ETV Bharat / bharat

Pornography case: ಸತತ 8 ಗಂಟೆ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ವಿಚಾರಣೆ

author img

By

Published : Aug 7, 2021, 11:54 AM IST

ರಾಜ್​ ಕುಂದ್ರಾ ಪ್ರಮುಖ ಆರೋಪಿಯಾಗಿರುವ ಪೋರ್ನೋಗ್ರಫಿ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶರ್ಲಿನ್ ಚೋಪ್ರಾ ಅವರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Pornography case: Sherlyn Chopra's eight-hour interrogation
Pornography case: ಸತತ 8 ಗಂಟೆ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ವಿಚಾರಣೆ

ಮುಂಬೈ: ಬಾಲಿವುಡ್ ನಟಿ ಶರ್ಲಿನ್ ಚೋಪ್ರಾ ಅವರನ್ನು ರಾಜ್​ ಕುಂದ್ರಾ ಅವರ ಪೋರ್ನೋಗ್ರಫಿ ಪ್ರಕರಣದಲ್ಲಿ ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದು, ಅಗತ್ಯ ಬಿದ್ದಾಗ ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ನೀಡಿದ್ದಾರೆ.

ಶುಕ್ರವಾರ ಮುಂಬೈ ಪೊಲೀಸ್​ನ ಪ್ರಾಪರ್ಟಿ ಸೆಲ್ ರಾತ್ರಿ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಅವರೊಂದಿಗೆ ಇದ್ದ ಸಂಪರ್ಕದ ಬಗ್ಗೆ ಪ್ರಶ್ನೆ ಮಾಡಲಾಗಿದೆ.

ಆರ್ಮ್​​ಪ್ರೈಮ್​​​ ಮೀಡಿಯಾದ ಬಗ್ಗೆಯೂ ಪೊಲೀಸರು ಪ್ರಶ್ನಿಸಿದ್ದು, ಅದರಲ್ಲಿನ ನಿಯಮಗಳು ಮತ್ತು ಷರತ್ತುಗಳೇನು? ಎಷ್ಟು ವಿಡಿಯೋಗಳನ್ನು ಆರ್ಮ್ಸ್​​ಪ್ರೈಮ್​ನಲ್ಲಿ ಚಿತ್ರೀಕರಿಸಿದ್ದೀರಿ ಎಂಬ ಬಗ್ಗೆ ಮಾಹಿತಿ ಕೇಳಿದ್ದಾರೆ.

ಶೆರ್ಲಿನ್ ಚೋಪ್ರಾ ಇದೇ ವರ್ಷ ಏಪ್ರಿಲ್​ನಲ್ಲಿ ರಾಜ್​ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದ ಅವರು ರಾಜ್ ಕುಂದ್ರಾ ಅವರ ಪೋರ್ನೋಗ್ರಫಿ ಪ್ರಕರಣದಲ್ಲಿನ ಬಲಿಪಶುಗಳಾದ ಮಹಿಳೆಯರ ನೆರವಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: 'ಬಡವ ರಾಸ್ಕಲ್' ಸಿನಿಮಾಗೆ ಡಾಲಿ ಧನಂಜಯ್ 'ಉಡುಪಿ ಹೋಟೆಲ್..' ಹಾಡು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.