ಸಿಕಂದರಾಬಾದ್​​​​ ಹಿಂಸಾಚಾರ.. ಮಾಸ್ಟರ್​ ಮೈಂಡ್​ ಬಂಧನ ಸಾಧ್ಯತೆ: ವಯೋಮಿತಿ ಇಳಿಕೆಯೇ ದಾಳಿಗೆ ಕಾರಣ?

author img

By

Published : Jun 23, 2022, 10:13 AM IST

ಸಿಕಂದರಾಬಾದ್​​​​ ಹಿಂಸಾಚಾರ
ಸಿಕಂದರಾಬಾದ್​​​​ ಹಿಂಸಾಚಾರ ()

ಕೆಲವು ಅಕಾಡೆಮಿಗಳು ವಾಟ್ಸ್​ಆ್ಯಪ್​​ ಗ್ರೂಪ್‌ಗಳಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಬಿಹಾರದಲ್ಲಿ ನಡೆದ ಗಲಭೆಗಳ ಕ್ಲಿಪ್‌ಗಳನ್ನು ಪೋಸ್ಟ್ ಮಾಡಿವೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಇಂತಹ ವಿಡಿಯೋಗಳಿಂದ ಸೇನಾ ಆಕಾಂಕ್ಷಿಗಳು ಪ್ರಚೋದನೆಗೆ ಒಳಗಾಗಿ ಜೂನ್ 17 ರಂದು ರೈಲು ನಿಲ್ದಾಣದಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಿದರು ಎಂದು ಡಿಮಾಂಡ್ ವರದಿಯಲ್ಲಿ ಹೇಳಲಾಗಿದೆ.

ಹೈದರಾಬಾದ್​: ಕೇಂದ್ರ ಸರ್ಕಾರವು ಗರಿಷ್ಠ ವಯೋಮಿತಿಯನ್ನು ಇಳಿಕೆ ಘೋಷಣೆ ಮಾಡಿದ ನಂತರ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಆಂದೋಲನಕಾರರು ಅವಾಂತರ ಸೃಷ್ಟಿಸಿದ್ದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ವರದಿ ಪ್ರಕಾರ, ಬಿಹಾರದಲ್ಲಿ ಮಾಡಿದಂತೆ ಬೋಗಿಗಳನ್ನು ಸುಡಲು ಸಂಚು ರೂಪಿಸಲಾಗಿತ್ತು. ಇದಕ್ಕೆ ಖಾಸಗಿ ತರಬೇತಿ ಕೇಂದ್ರಗಳು ಪ್ರಚೋದನೆ ನೀಡಿವೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.

ಇದೇ ವೇಳೆ ರೈಲ್ವೆ ನಿಲ್ದಾಣದ ಮೇಲೆ ದಾಳಿಗೆ ಖಾಸಗಿ ತರಬೇತಿ ಅಕಾಡೆಮಿಯೊಂದರ ಡಿಫೆನ್ಸ್ ಅಕಾಡೆಮಿ ನಿರ್ದೇಶಕರ ಪಾತ್ರದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಕ್ಷಣಾ ಅಕಾಡೆಮಿಯ ನಿರ್ವಾಹಕರು ಯುವಕರನ್ನು ಹಿಂಸಾತ್ಮಕ ಪ್ರತಿಭಟನೆಗೆ ಪ್ರೇರೇಪಿಸಿದ್ದಾರೆ ಎಂದು ಸಿಕಂದರಾಬಾದ್ ರೈಲ್ವೆ ಪೊಲೀಸರು ಹೇಳಿದ್ದಾರೆ.

ಕೆಲವು ಅಕಾಡೆಮಿಗಳು ವಾಟ್ಸ್​ಆ್ಯಪ್​​ ಗ್ರೂಪ್‌ಗಳಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಬಿಹಾರದಲ್ಲಿ ನಡೆದ ಗಲಭೆಗಳ ಕ್ಲಿಪ್‌ಗಳನ್ನು ಪೋಸ್ಟ್ ಮಾಡಿವೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಇಂತಹ ವಿಡಿಯೋಗಳಿಂದ ಸೇನಾ ಆಕಾಂಕ್ಷಿಗಳು ಪ್ರಚೋದನೆಗೆ ಒಳಗಾಗಿ ಜೂನ್ 17 ರಂದು ರೈಲು ನಿಲ್ದಾಣದಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಿದರು ಎಂದು ಡಿಮಾಂಡ್ ವರದಿಯಲ್ಲಿ ಹೇಳಲಾಗಿದೆ.

