ETV Bharat / bharat

ಡಿಲಿಮಿಟೇಷನ್​ ಪ್ರಕ್ರಿಯೆಯಿಂದ ಹೊರಗುಳಿಯಲು ಪಿಡಿಪಿ ನಿರ್ಧಾರ: ಕಗ್ಗಂಟಾಗುತ್ತಾ ಮಹತ್ವದ ಕಾರ್ಯ?

author img

By

Published : Jul 6, 2021, 4:47 PM IST

ಡಿಲಿಮಿಟೇಷನ್ ಆಯೋಗದ ನಿರ್ಧಾರಗಳು ಪೂರ್ವ ನಿಯೋಜಿತವಾಗಿರುತ್ತವೆ. ಈ ಕಾರಣದಿಂದಾಗಿ ನಾವು ಡಿಲಿಮಿಟೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಿಡಿಪಿ ಸ್ಪಷ್ಟನೆ ನೀಡಿದೆ.

PDP to boycott delimitation commission meet, outcome of the meeting believed to be pre-planned
ಡಿಲಿಮಿಟೇಷನ್​ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ಪಿಡಿಪಿ ನಿರ್ಧಾರ: ಕಗ್ಗಂಟಾಗುತ್ತಾ ಕ್ಷೇತ್ರ ವಿಂಗಡಣೆ

ಶ್ರೀನಗರ(ಜಮ್ಮು ಕಾಶ್ಮೀರ): ಡಿಲಿಮಿಟೇಶನ್ ಆಯೋಗದ ಸಭೆಯಿಂದ ತಾನು ಹೊರಗೆ ಉಳಿಯುವುದಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ತಿಳಿಸಿದೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಚುನಾವಣಾ ಕ್ಷೇತ್ರಗಳ ವಿಂಗಡಣೆ ಮತ್ತಷ್ಟು ಕಗ್ಗಂಟಾಗುವ ಸಾಧ್ಯತೆಯಿದೆ.

ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಚುನಾವಣಾ ಕ್ಷೇತ್ರಗಳನ್ನು ವಿಂಗಡಿಸುವ ಸಲುವಾಗಿ ರಚನೆಯಾದ ಡಿಲಿಮಿಟೇಷನ್ ಆಯೋಗ ಮಂಗಳವಾರ ಜಮ್ಮು ಕಾಶ್ಮೀರಕ್ಕೆ ತೆರಳಿ ಅಲ್ಲಿನ ರಾಜಕೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದೆ.

PDP to boycott delimitation commission meet, outcome of the meeting believed to be pre-planned
ಡಿಲಿಮಿಟೇಷನ್ ಆಯೋಗಕ್ಕೆ ಬರೆಯಲಾದ ಪತ್ರ

ಈ ಹಿನ್ನೆಲೆಯಲ್ಲಿ ನಾವು ಡಿಲಿಮಿಟೇಷನ್ ಆಯೋಗದ ಪ್ರಕ್ರಿಯೆ ಅಥವಾ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸ್ಪಷ್ಟನೆ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಜನರಲ್ ಸೆಕ್ರೆಟರಿ ಜಿ.ಎನ್​.ಲೋನ್​ ಹಂಜುರಾ ಪೂರ್ವ ನಿಯೋಜಿತದಂತೆ ಎಲ್ಲಾ ನಡೆಯಲಿದೆ, ನಾವು ಸಭೆಯಲ್ಲಿ ಪಾಲ್ಗೊಳ್ಳುವುದು ಪ್ರಯೋಜನವಿಲ್ಲ ಎಂದಿದ್ದಾರೆ.

ಈ ಕುರಿತು ಡಿಲಿಮಿಟೇಷನ್ ಆಯೋಗದ ಅಧ್ಯಕ್ಷೆ ರಂಜನಾ ಪ್ರಕಾಶ್ ದೇಸಾಯಿ ಅವರಿಗೆ ಪತ್ರ ಬರೆದಿರುವ ಜಿ.ಎನ್​.ಲೋನ್,​ ಹಂಜುರಾ ಡಿಲಿಮಿಟೇಷನ್ ಆಯೋಗದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಖಂಡಿತವಾಗಿಯೂ ಇಲ್ಲಿನ ಜನರ ಹಿತಾಸಕ್ತಿಗೆ ವಿರುದ್ಧವಾಗಿರುತ್ತವೆ. ಆಯೋಗದ ನಿರ್ಧಾರಗಳು ಪೂರ್ವ ನಿಯೋಜಿತವಾಗಿರುತ್ತವೆ. ಈ ಕಾರಣದಿಂದಾಗಿ ನಾವು ಡಿಲಿಮಿಟೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

PDP to boycott delimitation commission meet, outcome of the meeting believed to be pre-planned
ಡಿಲಿಮಿಟೇಷನ್ ಆಯೋಗಕ್ಕೆ ಬರೆಯಲಾದ ಪತ್ರ

ಇದನ್ನೂ ಓದಿ: ರಥಯಾತ್ರೆಗೆ ಅವಕಾಶ ಕೇಳಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್​​

ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವುದು 'ಅಸಾಂವಿಧಾನಿಕ' ಎಂದು ಮತ್ತೊಮ್ಮೆ ಪತ್ರದಲ್ಲಿ ಉಲ್ಲೇಖಿಸಿದ್ದು, ಇದೇ ಅಸಾಂವಿಧಾನಿಕ ಪ್ರಕ್ರಿಯೆ ಡಿಲಿಮಿಟೇಷನ್ ಪ್ರಕ್ರಿಯೆಯಲ್ಲೂ ನಡೆಯುತ್ತದೆ ಎಂದು ಉಲ್ಲೇಖಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.