ETV Bharat / bharat

'ಜನರಿಗೆ ಬಜೆಟ್‌ ಅಂಶಗಳನ್ನು ತಲುಪಿಸಿ': ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ

author img

By

Published : Feb 7, 2023, 3:24 PM IST

ಸಂಸತ್ತಿನ ಬಜೆಟ್‌ ಅಧಿವೇಶನದ ನಡುವೆ ಇಂದು ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಸಭೆ ನಡೆಯಿತು.

BJP parliamentary party meeting
ಬಿಜೆಪಿ ಸಂಸದೀಯ ಪಕ್ಷದ ಸಭೆ

ನವದೆಹಲಿ: "ಕಠಿಣ ಪರಿಸ್ಥಿತಿಯಲ್ಲಿಯೂ ಕೇಂದ್ರ ಸರ್ಕಾರ ಉತ್ತಮ ಬಜೆಟ್​ ನೀಡಿದೆ. ಬಜೆಟ್​ನಲ್ಲಿ ಪ್ರಕಟಿಸಿರುವ ವಿಚಾರಗಳು ಸಮಾಜದ ಪ್ರತಿ ಶ್ರೇಣಿಯನ್ನೂ ತಲುಪಬೇಕು. ಇದನ್ನು ಜನರ ಬಳಿ ತೆಗೆದುಕೊಂಡು ಹೋಗುವ ಕೆಲಸ ಸಂಸದರಿಂದ ಆಗಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ತಿಳಿಸಿದರು.

"ಸಂಸದರು ಬಜೆಟ್​ ಬಗ್ಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾತನಾಡಬೇಕು. ಈ ಬಾರಿ ಜನತೆಗೇನು ನೀಡಲಾಗಿದೆ ಎಂಬುದನ್ನು ತಿಳಿಸಿ. 2014 ಮತ್ತು 2019ರಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೇರಲು ಸಾಧ್ಯವಾಯಿತು. ಇಷ್ಟಕ್ಕೆ ನಾವು ತೃಪ್ತಿ ಪಟ್ಟುಕೊಳ್ಳಬಾರದು. ಹೆಚ್ಚು ಕೆಲಸ ಮಾಡಿ ಜನರಿಗೆ ಮತ್ತಷ್ಟು ಹತ್ತಿರವಾಗಬೇಕು" ಎಂದರು.

ಇದನ್ನೂ ಓದಿ: ಅಮೃತ ಕಾಲದ ಮೊದಲ ಬಜೆಟ್ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ: ಮೋದಿ

ಅಧಿವೇಶನದಲ್ಲಿ ಅದಾನಿ ಪ್ರತಿಧ್ವನಿ: ಅದಾನಿ ಗ್ರೂಪ್ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು. ಸರ್ಕಾರ ಉಭಯ ಸದನಗಳಲ್ಲಿ ಸೂಕ್ತ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಅದಾನಿ ಗ್ರೂಪ್​ ಮೇಲೆ ಕೇಳಿಬಂದಿರುವ ಸ್ಟಾಕ್​ ಮ್ಯಾನಿಪ್ಯುಲೇಶನ್ ಆರೋಪದ ವಿರುದ್ಧ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿವೆ.

ಈ ಕುರಿತಂತೆ ಚರ್ಚಿಸಲು ಇಂದು ಪ್ರತಿಪಕ್ಷಗಳು ಸಭೆ ಕರೆದಿವೆ. ಕಲಾಪದಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್‌ ವರದಿಯ ಕುರಿತು ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಒಪ್ಪುವವರೆಗೂ ತನ್ನ ನಿರ್ಧಾರ ಸಡಿಲಗೊಳಿಸದೇ ಇರಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈಗಾಗಲೇ ಹೇಳಿದ್ದಾರೆ.

ಇದನ್ನೂ ಓದಿ: ಮಾರುಕಟ್ಟೆ ಮೌಲ್ಯಕ್ಕಿಂತ ಅರ್ಧದಷ್ಟು ಕುಸಿತ ಕಂಡ ಅದಾನಿ ಸಮೂಹದ ಷೇರುಗಳ ಬೆಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.