ರಿಮಾಂಡ್​ ವರದಿಯಲ್ಲಿ ಇರುವುದೇನು?: ಇದಲ್ಲದೇ ಅಗ್ನಿಪಥ್ ಯೋಜನೆ ಜಾರಿಗೆ ಬಂದರೆ ರಕ್ಷಣಾ ತರಬೇತಿ ಅಕಾಡೆಮಿಗಳು ಬಾಗಿಲು ಮುಚ್ಚುತ್ತವೆ ಎಂಬ ಭೀತಿ ಹಿನ್ನೆಲೆಯಲ್ಲಿ ಅಕಾಡೆಮಿಗಳು ಹೋರಾಟಕ್ಕೆ ತಿದಿ ಒತ್ತಿದ್ದಾರೆ ಎಂಬ ಅಂಶ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಹೀಗಾಗಿಯೇ ರೈಲ್ವೇ ಸ್ಟೇಷನ್ ಬ್ಲಾಕ್, ಇಂಡಿಯನ್ ಆರ್ಮಿ ಗ್ರೂಪ್, ಹಕಿಂಪೇಟ್ ಆರ್ಮಿ ಸೋಲ್ಜರ್ಸ್ ಗ್ರೂಪ್, ಚಲೋ ಸಿಕಂದರಾಬಾದ್ ಎಆರ್‌ಒ 3 ಗ್ರೂಪ್, ಆರ್ಮಿ ಜಿಪಿ 2021 ಮಾರ್ಚ್ ರ‍್ಯಾಲಿ ಗ್ರೂಪ್ ಮತ್ತು ಸಿಇಇ ಸೋಲ್ಜರ್ಸ್ ಗ್ರೂಪ್‌ನಂತಹ ಹಲವಾರು ವಾಟ್ಸ್​ಆ್ಯಪ್​ ಗುಂಪುಗಳನ್ನು ಸ್ಥಾಪಿಸಲಾಗಿತ್ತು. ಅಗ್ನಿಪಥ್ ಮೂಲಕ ಅಗ್ನಿವೀರರ ನೇಮಕಾತಿಯನ್ನು ವಿರೋಧಿಸುವ ಸಂದೇಶಗಳನ್ನು ಈ ಗುಂಪುಗಳಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ರಿಮಾಂಡ್ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರತಿಭಟನಾಕಾರರು ಮಾಡಿದ್ದೇನು?: ಪ್ರತಿಭಟನಾಕಾರರು ಲೊಕೊಮೊಟಿವ್ ಇಂಜಿನ್​ಗಳನ್ನು ಸುಡಲು ಪ್ರಯತ್ನಿಸಿದರು. ಇದು ಪೊಲೀಸರನ್ನು ಗುಂಡು ಹಾರಿಸಲು ದಾರಿ ಮಾಡಿಕೊಟ್ಟಿತು ಎಂಬ ಅಂಶವನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಗುಂಡಿನ ದಾಳಿಯಲ್ಲಿ ದಾಮೆರ ರಾಕೇಶ್ ಸಾವನ್ನಪ್ಪಿದ್ದು, ಗಾಯಾಳುಗಳನ್ನು ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾಮರೆಡ್ಡಿ ಜಿಲ್ಲೆಯ ಎಲ್ಲರೆಡ್ಡಿ ನಿವಾಸಿ ಮಧುಸೂದನ್ ಪ್ರತಿಭಟನೆಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನಾಕಾರರೆಲ್ಲ 20 ವಯಸ್ಸಿನವರು: ಪ್ರತಿಭಟನಾಕಾರರ ಬಳಿಯಿದ್ದ ಸುಮಾರು 43 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ವರದಿ ತಯಾರಿಸಿದ್ದಾರೆ. ವಿಧ್ವಂಸಕ ಕೃತ್ಯದಿಂದ 20 ಕೋಟಿ ರೂಪಾಯಿ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈಗಾಗಲೇ 45 ಮಂದಿಯನ್ನು ಬಂಧಿಸಿ ಕಸ್ಟಡಿಗೆ ಕಳುಹಿಸಲಾಗಿದೆ. ಇನ್ನು 11 ಮಂದಿ ಪರಾರಿಯಾಗಿದ್ದಾರೆ. ಬಹುತೇಕ ಆರೋಪಿಗಳು 20ರ ಆಸುಪಾಸಿನವರು.

ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವರು ಯಾರು ಎಂಬುದರ ಕುರಿತು ರಕ್ಷಣಾ ಅಕಾಡೆಮಿಯ ಉಸ್ತುವಾರಿಯ ವಿವರಗಳನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಂಗಾರೆಡ್ಡಿ, ಕರೀಂನಗರ, ಖಮ್ಮಂ ಮತ್ತು ವಾರಂಗಲ್ ಜಿಲ್ಲೆಗಳ ರಕ್ಷಣಾ ಅಕಾಡೆಮಿಗಳ ಪ್ರತಿನಿಧಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಅವರು ಗುರುತಿಸಿದ್ದಾರೆ. ವಿವಿಧ ಜಿಲ್ಲೆಗಳ ಸುಮಾರು 1,500 ಯುವಕರನ್ನು ಸಿಕಂದರಾಬಾದ್ ರೈಲು ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿ ಬಂಧಿಸಲಾಗಿದೆ.

ಇದನ್ನು ಓದಿ:ಅಗ್ನಿಪಥ ರೋಷಾಗ್ನಿಗೆ ಕೃಷಿ ಬಿಕ್ಕಟ್ಟಿನ ಕೋಪಾಗ್ನಿಯೇ ಕಾರಣ..?

ಸುಬ್ಬರಾವ್ ವಿಚಾರಣೆ: ಈ ನಡುವೆ ಪೊಲೀಸರು ಸಿಕಂದರಾಬಾದ್ ಪ್ರತಿಭಟನೆಯ ಹಿಂದಿನ ಮಾಸ್ಟರ್ ಮೈಂಡ್ ಅವುಲಾ ಸುಬ್ಬರಾವ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಾಯಿ ಡಿಫೆನ್ಸ್ ಅಕಾಡೆಮಿ ನಿರ್ದೇಶಕ ಅವುಲಾ ಸುಬ್ಬರಾವ್ ಬೆಂಬಲ ನೀಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಅವರು ಸಂಗ್ರಹಿಸಿದ ಪ್ರಾಥಮಿಕ ಸಾಕ್ಷ್ಯಗಳು ಮತ್ತು ಬಂಧಿತ ಆರೋಪಿಗಳ ಹೇಳಿಕೆಗಳನ್ನು ಬುಧವಾರ ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ.

