ETV Bharat / bharat

ಈ ಬಾರಿಯೂ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ: ಬೈಡನ್, ಬೋರಿಸ್ ಜಾನ್ಸನ್ ಹಿಂದಿಕ್ಕಿದ ಪ್ರಧಾನಿ

author img

By

Published : Nov 7, 2021, 10:44 AM IST

ಈ ವರ್ಷವೂ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಪ್ರತಿ ದೇಶದ ವಯಸ್ಕರೊಂದಿಗಿನ ಸಂದರ್ಶನಗಳ ಆಧಾರದ ಮೇಲೆ ರೇಟಿಂಗ್‌ಗಳನ್ನು ಮಾರ್ನಿಂಗ್ ಕನ್ಸಲ್ಟ್ ನಿರ್ಧರಿಸುತ್ತದೆ. ಈ ಅಂಕಿ ಅಂಶವನ್ನು ಸಿದ್ಧಪಡಿಸಲು, ಮಾರ್ನಿಂಗ್ ಕನ್ಸಲ್ಟ್ ಭಾರತದಲ್ಲಿ 2,126 ಜನರನ್ನು ಆನ್‌ಲೈನ್‌ನಲ್ಲಿ ಸಂದರ್ಶಿಸಿದೆ.

PM Modi world's most popular leader, US President Biden at number six: Survey
ಈ ಬಾರಿಯೂ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ಅವರ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ( Morning Consult Global Leader Approval Rating Tracker ) ಪ್ರಕಾರ ಈ ವರ್ಷವೂ ಅವರು ವಿಶ್ವದ ಅಗ್ರ ನಾಯಕನ ಸ್ಥಾನ ಉಳಿಸಿಕೊಂಡಿದ್ದಾರೆ. ಹಾಗೆ ಮತ್ತಷ್ಟು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ವಿಶ್ವದ ಹಲವು ನಾಯಕರನ್ನು ಮೋದಿ ಹಿಂದಿಕ್ಕಿದ್ದಾರೆ.

ಗ್ಲೋಬಲ್ ಲೀಡರ್ ಟ್ರ್ಯಾಕರ್‌ನಲ್ಲಿ ಮೋದಿ ಅತ್ಯಧಿಕ ಅಂದರೆ ಶೇಕಡಾ 70 ರೇಟಿಂಗ್ ಅನ್ನು ಪಡೆದುಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಮೆಕ್ಸಿಕೊ ಅಧ್ಯಕ್ಷ ಲೋಪೆಜ್ ಒಬ್ರಡಾರ್ (66%) ಪ್ರತಿಶತದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ (58%) ಮೂರನೇ ಸ್ಥಾನದಲ್ಲಿದ್ದರೆ, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ (54%), ಯುಎಸ್ ಅಧ್ಯಕ್ಷ ಜೋ ಬೈಡನ್ (44%)ರೊಂದಿಗೆ ಆರನೇ ಸ್ಥಾನ ಪಡೆದಿದ್ದಾರೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ 43 ಪ್ರತಿಶತ ರೇಟಿಂಗ್‌ನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ ಮತ್ತು ದಕ್ಷಿಣ ಕೊರಿಯಾದ ನಾಯಕ ಮೂನ್ ಜೇ-ಇನ್ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ ಅಂದರೆ, ಟಾಪ್​ ಟೆನ್​ನಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ಸಚಿವ ಮತ್ತು ಆಹಾರ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ಮಾಹಿತಿಯನ್ನು ಕೂ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ನಡೆಸಿದ ಸಮೀಕ್ಷೆಯಲ್ಲಿ ಈ ರೇಟಿಂಗ್ ಹೊರಬಿದ್ದಿದೆ. ಪ್ರತಿ ವರ್ಷ 13 ವಿಶ್ವ ನಾಯಕರನ್ನು ಮಾರ್ನಿಂಗ್ ಕನ್ಸಲ್ಟ್ ಮೂಲಕ ರೇಟ್ ಮಾಡಲಾಗುತ್ತದೆ. ಇವುಗಳಲ್ಲಿ ಆಸ್ಟ್ರೇಲಿಯಾ, ಭಾರತ, ಬ್ರೆಜಿಲ್, ಯುಎಸ್ಎ, ಯುಕೆ, ಜಪಾನ್, ಇಟಲಿ, ಮೆಕ್ಸಿಕೊ, ಸ್ಪೇನ್, ಜರ್ಮನಿ, ಫ್ರಾನ್ಸ್ ಮತ್ತು ಕೆನಡಾ ಸೇರಿವೆ.

ಸಂಸ್ಥೆಯು ಪ್ರತಿ ದೇಶದಲ್ಲಿಯೂ ಸಮೀಕ್ಷೆಯನ್ನು ನಡೆಸುತ್ತದೆ. ಅದರ ಆಧಾರದ ಮೇಲೆ ಆಯಾ ನಾಯಕರ ಜನಪ್ರಿಯತೆಯ ರೇಟಿಂಗ್ ಅನ್ನು ನೀಡಲಾಗುತ್ತದೆ. ರೇಟಿಂಗ್ ಪ್ರಪಂಚದಾದ್ಯಂತದ ನಾಯಕರ ಜನಪ್ರಿಯತೆಯನ್ನು ತೋರಿಸುತ್ತದೆ. ಕಳೆದ ವರ್ಷವೂ ಪ್ರಧಾನಿ ಮೋದಿ ರೇಟಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದರು.

ಯಾರ್ಯಾರಿಗೆ ಎಷ್ಟು ರೇಟಿಂಗ್..

1ನರೇಂದ್ರ ಮೋದಿಶೇ 70
2ಲೋಪೆಜ್ ಒಬ್ರಡಾರ್ಶೇ 66
3ಮಾರಿಯೋ ಡ್ರಾಘಿ ಶೇ 58
4ಏಂಜೆಲಾ ಮರ್ಕೆಲ್ಶೇ 54
5ಸ್ಕಾಟ್ ಮಾರಿಸನ್ಶೇ 47
6ಜೋ ಬೈಡನ್ಶೇ 44
7ಜಸ್ಟಿನ್ ಟ್ರುಡೊಶೇ 43
8ಫ್ಯೂಮಿಯೊ ಕಿಶಿಡಾಶೇ 42
9ಮೂನ್ ಜೇ-ಇನ್ಶೇ 41
10ಬೋರಿಸ್ ಜಾನ್ಸನ್ಶೇ 40
11ಪೆಡ್ರೊ ಸ್ಯಾಂಚೆಜ್ಶೇ 37
12ಎಮ್ಯಾನುಯೆಲ್ ಮ್ಯಾಕ್ರನ್ಶೇ 36
13ಜೈರ್ ಬೋಲ್ಸನಾರೊಶೇ 35
ETV Bharat Logo

Copyright © 2024 Ushodaya Enterprises Pvt. Ltd., All Rights Reserved.