ETV Bharat / bharat

ಔಷಧ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ: ಹಲವು ಕಾರ್ಮಿಕರ ಆರೋಗ್ಯದಲ್ಲಿ ಏರುಪೇರು

author img

By

Published : Sep 1, 2022, 8:33 PM IST

ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲೂ ಔಷಧ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಪ್ರಕರಣ ಬೆಳಕಿಗೆ ಬಂದಿದೆ. ವಿಷಕಾರಿ ಅನಿಲ ಸೋರಿಕೆಯಿಂದಾಗಿ ಏಳು ಕಾರ್ಮಿಕರ ಸ್ಥಿತಿ ಹದಗೆಟ್ಟಿತ್ತು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಔಷಧ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ
ಔಷಧ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ

ರೂರ್ಕಿ( ಉತ್ತರಾಖಂಡ್​): ಇಲ್ಲಿನ ಔಷಧ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿದ್ದು, ಏಳು ಜನ ಕಾರ್ಮಿಕರು ಅಸ್ವಸ್ಥರಾಗಿದ್ದರು. ಹರಿದ್ವಾರ ಜಿಲ್ಲೆಯ ಭಗವಾನ್‌ಪುರ ಪ್ರದೇಶದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾರ್ಖಾನೆಯಲ್ಲಿದ್ದ ಅನೇಕ ಕಾರ್ಮಿಕರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಅವರನ್ನು ಭಗವಾನ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಔಷಧ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ
ಔಷಧ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ

ಮಾಹಿತಿಯ ಪ್ರಕಾರ, ರೂರ್ಕಿಯ ಭಗವಾನ್‌ಪುರ ಪ್ರದೇಶದ ಶಿವಾಲಿಕ್ ರೆಮಿಡೀಸ್ ಕಂಪನಿಯಲ್ಲಿ ಐಪಿಎ ಡ್ರಮ್ ತೆರೆಯುವಾಗ, ವಿಷಕಾರಿ ಅನಿಲ ಸೋರಿಕೆಯಾಗಿದೆ. ಇದರಿಂದ ಏಳಕ್ಕೂ ಹೆಚ್ಚು ಕಾರ್ಮಿಕರ ಸ್ಥಿತಿ ಹದಗೆಟ್ಟಿತ್ತು. ಎಲ್ಲ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ, ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರದ ಟ್ರಾನ್ಸಿಟ್ ಕ್ಯಾಂಪ್‌ನ ಆಜಾದ್ ನಗರದ ದಟ್ಟವಾದ ಜನಸಂಖ್ಯೆಯ ಮಧ್ಯೆ ಜಂಕ್ ಗೋದಾಮಿನಿಂದ ವಿಷಕಾರಿ ಅನಿಲ ಸೋರಿಕೆಯಾಗಿ 47 ಕ್ಕೂ ಹೆಚ್ಚು ಜನರು ಉಸಿರಾಟದ ತೊಂದರೆ ಅನುಭವಿಸಿದ್ದರು.

ಇದನ್ನೂ ಓದಿ: ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ: ಹಲವು ಮಹಿಳಾ ಕಾರ್ಮಿಕರು ಅಸ್ವಸ್ಥ


ETV Bharat Logo

Copyright © 2024 Ushodaya Enterprises Pvt. Ltd., All Rights Reserved.