ETV Bharat / bharat

ಪೆಟ್ರೋಲ್, ಡೀಸೆಲ್ ದರ ಸ್ಥಿರ.. ಇಂದಿನ ತೈಲ ಬೆಲೆ ಹೀಗಿದೆ ನೋಡಿ

author img

By

Published : Jun 1, 2022, 9:31 AM IST

Updated : Jun 1, 2022, 9:50 AM IST

ಇಂದಿನ ಪೆಟ್ರೋಲ್, ಡೀಸೆಲ್ ದರದ ಮಾಹಿತಿ ಇಲ್ಲಿದೆ ನೋಡಿ..

Petrol price
Petrol price

ನವದೆಹಲಿ/ಬೆಂಗಳೂರು: ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ರಾಷ್ಟ್ರ ಮತ್ತು ದೇಶದ ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ದರದ ಮಾಹಿತಿ ಇಲ್ಲಿದೆ ನೋಡಿ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಇತ್ತೀಚಿನ ಅಬಕಾರಿ ಸುಂಕ ಕಡಿತದ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 111.35 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 97.28 ರೂ. ಇದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ ಆಗಿದ್ದರೆ, ಡೀಸೆಲ್ ಬೆಲೆ 92.76 ರೂ ಆಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 102.63 ರೂ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಯಥಾಸ್ಥಿತಿಯಲ್ಲಿದೆ. ಪೆಟ್ರೋಲ್​ ಲೀಟರ್​ಗೆ 101.94 ರೂ. ಮಾರಾಟವಾಗುತ್ತಿದ್ದರೆ, ಡೀಸೆಲ್ ದರ 87.43ರೂ.ಗೆ ಮಾರಾಟವಾಗುತ್ತಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 103.40 ರೂಪಾಯಿ ಮತ್ತು ಡೀಸೆಲ್​ ದರ ಒಂದು ಲೀಟರ್​ಗೆ 89.13 ರೂಪಾಯಿ ಇದೆ. ಮಂಗಳೂರಿನಲ್ಲಿ ಪೆಟ್ರೋಲ್ ಲೀಟರ್​ಗೆ 101.47 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 87.43 ರೂಪಾಯಿ ಇದೆ.

ಮೈಸೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 101.44 ರೂಪಾಯಿ, ಡೀಸೆಲ್‌ ದರ ಒಂದು ಲೀಟರ್‌ಗೆ 87.43 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್​ಗೆ 103.95 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 89.52 ರೂಪಾಯಿ ಇದೆ. ಹುಬ್ಬಳ್ಳಿಯಲ್ಲಿ ಲೀಟರ್ ಪೆಟ್ರೋಲ್​ಗೆ 101.65ರೂ. ಇದ್ದು, ಡೀಸೆಲ್ 87.65ರೂ.ಗೆ ಮಾರಾಟವಾಗುತ್ತಿದೆ.

Last Updated :Jun 1, 2022, 9:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.