ETV Bharat / bharat

ಆರು ಜನರಲ್ಲಿ ಇಬ್ಬರಿಗೆ ಮಾತ್ರ ಸಿಕ್ಕಿತ್ತು 'ಸಂಸತ್​' ಪಾಸ್​; ಸೋಷಿಯಲ್​ ಮೀಡಿಯಾದಲ್ಲೇ ಸಿದ್ಧವಾಗಿತ್ತು ಪ್ಲಾನ್​!

author img

By PTI

Published : Dec 13, 2023, 9:24 PM IST

Parliament Security Breach: ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಆರು ಜನರು ಕಲಾಪಕ್ಕೆ ನಗ್ಗಲು ಪ್ಲಾನ್​ ಮಾಡಿದ್ದರು. ಆದರೆ, ಇವರಲ್ಲಿ ಇಬ್ಬರಿಗೆ ಮಾತ್ರ ಪಾಸ್​ ಲಭ್ಯವಾಗಿದ್ದವು ಎಂದು ದೆಹಲಿ ಪೊಲೀಸ್​ ಮೂಲಗಳು ಹೇಳಿವೆ.

Parliament security breach: 5th person nabbed, sources say plan hatched few days ago
ಆರು ಜನರಲ್ಲಿ ಇಬ್ಬರಿಗೆ ಮಾತ್ರ ಸಿಕ್ಕಿತ್ತು 'ಸಂಸತ್​' ಪಾಸ್​; ಸೋಷಿಯಲ್​ ಮೀಡಿಯಾದಲ್ಲೇ ಸಿದ್ಧವಾಗಿತ್ತು ಪ್ಲಾನ್​!

ನವದೆಹಲಿ: ಲೋಕಸಭೆ ಕಲಾಪಕ್ಕೆ ಬುಧವಾರ ಇಬ್ಬರು ನುಗ್ಗಿ ಹಾಗೂ ಸಂಸತ್ತಿನ ಆವರಣದಲ್ಲಿ ಮತ್ತಿಬ್ಬರು ಕೋಲಾಹಲ ಎಬ್ಬಿಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ನಡೆದ ಭದ್ರತಾ ಲೋಪವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೀಗ ಒಟ್ಟು ಆರು ಜನರ ಗುಂಪು ಕೆಲ ದಿನಗಳ ಹಿಂದೆಯೇ ಕಲಾಪಕ್ಕೆ ನುಗ್ಗಲು ಸಂಘಟಿತ ಪ್ಲಾನ್​ ಮಾಡಿತ್ತು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಲೋಕಸಭೆಯಲ್ಲಿ ಸದಸ್ಯರು ಶೂನ್ಯ ವೇಳೆಯಲ್ಲಿ ಮಾತನಾಡುತ್ತಿದ್ದಾಗಲೇ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದಾರೆ. ಹಳದಿ ಬಣ್ಣದ ಸ್ಟ್ರೇ ಬಿಡುಗಡೆ ಮಾಡಿ ಆತಂಕ ಸೃಷ್ಟಿಸಿದ್ದಾರೆ. ಅದೇ ಸಮಯದಲ್ಲಿ ಸಂಸತ್ತಿನ ಆವರಣದ ಹೊರಗೆ ಒಬ್ಬ ಮಹಿಳೆ ಸೇರಿದಂತೆ ಮತ್ತಿಬ್ಬರು ಘೋಷಣೆಗಳನ್ನು ಕೂಗಿ ಸ್ಟ್ರೇ ಮಾಡುತ್ತಾ ಕೋಲಾಹಲ ಉಂಟು ಮಾಡಿದ್ದಾರೆ. ಈ ಘಟನೆಯ ಆರಂಭದಲ್ಲೇ ಓರ್ವ ಮಹಿಳೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಐದನೇ ವ್ಯಕ್ತಿಯನ್ನು ಸೆರೆಹಿಡಿದ್ದಾರೆ. ಅಲ್ಲದೇ, ಆರನೇ ವ್ಯಕ್ತಿಯ ಬಂಧನಕ್ಕಾಗಿ ಬಲೆಬೀಸಿದ್ದಾರೆ.

