆವರಣದಲ್ಲಿ ಆರಂಭದಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿಗಳಿದ್ದರೂ, ಘಟನೆ ಸಂಭವಿಸಿದಾಗ ಮುಖ್ಯ ಗೇಟ್‌ನಲ್ಲಿ ಒಬ್ಬರೇ ಸಿಬ್ಬಂದಿ ಇದ್ದು, ಇತರರು ಚಹಾ ಸೇವಿಸಲು ತೆರಳಿದ್ದರು. ಈ ವೇಳೆ ದರೋಡೆಕೋರರು ಬ್ಯಾಂಕಿನ ಹಿಂಬದಿಯ ಗೇಟ್ ಮೂಲಕ ಒಳ ಪ್ರವೇಶಿಸಿದ್ದಾರೆ.

ದರೋಡೆಕೋರರು ನೌಕರರು ಮತ್ತು ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಶೌಚಾಗೃಹದಲ್ಲಿ ಬಂಧಿಸಿದ್ದಾರೆ. ಈ ವೇಳೆ, 18.85 ಕೋಟಿ ರೂ.ಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಘಟನೆಗೂ ಮುನ್ನ ಬ್ಯಾಂಕ್‌ ಕಟ್ಟಡದ ಹಿಂದೆ ಇಬ್ಬರು ಅನುಮಾನಾಸ್ಪದ ರೀತಿಯಲ್ಲಿ ತಿರಾಗಡಿರುವುದು ಗಮನಿಸಿರುವುದಾಗಿ ಅಲ್ಲಿಯ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಈ ಕುರಿತು ಉಖ್ರುಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ದರೋಡೆಕೋರರ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಘಟಾನ ಪ್ರದೇಶದಲ್ಲಿ ಮತ್ತು ಬ್ಯಾಂಕ್​ ಇರುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಗನ್​​ ತೋರಿಸಿ 12 ಕೋಟಿ ರೂ. ಲೂಟಿ ಮಾಡಿ ಎಸ್ಕೇಪ್​ ಆದ ದರೋಡೆಕೋರರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.