ಸುಬ್ಬರಾವ್ ಜೊತೆಗೆ ಸಾಯಿ ಅಕಾಡೆಮಿ ವಕ್ತಾರ ಶಿವ ಕೂಡ ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ವಿಧ್ವಂಸಕ ಕೃತ್ಯದ ಹಿಂದಿನ ದಿನ (ಜೂನ್ 16) ಅವರು ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಇವರೆಲ್ಲ ಸೇನಾ ಅಭ್ಯರ್ಥಿಗಳೊಂದಿಗೆ ಪ್ರತ್ಯೇಕ ಫೋಟೋಗಳನ್ನು ತೆಗೆದುಕೊಂಡಿರುವುದು ವಾಟ್ಸ್​ಆ್ಯಪ್​​ ಗ್ರೂಪ್‌ ವೊಂದರಲ್ಲಿ ಪ್ರಸಾರವಾಗಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪ್ರತಿಭಟನೆಯ ಮಾಸ್ಟರ್​ ಮೈಂಡ್​ ಸುಬ್ಬರಾವ್ ಅವರನ್ನು ವಶಕ್ಕೆ ಪಡೆದಿರುವ ರೈಲ್ವೆ ಪೊಲೀಸರು ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ಗುರುವಾರ ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸ್​ ಮೂಲಗಳಿಂದ ಗೊತ್ತಾಗಿದೆ. ಅಗ್ನಿಪಥ್ ಯೋಜನೆ ಜಾರಿಯಾದರೆ ಅಕಾಡೆಮಿಗಳಿಗೆ 20 ಕೋಟಿ ರೂ.ಗಳಷ್ಟು ನಷ್ಟವಾಗಲಿದೆ ಎಂಬ ಆತಂಕದಿಂದ ಕೆಲ ಅಕಾಡೆಮಿಗಳ ಪ್ರತಿನಿಧಿಗಳು ಈ ವಿಧ್ವಂಸಕ ಕೃತ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಆರೋಪದ ಮೇಲೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2 ಸಾವಿರ ಅಭ್ಯರ್ಥಿಗಳಿಗೆ ತರಬೇತಿ: ಜಂಟಿ ಪ್ರವೇಶ ಪರೀಕ್ಷೆಗೆ ಅರ್ಹತೆ ಪಡೆದಿರುವ ಎರಡು ಸಾವಿರ ಅಭ್ಯರ್ಥಿಗಳು ಸಾಯಿ ಡಿಫೆನ್ಸ್ ಅಕಾಡೆಮಿ ಸೇರಿದಂತೆ ವರಂಗಲ್, ಕರೀಂನಗರ, ಮತ್ತು ಖಮ್ಮಂ ಜಿಲ್ಲೆಗಳ ವಿವಿಧ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕರೋನಾ ಎಫೆಕ್ಟ್‌ನಿಂದಾಗಿ ಪರೀಕ್ಷೆಯನ್ನು ಪದೇ ಪದೇ 15 ತಿಂಗಳ ಕಾಲ ಮುಂದೂಡಲಾಯಿತು. ಪರೀಕ್ಷೆಯನ್ನು ಸರ್ವಾನುಮತದಿಂದ ರದ್ದುಗೊಳಿಸಿದ್ದರಿಂದ ಅಭ್ಯರ್ಥಿಗಳು ಆಕ್ರೋಶಗೊಂಡಿದ್ದರು. ಅದೇ ವೇಳೆಗೆ ಸಾಯಿ ಡಿಫೆನ್ಸ್ ಸೇರಿದಂತೆ ಹಲವು ಅಕಾಡೆಮಿಗಳ ಮಾಲೀಕರು ಅಗ್ನಿಪಥ್ ತಮ್ಮ ವ್ಯಾಪಾರಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗಲಿದೆ ಎಂದು ಲೆಕ್ಕ ಹಾಕಿದ್ದರು ಎನ್ನಲಾಗಿದೆ.

ಕೆಲವು ವರ್ಷಗಳಿಂದ, ಈ ಅಕಾಡೆಮಿಗಳು ಅತ್ಯಲ್ಪ ಶುಲ್ಕಕ್ಕಾಗಿ ಸೇನೆಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿವೆ. ಸೇನೆಗೆ ಆಯ್ಕೆಯಾದರೆ ಪ್ರತಿ ಅಭ್ಯರ್ಥಿಯಿಂದ ತಲಾ 2 ಲಕ್ಷ ರೂಪಾಯಿ ಸಂಗ್ರಹಿಸಲಾಗುತ್ತಿದೆ. 2000 ಮಂದಿಗೆ ತರಬೇತಿ ನೀಡುವ ಅಕಾಡೆಮಿಗಳು, ಅರ್ಧದಷ್ಟು ಉದ್ಯೋಗಿಗಳಾದರೂ 20 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಪಥ ಯೋಜನೆ ಜಾರಿಯಾದರೆ, ಭಾರಿ ನಷ್ಟವಾಗುತ್ತದೆ ಎಂದು ಭಾವಿಸಿದ ಸುಬ್ಬರಾವ್, ಶಿವ ಮತ್ತಿತರರು ವಿಧ್ವಂಸಕ ಕೃತ್ಯ ನಡೆಸಲು ಸೇನಾ ಅಭ್ಯರ್ಥಿಗಳಿಗೆ ಎಲ್ಲ ರೀತಿಯ ನೆರವು ನೀಡಿದ್ದಾರೆ ಎಂಬುದು ರೈಲ್ವೆ ಪೊಲೀಸರ ವಾದವಾಗಿದೆ.

ಇದನ್ನು ಓದಿ:ಬೆಳಗಾವಿ ತ್ರಿವಳಿ ಕೊಲೆ ಪ್ರಕರಣ: ಪ್ರವೀಣ್ ಭಟ್ ನಿರ್ದೋಷಿ.. ಹೈಕೋರ್ಟ್ ‌ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.