ETV Bharat / bharat

ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ನೇತೃತ್ವದಲ್ಲಿ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ತೆರಳಿದ ನಿಯೋಗ

author img

By

Published : Nov 18, 2021, 1:16 PM IST

ಹಲವು ತಿಂಗಳ ಬಳಿಕ ನವೆಂಬರ್​ 17ರಿಂದ ಕರ್ತಾರ್​ಪುರ ಸಾಹಿಬ್​ ಕಾರಿಡಾರ್ (Kartarpur Sahib Gurdwara) ತೆರೆದಿದ್ದು, 21 ಬಿಜೆಪಿ ಸದಸ್ಯರ ನಿಯೋಗ ಇಂದು ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ತೆರಳಿದೆ. ಈ ಪವಿತ್ರ ಸ್ಥಳಕ್ಕೆ ರಾಜಕೀಯ ನಿಯೋಗ ತೆರಳಿದ್ದು ಇದೇ ಮೊದಲು.

Panjab BJP delegation went to Kartarpur Sahib gurdwara
ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ನೇತೃತ್ವದಲ್ಲಿ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ತೆರಳಿದ ನಿಯೋಗ

ಪಂಜಾಬ್: ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ನೇತೃತ್ವದ 21 ಸದಸ್ಯರ ನಿಯೋಗ ಇಂದು ಕರ್ತಾರ್‌ಪುರ ಕಾರಿಡಾರ್ ಮೂಲಕ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ (Kartarpur Sahib Gurdwara) ತೆರಳಿದೆ.

ಬಿಜೆಪಿ ನಿಯೋಗವು ಕರ್ತಾರ್‌ಪುರ ಸಾಹಿಬ್ ಗುರುದ್ವಾರದಲ್ಲಿ ನಮನ ಸಲ್ಲಿಸಲಿದೆ ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಮುಖ್ಯ ಚೆಕ್​ಪೋಸ್ಟ್​​ ಬಳಿ ಮಾಧ್ಯಮದವರಿಗೆ ತಿಳಿಸಿದರು. ಪ್ರಾರ್ಥನೆಯನ್ನು ಗುರುನಾನಕ್ ದೇವ್ ಅವರು ಸ್ವೀಕರಿಸಿದ್ದಾರೆ ಅಂತ ನಂಬಿದ್ದೇವೆ ಎಂದರು. ಕರ್ತಾರ್‌ಪುರ ಕಾರಿಡಾರ್ ಅನ್ನು ಮತ್ತೆ ತೆರೆದಿರುವುದಕ್ಕೆ ಮೋದಿ ಸರ್ಕಾರಕ್ಕೆ ಧನ್ಯವಾದ ಸಮರ್ಪಿಸಿದರು.

ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲದಿಂದ ಸಿಖ್ಖರ ಪವಿತ್ರ ಸ್ಥಳವಾದ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್​ಗೆ (Gurdwara Darbar Sahib in Pakistan)ಸಂಪರ್ಕ ಕಲ್ಪಿಸುವ ಕರ್ತಾರ್​ಪುರ ಸಾಹಿಬ್​ ಕಾರಿಡಾರ್​(Kartarpur corridor reopen) ಬುಧವಾರದಿಂದ ಪುನಾರಂಭವಾಗಿದೆ. ಕೋವಿಡ್​ ಹಿನ್ನೆಲೆ, 2020ರ ಮಾರ್ಚ್​ನಿಂದ ಭಾರತದ ಯಾತ್ರಾರ್ಥಿಗಳಿಗೆ ಅಲ್ಲಿಗೆ ತೆರಳಲು ಅವಕಾಶ ಇರಲಿಲ್ಲ. ಹಲವು ತಿಂಗಳ ಬಳಿಕ ನವೆಂಬರ್​ 17ರಿಂದ ಅವಕಾಶ ಕಲ್ಪಿಸಿದ್ದು, ಬಿಜೆಪಿ 21 ಸದಸ್ಯರ ನಿಯೋಗ ಇಂದು ತೆರಳಿದೆ. ಈ ಪವಿತ್ರ ಸ್ಥಳಕ್ಕೆ ರಾಜಕೀಯ ನಿಯೋಗ ತೆರಳಿದ್ದು ಇದೇ ಮೊದಲು ಎನ್ನಲಾಗ್ತಿದೆ.

ಗುರುನಾನಕ್ ದೇವ್ ಅವರ ಜಯಂತಿ ಹಿನ್ನೆಲೆ ಅವರ ಪವಿತ್ರ ಸ್ಥಳವಾದ ಗುರುದ್ವಾರ ದರ್ಬಾರ್​ ಸಾಹಿಬ್​ಗೆ ಸಿಖ್​ ಯಾತ್ರಾರ್ಥಿಗಳು ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಪಾಕಿಸ್ತಾನವೂ ಸಮ್ಮತಿಸಿದೆ.

ಇದನ್ನೂ ಓದಿ: ಸಿಖ್​ ಯಾತ್ರಿಗಳಿಗಾಗಿ ನಾಳೆಯಿಂದ ಕರ್ತಾರ್​ಪುರ ಸಾಹಿಬ್​ ಕಾರಿಡಾರ್​ ಪುನಾರಂಭ

855 ಭಕ್ತರು ವಾಘಾ-ಅಟ್ಟಾರಿ ಗಡಿ ಮೂಲಕ ಕರ್ತಾರ್‌ಪುರಕ್ಕೆ ತೆರಳಿದ್ದಾರೆ. ಅವರ ಪ್ರಯಾಣದ ವ್ಯವಸ್ಥೆಯನ್ನು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (SGPC) ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.