ಲೋಕಸಭೆಗೆ ನುಗ್ಗಿದ ಆರೋಪಿಗಳನ್ನು ಕರ್ನಾಟಕದ ಮೈಸೂರು ಮೂಲದ ಮನೋರಂಜನ್.ಡಿ (34) ಹಾಗೂ ಉತ್ತರ ಪ್ರದೇಶದ ಲಖನೌ ಮೂಲದ ಸಾಗರ್ ಶರ್ಮಾ (26) ಎಂದು ಗುರುತಿಸಲಾಗಿದೆ. ಸಂಸತ್ತಿನ ಹೊರಗೆ ಸಿಕ್ಕಿಬಿದ್ದಿರುವ ಆರೋಪಿಗಳನ್ನು ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ (25) ಮತ್ತು ಹರಿಯಾಣದ ಹಿಸಾರ್‌ ಮೂಲದ ನೀಲಂ (42) ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೀಗ ಇವರ ಮತ್ತಿಬ್ಬರು ಸಹಚರರನ್ನು ಲಲಿತ್ ಮತ್ತು ವಿಕ್ರಮ್ ಎಂದು ಗುರುತಿಸಲಾಗಿದೆ. ಗುರುಗ್ರಾಮದಲ್ಲಿ ವಿಕ್ರಮ್‌ನನ್ನು ಬಂಧಿಸಲಾಗಿದ್ದು, ಲಲಿತ್‌ನ ಬಂಧನಕ್ಕೆ ದೆಹಲಿ ಪೊಲೀಸ್ ತಂಡಗಳು ಬಲೆ ಬೀಸಿವೆ ಎಂದು ಮೂಲಗಳು ತಿಳಿಸಿವೆ.

ಸೋಷಿಯಲ್​ ಮೀಡಿಯಾದಲ್ಲೇ ಸಿದ್ಧವಾಗಿತ್ತು ಪ್ಲಾನ್​!: ಸಂಸತ್ತಿನ ಭದ್ರತಾ ಲೋಪವು ಆರು ಜನರು ಉತ್ತಮವಾಗಿ ಯೋಜಿತ ಮತ್ತು ಸಂಘಟಿತ ಘಟನೆ. ಇವರೆಲ್ಲರೂ ಇನ್​​ಸ್ಟಾಗ್ರಾಮ್​ ಮತ್ತು ಇತರ ಸಾಮಾಜಿಕ ಜಾಲತಾಣಗಳ ವೇದಿಕೆಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಅಲ್ಲಿಯೇ ತಮ್ಮ ಯೋಜನೆಯನ್ನು ರೂಪಿಸಿದ್ದರು ಎಂದು ದೆಹಲಿ ಪೊಲೀಸ್​ ಮೂಲಗಳು ಹೇಳಿವೆ.

ಇಬ್ಬರಿಗೆ ಮಾತ್ರ ಪಾಸ್‌ಗಳು ಲಭ್ಯ!: ಅಲ್ಲದೇ, ಈ ಆರೋಪಿಗಳು ಕೆಲವು ದಿನಗಳ ಹಿಂದೆಯೇ ಈ ಯೋಜನೆ ಸಿದ್ಧಪಡಿದ್ದರು. ಬುಧವಾರ ಸಂಸತ್ತಿಗೆ ಬರುವ ಮೊದಲೂ ಚರ್ಚಿಸಿದ್ದರು. ಒಟ್ಟು ಆರು ಜನರಲ್ಲಿ ಐವರು ಸಂಸತ್ತಿಗೆ ಬರುವ ಮೊದಲು ಗುರುಗ್ರಾಮ್‌ನಲ್ಲಿರುವ ವಿಕ್ರಮ್​ನ ನಿವಾಸದಲ್ಲಿ ತಂಗಿದ್ದರು. ತಮ್ಮ ಪ್ಲಾನ್​ ಪ್ರಕಾರ, ಎಲ್ಲ ಆರು ಮಂದಿ ಸಹ ಸಂಸತ್ತಿನ ಒಳಗೆ ಹೋಗಲು ಬಯಸಿದ್ದರು. ಆದರೆ, ಇಬ್ಬರಿಗೆ ಮಾತ್ರ ಪಾಸ್‌ಗಳು ಸಿಕ್ಕಿದ್ದವು ಎಂದು ಮೂಲಗಳು ತಿಳಿಸಿವೆ.

