ETV Bharat / bharat

ದೇಶದಲ್ಲಿ ಈವರೆಗೂ 3.46 ಕೋಟಿ ಮಂದಿಗೆ ಕೊರೊನಾ : ಕೇಂದ್ರ ಆರೋಗ್ಯ ಸಚಿವ ಮನ್ಸುಕ್​ ಮಾಂಡವೀಯ ಮಾಹಿತಿ

author img

By

Published : Dec 3, 2021, 3:46 PM IST

Updated : Dec 3, 2021, 4:17 PM IST

ದೇಶದಲ್ಲಿ 3.46 ಕೋಟಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 4.6 ಲಕ್ಷ ಜನರು ಅಸುನೀಗಿದ್ದಾರೆ. ಶೇ.1.36ರಷ್ಟು ಸಾವಿನ ಸರಾಸರಿ ದಾಖಲಾಗಿದೆ ಎಂದು ಸಚಿವ ಆರೋಗ್ಯ ಸಚಿವ ಮನ್ಸುಕ್​ ಮಾಂಡವೀಯ ಲೋಕಸಭೆಗೆ ಮಾಹಿತಿ ನೀಡಿದರು..

parliament winter session
ಕೇಂದ್ರ ಆರೋಗ್ಯ ಸಚಿವ ಮನ್ಸುಕ್​ ಮಾಂಡವೀಯ

ನವದೆಹಲಿ : ಈ ಬಾರಿಯ ಚಳಿಗಾಲದ ಸಂಸತ್​ ಅಧಿವೇಶನ ಗದ್ದಲದ ಗೂಡಾಗಿದೆ. ಕೃಷಿ ಕಾಯ್ದೆ ಚರ್ಚೆ, 12 ಸಂಸದರ ಅಮಾನತು ಸೇರಿದಂತೆ ವಿವಿಧ ಕಾರಣಕ್ಕಾಗಿ ಆಡಳಿತ-ವಿಪಕ್ಷ ನಾಯಕರ ಮಧ್ಯೆ ಮಾತಿನ ಚಕಮಕಿ ಮತ್ತು ಪ್ರತಿಭಟನೆಗಳು ಮುಂದುವರಿದಿವೆ.

ಕೊರೊನಾ ಬಗ್ಗೆ ಚರ್ಚೆ ಆರಂಭ

ಭೋಜನ ವಿರಾಮದ ಬಳಿಕ ಆರಂಭವಾದ ಸದನದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಕ್​ ಮಾಂಡವೀಯ ಅವರು ಕೊರೊನಾ ಬಗ್ಗೆ ಚರ್ಚೆ ಆರಂಭಿಸಿದರು.

ದೇಶದಲ್ಲಿ 3.46 ಕೋಟಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 4.6 ಲಕ್ಷ ಜನರು ಅಸುನೀಗಿದ್ದಾರೆ. ಶೇ.1.36ರಷ್ಟು ಸಾವಿನ ಸರಾಸರಿ ದಾಖಲಾಗಿದೆ. 1 ಮಿಲಿಯನ್​ ಜನರಲ್ಲಿ 25 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಂಡರೆ, 340 ಜನರು ಮೃತಪಟ್ಟಿದ್ದಾರೆ ಎಂದು ಸಚಿವ ಆರೋಗ್ಯ ಸಚಿವ ಮನ್ಸುಕ್​ ಮಾಂಡವೀಯ ಲೋಕಸಭೆಗೆ ಮಾಹಿತಿ ನೀಡಿದರು.

ಆಕ್ಸಿಜನ್​ ಉತ್ಪಾದನೆಯಲ್ಲಿ ಹೆಚ್ಚಳ

ಕೊರೊನಾ 1 ಮತ್ತು 2ನೇ ಅಲೆಯಲ್ಲಿ ಕೆಲ ರಾಜ್ಯಗಳಲ್ಲಿ ಆಕ್ಸಿಜನ್​ ಕೊರತೆ ಎದುರಿಸಲಾಗಿತ್ತು. ಪ್ರಸ್ತುತ 19 ರಾಜ್ಯಗಳಿಂದ ಆಕ್ಸಿಜನ್​ ಕೊರತೆಯಿಂದ ಸೋಂಕಿತರ ಸಾವಾದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಪಂಜಾಬ್​ನಲ್ಲಿ ಮೂವರು ಸೋಂಕಿತರು ಮಾತ್ರ ಆಕ್ಸಿಜನ್​ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಚಿವ ಮಾಂಡವೀಯ ಸದನಕ್ಕೆ ತಿಳಿಸಿದರು.

ಇದನ್ನೂ ಓದಿ: ಸಂಸದರ ಅಮಾನತು ವಿಚಾರ : ವಿಪಕ್ಷಗಳ ವಿರುದ್ಧ ಬಿಜೆಪಿ ಸಂಸದರ ಪ್ರತಿಭಟನೆ

ಮಹಾರಾಷ್ಟ್ರ ಸಂಸದರೊಬ್ಬರು ಆಕ್ಸಿಜನ್​ ಉತ್ಪಾದನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಲ್ಲಿ ಇದೀಗ ಒಮಿಕ್ರಾನ್​ ಭೀತಿಯ ಮಧ್ಯೆಯೂ ಪ್ರಸ್ತುತ 4500 ಎಂಟಿಯಷ್ಟು ಆಕ್ಸಿಜನ್​ ಉತ್ಪಾದನೆ ಮಾಡಲಾಗುತ್ತಿದೆ.

ಈ ಹಿಂದೆ 1400 ಎಂಟಿಯಷ್ಟು ಆಕ್ಸಿಜನ್​ ಉತ್ಪಾದನೆ ಮಾಡಲಾತ್ತಿತ್ತು. ಇದೀಗ 4500 ಎಂಟಿಗೆ ಏರಿಸಲಾಗಿದೆ. ದೇಶದಲ್ಲಿ ಆಕ್ಸಿಜನ್​ ಕೊರತೆ ಇಲ್ಲ ಎಂದು ತಿಳಿಸಿದರು.

Last Updated : Dec 3, 2021, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.