ETV Bharat / bharat

ಏಮ್ಸ್ ಐಸಿಯುನಿಂದ ರಾಷ್ಟ್ರಪತಿ ಕೋವಿಂದ್​ ವಿಶೇಷ​ ವಾರ್ಡ್​ಗೆ ಶಿಫ್ಟ್​

author img

By

Published : Apr 3, 2021, 11:58 AM IST

ಮಾ.30ರಂದು ಬೈಪಾಸ್​ ಸರ್ಜರಿಗೊಳಗಾಗಿದ್ದ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಏಮ್ಸ್ ಐಸಿಯುನಿಂದ ವಿಶೇಷ​ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದೆ.

President Kovind was shifted from ICU to a special room in AIIMS
ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್

ನವದೆಹಲಿ: ಬೈಪಾಸ್‌ ಸರ್ಜರಿಗೆ ಒಳಗಾಗಿದ್ದ ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್ ಅವರನ್ನು ಇಂದು ದೆಹಲಿಯ ಏಮ್ಸ್​ನ ತೀವ್ರ ನಿಗಾ ಘಟಕ (ಐಸಿಯು)ದಿಂದ ವಿಶೇಷ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ.

ದಿನದಿಂದ ದಿನಕ್ಕೆ ಕೋವಿಂದ್ ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಏಮ್ಸ್ ವೈದ್ಯರು ಅವರ ಮೇಲೆ ನಿಗಾ ಇರಿಸಿದ್ದು, ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ರಾಷ್ಟ್ರಪತಿ ಭವನ ಮಾಹಿತಿ ನೀಡಿದೆ.

ಹೆಚ್ಚಿನ ಓದಿಗೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್‌‌ಗೆ ಯಶಸ್ವಿ ಬೈಪಾಸ್‌ ಸರ್ಜರಿ

ಮಾರ್ಚ್ 26 ರಂದು ಎದೆ ನೋವು ಕಾಣಿಸಿಕೊಂಡಿದ್ದ ಕಾರಣ ದೆಹಲಿಯ ಸೇನಾ ಸಂಶೋಧನಾ ಮತ್ತು ರೆಫರಲ್ (ಆರ್​ಆರ್) ​ಆಸ್ಪತ್ರೆಗೆ ರಾಷ್ಟ್ರಪತಿ ಅವರನ್ನು ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್​ಗೆ ಸ್ಥಳಾಂತರಗೊಂಡಿದ್ದರು. ಮಾ.30ರಂದು ಬೈಪಾಸ್​ ಸರ್ಜರಿಗೊಳಗಾಗಿ, ಐಸಿಯುನಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.