ETV Bharat / bharat

ಗುಜರಾತ್‌ನ ಗಾಂಧಿನಗರದಲ್ಲಿ ಪ್ರಧಾನಿ ಮೋದಿ ಬೃಹತ್​ ರೋಡ್‌ಶೋ

author img

By

Published : Mar 12, 2022, 12:56 PM IST

Updated : Mar 12, 2022, 1:16 PM IST

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಪ್ರವಾಸದ ಎರಡನೇ ದಿನವದ ಇಂದು ಗಾಂಧಿನಗರದಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ. ಇದಾದ ಬಳಿಕ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಆಗಮಿಸಲಿದ್ದಾರೆ..

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಗಾಂಧಿನಗರ(ಗುಜರಾತ್) : ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರದ ದಹೆಗಾಂನಲ್ಲಿ ಇಂದು ರೋಡ್ ಶೋ ನಡೆಸಿದರು. ಹೂವಿನಿಂದ ಅಲಂಕರಿಸಲ್ಪಟ್ಟ ತೆರೆದ ಜೀಪ್‌ನಲ್ಲಿ ಸವಾರಿ ಮಾಡಿದ ಪ್ರಧಾನಿ, ಜನರತ್ತ ಕೈ ಬೀಸುತ್ತಿದ್ದ ದೃಶ್ಯ ಕಂಡು ಬಂದಿತು.

ಗಾಂಧಿನಗರದ ಲವಡ್ ಪ್ರದೇಶದಲ್ಲಿ ಈ ರೋಡ್‌ಶೋ ಮುಕ್ತಾಯಗೊಳ್ಳಲಿದೆ. ನಂತರ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (RRU) ಮೊದಲ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ. ಬಳಿಕ ಸಂಜೆ ವೇಳೆಗೆ 11ನೇ ಖೇಲ್ ಮಹಾಕುಂಭ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ರಾತ್ರಿ 8.30ಕ್ಕೆ ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿ ದೆಹಲಿಗೆ ತೆರಳಲಿದ್ದಾರೆ.

ಗಾಂಧಿನಗರದಲ್ಲಿ ಪ್ರಧಾನಿ ಮೋದಿ ಬೃಹತ್​ ರೋಡ್‌ಶೋ

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದು, ಅದರಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ನಿನ್ನೆ ಗುಜರಾತ್​ಗೆ ತೆರಳಿದ್ದಾರೆ. ನಿನ್ನೆ ಅಹ್ಮದಾಬಾದ್​ ಏರ್​​ಪೋರ್ಟ್​​ನಿಂದ ಗಾಂಧಿನಗರದಲ್ಲಿರುವ ಕಮಲಂ ಬಿಜೆಪಿ ಪ್ರಧಾನ ಕಚೇರಿಯವರೆಗೆ ರೋಡ್​ ಶೋ ನಡೆಸಿದ ಬಳಿಕ ಸಂಜೆ ವೇಳೆ ತಮ್ಮ ತಾಯಿ ಹೀರಾಬೆನ್ ಇದ್ದ ಮನೆಗೆ ಹೋಗಿ, ಅವರ ಆಶೀರ್ವಾದ ಪಡೆದಿದ್ದಾರೆ. ಅಮ್ಮನೊಂದಿಗೆ ಕುಳಿತು ಊಟ ಮಾಡಿದ್ದರು.

ಇದನ್ನೂ ಓದಿ: ತಾಯಿ ನಿದ್ರಿಸುತ್ತಿದ್ದಾಳೆ ಎಂದು ಭಾವಿಸಿ, ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಬಾಲಕ

Last Updated : Mar 12, 2022, 1:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.