ಮಣಿಪುರ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ: ಬಂಧಿತ ಅಮೋಲ್ ಶಿಂಧೆಯ ವಿಚಾರಣೆ ವೇಳೆ ಈ ಮಾಹಿತಿ ಹೊರ ಬಂದಿದೆ. ಆರು ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರೆಲ್ಲರೂ ಒಂದೇ ಸಿದ್ಧಾಂತ ಹೊಂದಿದ್ದರು. ಆದ್ದರಿಂದ ಸರ್ಕಾರಕ್ಕೆ ಸಂದೇಶ ನೀಡಲು ನಿರ್ಧರಿಸಿದ್ದರು. ಇವರಿಗೆ ಯಾರಾದರೂ ಅಥವಾ ಯಾವುದೇ ಸಂಸ್ಥೆಯಿಂದ ಇಂತಹ ಸೂಚನೆ ನೀಡಲಾಗಿತ್ತೇ ಬಗ್ಗೆ ಖಚಿತಪಡಿಸಿಕೊಳ್ಳಲು ಭದ್ರತಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಇಷ್ಟೇ ಅಲ್ಲ, ವಿಚಾರಣೆ ಸಮಯದಲ್ಲಿ ಅಮೋಲ್ ರೈತರ ಪ್ರತಿಭಟನೆಯಂತಹ ವಿಷಯಗಳಿಂದ ಅಸಮಾಧಾನಗೊಂಡಿದ್ದ. ಮಣಿಪುರ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳಿಂದಾಗಿಯೇ ಇವರೆಲ್ಲರೂ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

ಪಿಜಿಯಲ್ಲಿ ವಾಸವಾಗಿದ್ದ ನೀಲಂ: ಬಂಧಿತ ಐವರ ಪೈಕಿ ಒಬ್ಬಳಾದ ನೀಲಂ ಹರಿಯಾಣದ ಜಿಂದ್ ಜಿಲ್ಲೆಯ ನಿವಾಸಿ. ಹಿಸಾರ್‌ನಲ್ಲಿ ಪಿಜಿಯಲ್ಲಿ ವಾಸವಾಗಿದ್ದ ನೀಲಂ ಹರಿಯಾಣ ಸಿವಿಲ್ ಸರ್ವೀಸ್‌ಗೆ ತಯಾರಿ ನಡೆಸುತ್ತಿದ್ದಾಳೆ ಎಂದು ಆಕೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಬೆಳಗ್ಗೆಯೇ ನೀಲಂ ಜೊತೆ ಮಾತನಾಡಿದ್ದ. ಆಗ ಈಕೆ ಏನೂ ಹೇಳಲಿಲ್ಲ. ಟಿವಿಯಲ್ಲಿ ಸುದ್ದಿ ನೋಡಿದ ಬಳಿಕ ಈ ವಿಷಯ ತಿಳಿಯಿತು. ಆಕೆ ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಸಂಸತ್ತಿನಲ್ಲಿ ಯಾಕೆ ಹೀಗೆ ಮಾಡಿದಳು?, ಆಕೆಯ ಭೇಟಿಯಾದ ನಂತರವೇ ಈ ಬಗ್ಗೆ ತಿಳಿಯಲಿದೆ ಎಂದು ಸಹೋದರ ಹೇಳಿದ್ದಾನೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಭದ್ರತಾ ಲೋಪ: ನಾಲ್ವರ ಬಂಧನ, ಆರೋಪಿಗಳ ಗುರುತು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.