ETV Bharat / bharat

ಮೊದಲ ಕ್ಯಾಬಿನೆಟ್​​ನಲ್ಲೇ ಭಗವಂತ್​​ ಮಾನ್​​​ ಸರ್ಕಾರದ ದಿಟ್ಟ ನಡೆ.. 25 ಸಾವಿರ ಸರ್ಕಾರಿ ಹುದ್ದೆ ಭರ್ತಿಗೆ ಅಂಗೀಕಾರ

author img

By

Published : Mar 19, 2022, 4:46 PM IST

ಪಂಜಾಬ್​ನಲ್ಲಿ ಸರ್ಕಾರ ರಚನೆ ಮಾಡಿದ ಬಳಿಕ ನಡೆಸಿದ ಮೊದಲ ಸಚಿವ ಸಂಪುಟದಲ್ಲೇ ಭಗವಂತ್ ಮಾನ್​ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 25 ಸಾವಿರ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ಅಂಗೀಕಾರ ನೀಡಿದೆ..

Punjab Chief Minister Bhagwant Mann cabinet
Punjab Chief Minister Bhagwant Mann cabinet

ಚಂಡೀಗಢ(ಪಂಜಾಬ್​) : ಪಂಜಾಬ್​ನಲ್ಲಿ ಹೊಸದಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಭಗವಂತ್ ಮಾನ್​​ ನೇತೃತ್ವದ ಸರ್ಕಾರ ಪ್ರತಿದಿನ ಒಂದಿಲ್ಲೊಂದು ಹೊಸ ನಿರ್ಧಾರ ಕೈಗೊಳ್ಳುತ್ತಿದೆ.

ಈಗಾಗಲೇ ಭ್ರಷ್ಟಾಚಾರ ತಡೆಗೆ ರಾಜ್ಯದ ಜನರಿಗೆ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಆರಂಭ ಮಾಡಿರುವ ಆಮ್ ಆದ್ಮಿ, ಇಂದಿನ ಚೊಚ್ಚಲ ಸಚಿವ ಸಂಪುಟದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಭಗವಂತ್ ಮಾನ್ ಕ್ಯಾಬಿನೆಟ್​​ಗೆ ಇಂದು ಬೆಳಗ್ಗೆ 10 ಶಾಸಕರು ಸಚಿವರಾಗಿ ಸೇರ್ಪಡೆಯಾಗಿದ್ದು, ಇದರ ಬೆನ್ನಲ್ಲೇ ಅವರೊಂದಿಗೆ ಚೊಚ್ಚಲ ಸಚಿವ ಸಂಪುಟ ಸಭೆ ನಡೆಸಲಾಯಿತು.

ಈ ವೇಳೆ, ಪಂಜಾಬ್​ ಪೊಲೀಸ್​ ಇಲಾಖೆಯಲ್ಲಿ ಖಾಲಿ ಇರುವ 10 ಸಾವಿರ ಹುದ್ದೆ ಹಾಗೂ ಇತರೆ ಇಲಾಖೆಯಲ್ಲಿನ 15 ಸಾವಿರ ಹುದ್ದೆ ಸೇರಿ ಒಟ್ಟು 25 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ ಪ್ರಸ್ತಾವನೆಯನ್ನ ಕ್ಯಾಬಿನೆಟ್​​ನಲ್ಲಿ ಅಂಗೀಕಾರ ಮಾಡಲಾಗಿದೆ. ಹೀಗಾಗಿ, ಮುಂದಿನ ಕೆಲ ದಿನಗಳಲ್ಲೇ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

  • The Cabinet has passed the proposal of providing a total of 25,000 govt jobs, including 10,000 vacancies in the Punjab Police department & 15,000 vacancies in other govt departments: Punjab CM Bhagwant Mann, after his first cabinet meeting

    (Source: CMO) pic.twitter.com/hJgn4TVppa

    — ANI (@ANI) March 19, 2022 " class="align-text-top noRightClick twitterSection" data=" ">

ಸಚಿವ ಸಂಪುಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಭಗವಂತ್ ಮಾನ್​ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಭ್ರಷ್ಟರಿಗೆ ಹೊಸ ಸಿಎಂ ಶಾಕ್: ಜನರಿಗೆ ತನ್ನದೇ ವಾಟ್ಸಾಪ್‌ ನಂಬರ್‌ ನೀಡಿ ದೂರು ಸಲ್ಲಿಸಲು ಅವಕಾಶ

ಕಳೆದ ಕೆಲ ದಿನಗಳ ಹಿಂದೆ ಪಂಜಾಬ್​ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್​​ ಆದ್ಮಿ ಪಕ್ಷ 117 ಕ್ಷೇತ್ರಗಳ ಪೈಕಿ ಒಟ್ಟು 92 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ ಸರ್ಕಾರ ರಚನೆ ಮಾಡಿದೆ.

ಈಗಾಗಲೇ ಕಾರ್ಯೋನ್ಮುಖರಾಗಿರುವ ಭಗವಂತ್ ಮಾನ್​, ರಾಜ್ಯದ ಮಾಜಿ ಸಚಿವರು, ಶಾಸಕರು ತಾವು ಉಳಿದುಕೊಂಡಿರುವ ಸರ್ಕಾರಿ ಬಂಗಲೆ, ಫ್ಲ್ಯಾಟ್ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ. ಇದಕ್ಕೂ ಮೊದಲು ರಾಜ್ಯದಲ್ಲಿನ ವಿಐಪಿ ಸಂಸ್ಕೃತಿ ತೆಗೆದು ಹಾಕುವ ಉದ್ದೇಶದಿಂದ ಪ್ರಮುಖರಿಗೆ ನೀಡಲಾಗಿದ್ದ ಭದ್ರತೆ ವಾಪಸ್​ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.