ETV Bharat / bharat

Modi: ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಪ್ರತಿ ಗ್ರಾಮವನ್ನೂ ಅಭಿವೃದ್ಧಿಪಡಿಸಿ- ಪ್ರಧಾನಿ ಮೋದಿ ಕರೆ

author img

By

Published : Aug 18, 2023, 3:05 PM IST

Zila Panchayat Members' Conference: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದು ಜಿಲ್ಲಾ ಪಂಚಾಯತ್ ಸದಸ್ಯರ ಸಮಾವೇಶ ಉದ್ದೇಶಿಸಿ ವರ್ಚುವಲ್​ ಮೂಲಕ ಭಾಷಣ ಮಾಡಿದರು. ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಂದ ಸ್ಥಳೀಯ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಇದ್ದರು.

Prime Minister Narendra Modi
Prime Minister Narendra Modi

ನವದೆಹಲಿ: ದೇಶಾದ್ಯಂತ 600ಕ್ಕೂ ಹೆಚ್ಚು ಜಿಲ್ಲಾ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರ ಸಮಾವೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಎಂಎನ್‌ಜಿಆರ್‌ಇಜಿಎ (ಮನರೇಗಾ) ನಿಧಿಯನ್ನು ಕೆರೆ ನಿರ್ಮಾಣ, ಮಣ್ಣಿನ ರಸ್ತೆ ಕೆಲಸ ಅಥವಾ ನೆಡುತೋಪು ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಬಳಸಬಹುದು ಎಂದು ಹೇಳಿದರು.

''2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಪ್ರತಿ ಗ್ರಾಮ, ತಾಲೂಕು ಮತ್ತು ಜಿಲ್ಲೆಗಳಲ್ಲಿ ಅಭಿವೃದ್ಧಿಯ ದೀಪ ಬೆಳಗಬೇಕು. ವಿವಿಧ ಅಭಿವೃದ್ಧಿ ಉಪಕ್ರಮಗಳನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಲು ಪ್ರತಿಯೊಬ್ಬರೂ ಕೆಲಸ ಮಾಡಬೇಕು. 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಂಬುದು ಬಿಜೆಪಿಗೆ ಕೇವಲ ಘೋಷಣೆಯಲ್ಲ. ಪ್ರತಿ ಕ್ಷಣವೂ ಅದರ ಅಡಿಯಲ್ಲಿ ನಾವು ಬದುಕಬೇಕು'' ಎಂದು ಪ್ರಧಾನಿ ಮೋದಿ ಹೇಳಿದರು.

ಮೊದಲು ಮುಖ್ಯಮಂತ್ರಿಯಾಗಿ ನಂತರ ಪ್ರಧಾನಿಯಾಗಿ ತಮ್ಮದೇ ಅನುಭವ ಉಲ್ಲೇಖಿಸಿದ ಮೋದಿ, ''ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ಗ್ರಾಮ ಮತ್ತು ಜಿಲ್ಲೆಗಳಿಗೆ ಆದ್ಯತೆಯಾಗಿ ಕೆಲವು ಕೆಲಸಗಳನ್ನು ಕೈಗೊಳ್ಳಬೇಕು. ಜನರ ಬೆಂಬಲವನ್ನು ಪಡೆಯುವ ಮೂಲಕ ಯಶಸ್ವಿಗೊಳಿಸಲು ಮುಂದಾಗಬೇಕು'' ಎಂದು ಸಲಹೆ ಕೊಟ್ಟರು.

''ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಶೌಚಾಲಯ ನಿರ್ಮಿಸಿ, ಬ್ಯಾಂಕ್ ಖಾತೆ ತೆರೆಯಲು ಅನುವು ಮಾಡಿಕೊಟ್ಟಿದ್ದೇವೆ. ಸ್ಥಳೀಯ ಸಂಸ್ಥೆಗಳ ನಿಧಿ ಬಹುಪಟ್ಟು ಏರಿದೆ. ಸಂಪನ್ಮೂಲಗಳ ನಿರ್ಬಂಧವಿಲ್ಲ ಎಂಬುದನ್ನು ಗಮನಿಸಿ ಪ್ರತಿ ವರ್ಷ ಮೂರು ಯೋಜನೆಗಳನ್ನು ಆದ್ಯತೆಯಾಗಿ ತೆಗೆದುಕೊಳ್ಳಲು ಜಿಲ್ಲಾ ಪಂಚಾಯಿತಿ ಸದಸ್ಯರು ಸಭೆಗಳನ್ನು ನಡೆಸಬೇಕು'' ಎಂದು ತಿಳಿಸಿದರು.

''ಈ ಹಿಂದೆ 70,000 ಕೋಟಿ ರೂ.ಗಳಷ್ಟಿದ್ದ ಅನುದಾನ ಈಗ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿದೆ. ನಾವು 30,000 ಜಿಲ್ಲಾ ಪಂಚಾಯಿತಿ ಕಟ್ಟಡಗಳನ್ನು ನಿರ್ಮಿಸಿದ್ದೇವೆ. MNREGA (ನರೇಗಾ) ಬಜೆಟ್‌ನ ಒಂದು ಭಾಗವನ್ನು ಆಸ್ತಿಸೃಷ್ಟಿಗೆ ಬಳಸಲು ಒತ್ತು ಕೊಡಲಾಗಿದೆ. ಸ್ಥಳೀಯ ಸಂಸ್ಥೆಗಳ ಬಿಜೆಪಿ ಸದಸ್ಯರು ಇದೇ ರೀತಿಯ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಪಕ್ಷವು ಚುನಾವಣೆಗಳನ್ನು ಗೆಲ್ಲಲು ಮಾಡುತ್ತಿಲ್ಲ. ಆದರೆ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಕೆಲಸ ಮಾಡುತ್ತದೆ'' ಎಂದು ಮೋದಿ ವಿವರಿಸಿದರು.

"ನಾವು ಸಂಘಟನೆ, ಮೌಲ್ಯಗಳು ಹಾಗು ಸಮರ್ಪಣಾ ಮನೋಭಾವವನ್ನು ನಂಬುತ್ತೇವೆ. ನಾವು ಸಾಮೂಹಿಕ ಜವಾಬ್ದಾರಿಯನ್ನು ಮುಂದುವರಿಯುತ್ತೇವೆ. ನಮಗೆ ನೀಡಿದ ಜವಾಬ್ದಾರಿಗಾಗಿ ನಮ್ಮ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ನಿರಂತರವಾಗಿ ಹೆಚ್ಚಿಸುತ್ತೇವೆ" ಎಂದು ಪ್ರಧಾನಿ ಭರವಸೆ ನೀಡಿದರು.

ಇದನ್ನೂ ಓದಿ: RBI: ಸಾಲದ ದಂಡ ಶುಲ್ಕಕ್ಕೆ ಬಡ್ಡಿ ವಿಧಿಸುವಂತಿಲ್ಲ; ಆರ್​ಬಿಐ ಹೊಸ ಮಾರ್ಗಸೂಚಿ ಜ.1 ರಿಂದ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.