ETV Bharat / bharat

ಶುಕ್ರವಾರದ ಪ್ರಾರ್ಥನೆಯನ್ನು ಶಾಂತಿಯುತವಾಗಿ ನಡೆಸುವಂತೆ ಓವೈಸಿ ಮನವಿ

author img

By

Published : Aug 26, 2022, 8:54 AM IST

ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರು ಯೂಟ್ಯೂಬ್‌ನಲ್ಲಿ ಹರಿಬಿಟ್ಟಿದ್ದ ವಿಡಿಯೋ ಭಾರಿ ವಿವಾದ ಸೃಷ್ಟಿಸಿತ್ತು. ಪ್ರವಾದಿ ಮೊಹಮ್ಮದ್ ಅವಹೇಳನ ಮಾಡುವ ವಿಡಿಯೋ ಇದಾಗಿತ್ತು ಎಂದು ಆರೋಪಿಸಲಾಗಿದೆ.

AIMIM chief Asaduddin Owaisi
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

ಹೈದರಾಬಾದ್(ತೆಲಂಗಾಣ): ಶುಕ್ರವಾರದ ಪ್ರಾರ್ಥನೆಯನ್ನು ಶಾಂತಿಯುತವಾಗಿ ನಡೆಸುವಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜನರಿಗೆ ಮನವಿ ಮಾಡಿದ್ದಾರೆ. ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಾಗಿ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್​​ ಅವರನ್ನು ಬಂಧಿಸಿ ಅಮಾನತುಗೊಳಿಸಬೇಕೆಂಬ ತಮ್ಮ ದೊಡ್ಡ ಬೇಡಿಕೆ ಈಡೇರಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರದ ಪ್ರಾರ್ಥನೆ ನಂತರ ದೇಶದ ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಘೋಷಣೆಗಳನ್ನು ಮಾಡಬೇಡಿ ಎಂದು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಶಾಂತಿ ನೆಲೆಸಲಿ. ನಮ್ಮ ದೊಡ್ಡ ಬೇಡಿಕೆ - ಆತನನ್ನು ಬಂಧಿಸುವುದು ಎಂದು ಓವೈಸಿ ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ: ಬಿಜೆಪಿ ಶಾಸಕ ಟಿ ರಾಜಾ ಸಿಂಗ್​​ ಪಕ್ಷದಿಂದ ಅಮಾನತು

ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್ (ಪಿಡಿ ಆಕ್ಟ್) ಅಡಿಯಲ್ಲಿ ನಿನ್ನೆ(ಆ.25) ಸಿಂಗ್ ಅವರನ್ನು ಬಂಧಿಸಲಾಗಿದ್ದು, ಚೆರಿಯಪಲ್ಲಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸಿಂಗ್​​ ವಿರುದ್ಧ 101 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವರು 18 ಕೋಮು ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಂಗ್ ಅವರು ಪ್ರಚೋದನಕಾರಿ ಭಾಷಣಗಳ ಮೂಲಕ ಸಮುದಾಯಗಳ ನಡುವೆ ಬಿರುಕು ಮೂಡಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಯೂಟ್ಯೂಬ್‌ನಲ್ಲಿ ಸಿಂಗ್ ಬಿಡುಗಡೆ ಮಾಡಿದ ವಿಡಿಯೋವನ್ನು ಉಲ್ಲೇಖಿಸಿದ ಪೊಲೀಸರು, ವಿಡಿಯೋ ವೈರಲ್ ಆದ ನಂತರ ಹೈದರಾಬಾದ್ ನಗರದ ವಿವಿಧ ಭಾಗಗಳಲ್ಲಿ ಮತ್ತು ತೆಲಂಗಾಣದ ಇತರ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇದು ಸಮುದಾಯಗಳ ನಡುವೆ ಬಿರುಕು ಮೂಡಿಸಿತು ಮತ್ತು ಹೈದರಾಬಾದ್ ಮತ್ತು ತೆಲಂಗಾಣದ ಶಾಂತಿಯುತ ವಾತಾವರಣ ಕದಡಿದೆ ಎಂದು ಹೇಳಿದರು.

ಪ್ರವಾದಿ ಮೊಹಮ್ಮದ್ ಮತ್ತು ಅವರ ಜೀವನಶೈಲಿಯ ವಿರುದ್ಧ ಸಿಂಗ್​​ ಧರ್ಮನಿಂದನೆ ಕಾಮೆಂಟ್ ಮಾಡಿದ್ದಾನೆ. ಈ ಹಿಂದೆ ಮಂಗಳವಾರ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ, ನ್ಯಾಯಾಲಯದ ಆದೇಶದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(ಎ), 295, ಮತ್ತು 505ರ ಅಡಿ ದಬೀರ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿವಾದಿತ ಹೇಳಿಕೆ.. ರಾಜಾಸಿಂಗ್​ ವಿರುದ್ಧ ರಾತ್ರೋರಾತ್ರಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.