ETV Bharat / bharat

ಮಗಳಿಗೆ ದೆವ್ವ ಹಿಡಿದಿದೆ ಎಂದು ಥಳಿಸಿ ಹತ್ಯೆ: ಪೋಷಕರ ಬಂಧನ

author img

By

Published : Aug 7, 2022, 7:42 PM IST

ಐದು ವರ್ಷದ ಮಗಳಿಗೆ ಮಗಳಿಗೆ ದೆವ್ವ ಹಿಡಿದಿದೆ ಎಂದು ಆಕೆಯನ್ನು ಪೋಷಕರು ಹೊಡೆದು ಕೊಂಡಿದ್ದಾರೆ. ಪರಿಣಾಮ ಪೋಷಕರು ಬಂಧಿಸಲಾಗಿದೆ.

ಮಗಳಿಗೆ ದೆವ್ವ ಹಿಡಿದಿದೆ ಎಂದು ಹತ್ಯೆ
ಮಗಳಿಗೆ ದೆವ್ವ ಹಿಡಿದಿದೆ ಎಂದು ಹತ್ಯೆ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ತಮ್ಮ ಮಗಳಿಗೆ ‘ಬ್ಲಾಕ್ ಮ್ಯಾಜಿಕ್’ ಮಾಡುತ್ತಿದ್ದ ವೇಳೆ ಆಕೆಯನ್ನು ಹೊಡೆದು ಕೊಂದ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ ಸುಭಾಷ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಹಾಗೂ ಬಾಲಕಿಯ ಚಿಕ್ಕಮ್ಮನನ್ನು ಬಂಧಿಸಿದ್ದಾರಂತೆ.

ಆರೋಪಿಗಳನ್ನು ಪೋಷಕರಾದ ಸಿದ್ಧಾರ್ಥ್ ಚಿಮನೆ (45) ಮತ್ತು ರಂಜನಾ (42) ಹಾಗೂ ಪ್ರಿಯಾ ಬನ್ಸೋದ್ (32) ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ದೇಗುಲಕ್ಕೆ ಭೇಟಿ ನೀಡಿದ ನಂತರ ಚಿಮನೆ ತನ್ನ ಕಿರಿಯ ಮಗಳಲ್ಲಿ ವರ್ತನೆಯ ಬದಲಾವಣೆಗಳನ್ನು ಕಂಡುಕೊಂಡಿದ್ದನಂತೆ. ಇದರ ನಂತರ ದಂಪತಿ ಮತ್ತು ಬಾಲಕಿಯ ಚಿಕ್ಕಮ್ಮ ಅಪ್ರಾಪ್ತೆಯನ್ನು ಸಮಸ್ಯೆಯಿಂದ ಮುಕ್ತಗೊಳಿಸಲು ಧಾರ್ಮಿಕ ಕ್ರಿಯೆಗಳನ್ನು ನಡೆಸಲು ನಿರ್ಧರಿಸಿದ್ದಾರೆ.

ಬಾಲಕಿಗೆ ಯಾವುದೋ ದೆವ್ವ ಹಿಡಿದುಕೊಂಡಿದೆ ಎಂದು ಪೋಷಕರು ಆಕೆಗೆ ಪ್ರಶ್ನೆಗಳ ಸುರಿಮಳಗೆ ಗೈದಿದ್ದಾರೆ. ಆ ವೇಳೆ ಬಾಲಕಿ ಹೆದರಿ ಉತ್ತರಿಸದಿದ್ದಕ್ಕೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಆಕೆಯನ್ನು ನಗರದ ಜಿಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಆರೋಪಿಗಳು ಆಸ್ಪತ್ರೆ ಆವರಣದಿಂದ ಪರಾರಿಯಾಗಿದ್ದರು ಆದರೆ ಸಿಸಿಟಿವಿ ದೃಶ್ಯಾವಳಿ ಮತ್ತು ವಾಹನ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಾಸನ: ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾದ ಖತರ್ನಾಕ್ ಖದೀಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.