ETV Bharat / bharat

ಪಿಜಿಯಲ್ಲಿ ವಿದ್ಯಾರ್ಥಿನಿಯರ ಮೇಲೆ ಸೆಕ್ಯುರಿಟಿ ಗಾರ್ಡ್ ದೌರ್ಜನ್ಯ: ಸಿಸಿಟಿವಿ ವಿಡಿಯೋ

author img

By

Published : Aug 16, 2022, 10:13 PM IST

ವಿದ್ಯಾರ್ಥಿನಿಯರ ಪಿಜಿಯಲ್ಲಿ ಸೆಕ್ಯುರಿಟಿ ಗಾರ್ಡ್​​ ದೌರ್ಜನ್ಯ ವೆಸಗಿರುವ ವಿಡಿಯೋ ವೈರಲ್​ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ದೆಹಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PG girls molested by security guard in delhi
PG girls molested by security guard in delhi

ನವದೆಹಲಿ: ರಾಜಧಾನಿ ದೆಹಲಿಯ ಪಿಜಿಗಳಲ್ಲಿ(ಪೇಯಿಂಗ್ ಗೆಸ್ಟ್‌) ಹೆಣ್ಣುಮಕ್ಕಳು ಸುರಕ್ಷಿತವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕರೋಲ್​​ ಬಾಗ್​ ಪ್ರದೇಶದಲ್ಲಿರುವ ಪಿಜಿಯಲ್ಲಿ ಸೆಕ್ಯುರಿಟಿ ಗಾರ್ಡ್ ಓರ್ವ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವೆಸಗುತ್ತಿರುವ ಆತಂಕಕಾರಿ ವಿಡಿಯೋ ವೈರಲ್​ ಆಗಿದೆ. ಘಟನೆಯ ಬೆನ್ನಲ್ಲೇ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ತನಿಖೆ ನಡೆಸುವಂತೆ ಸೂಚಿಸಿ ಆಗಸ್ಟ್​​ 18ರೊಳಗೆ ವರದಿ ಸಲ್ಲಿಸಲು ತಿಳಿಸಿದೆ.

ಪಿಜಿಯಲ್ಲಿ ವಿದ್ಯಾರ್ಥಿನಿಯರ ಮೇಲೆ ಸೆಕ್ಯುರಿಟಿ ಗಾರ್ಡ್ ದೌರ್ಜನ್ಯ...

ಇದನ್ನೂ ಓದಿ: ಪ್ರೀತಿಗೆ ಅಡ್ಡಿಪಡಿಸಿದ ತಂದೆಯ ಮೇಲೆ ಸುಳ್ಳು ರೇಪ್‌ ಕೇಸ್‌ ಹಾಕಿ ಜೈಲಿಗಟ್ಟಿದ ಪುತ್ರಿ

ಪಿಜಿಯಲ್ಲಿ ನಿಯೋಜನೆಗೊಂಡಿದ್ದ ಸೆಕ್ಯುರಿಟಿ ಗಾರ್ಡ್ ಬಾಲಕಿಯರಿಗೆ ಕಿರುಕುಳ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತೀವ್ರವಾಗಿ ಆತಂಕಗೊಂಡ ವಿದ್ಯಾರ್ಥಿನಿಯೊಬ್ಬಳು ಆತನ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮಹಿಳಾ ಆಯೋಗ ದೆಹಲಿ ಪೊಲೀಸರಿಗೆ ನೋಟಿಸ್ ಕೊಟ್ಟಿದೆ. ತಕ್ಷಣವೇ ಎಫ್​ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸುವಂತೆಯೂ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್​​ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.