ETV Bharat / bharat

ಒವೈಸಿ ಪಕ್ಷಕ್ಕಿಂತ ನೋಟಾಗೆ ಬಿದ್ದ ಮತಗಳೇ ಹೆಚ್ಚು; ಸ್ಪರ್ಧಿಸಿದ 100 ಸ್ಥಾನಗಳಲ್ಲಿ 99ರಲ್ಲಿ ಠೇವಣಿ ನಷ್ಟ!

author img

By

Published : Mar 11, 2022, 5:24 PM IST

ಮುಸ್ಲಿಮರ ಸೈದ್ಧಾಂತಿಕ ನೆಲೆಯ ಮೇಲೆ ರಚಿತವಾಗಿರುವ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಉತ್ತರಪ್ರದೇಶ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಪಕ್ಷ ಸ್ಪರ್ಧಿಸಿದ್ದ 100 ಸ್ಥಾನಗಳ ಪೈಕಿ 99 ರಲ್ಲಿ ಠೇವಣಿ ಕಳೆದುಕೊಂಡಿದೆ. ಅದರಲ್ಲೂ ಚಲಾವಣೆಯಾದ ನೋಟಾಕ್ಕಿಂತಲೂ ಕಡಿಮೆ ಮತ ಪಡೆದು ತೀವ್ರ ಮುಖಭಂಗ ಅನುಭವಿಸಿದೆ.

owaisi
ಓವೈಸಿ

ನವದೆಹಲಿ: ಸಂಸದ ಅಸಾದುದ್ದೀನ್​ ಓವೈಸಿ ಅವರ ಎಐಎಂಐಎಂ ಪಕ್ಷ ಉತ್ತರಪ್ರದೇಶದಲ್ಲಿ ಈ ಬಾರಿ ಸದ್ದು ಮಾಡಲಿದೆ ಎಂದೇ ಭಾವಿಸಲಾಗಿತ್ತು. ಮುಸ್ಲಿಮರ ಮತಗಳನ್ನು ಒಡೆಯುವ ಮೂಲಕ ಸಮಾಜವಾದಿ ಪಕ್ಷಕ್ಕೆ ಪೆಟ್ಟು ನೀಡಲಿದೆ ಎಂದು ರಾಜಕೀಯ ವಿಶ್ಲೇಷಕರ ವಾದವಾಗಿತ್ತು.

ಆದರೆ, ಮತದಾರ ಇದೆಲ್ಲನ್ನೂ ಬುಡಮೇಲು ಮಾಡಿದ್ದಾನೆ. ಸಮಾಜವಾದಿ ಪಕ್ಷಕ್ಕೆ ಸೆಡ್ಡು ಒಡೆಯಲು ಹೋಗಿ ಆ ಪಕ್ಷವೇ ಸಂಪೂರ್ಣ ನೆಲಕಚ್ಚಿದೆ. 100 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ ಪಕ್ಷದ ಅಭ್ಯರ್ಥಿಗಳ ಪೈಕಿ 99 ಜನರು ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿದ್ದಾರೆ.

ನೋಟಾಗೆ ಬಿದ್ದ ಮತವೇ ಹೆಚ್ಚು: ಉತ್ತರಪ್ರದೇಶದಲ್ಲಿ ಅಸಾದುದ್ದೀನ್​ ಓವೈಸಿ ಪಕ್ಷದ ದುಸ್ಥಿತಿ ಹೇಗಿದೆ ಅಂದ್ರೆ ಜನರು ಯಾವ ಪಕ್ಷಕ್ಕೂ ಮತ ಹಾಕಲು ಇಚ್ಚಿಸದೇ ನೋಟಾಗೆ ಹಾಕುವ ಮತಗಳಿಗಿಂತಲೂ ಕಡಿಮೆ ಸಂಖ್ಯೆಯ ಮತಗಳನ್ನು ಪಡೆದಿದೆ. ಇಡೀ ರಾಜ್ಯದಲ್ಲಿ ಪಕ್ಷ 0.4 ರಷ್ಟು ಮತಗಳನ್ನು ಪಡೆದಿದೆ. ವಿಶೇಷ ಅಂದರೆ ಚುನಾವಣೆಯಲ್ಲಿ ಚಲಾವಣೆಯಾದ ನೋಟಾ ಮತಗಳು ಶೇ.0.69.

ಚುನಾವಣೆಗೂ ಮುನ್ನ ಅಸಾದುದ್ದೀನ್ ಓವೈಸಿ ಪ್ರಚಾರದ ವೇಳೆ 25 ರಿಂದ 30 ಸ್ಥಾನಗಳನ್ನು ಪಕ್ಷ ಪಡೆಯಲಿದೆ ಎಂದು ಹೇಳಿದ್ದರು. ಹೀಗಾದಲ್ಲಿ ಇದು ಬಿಜೆಪಿಗಿಂತಲೂ, ಅಧಿಕಾರಕ್ಕೇರಲು ಹವಣಿಸುತ್ತಿರುವ ಸಮಾಜವಾದಿ ಪಕ್ಷಕ್ಕೆ ಭಾರಿ ಪೆಟ್ಟು ನೀಡಲಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗಿತ್ತು. ಆದರೆ, ಫಲಿತಾಂಶದ ಪಕ್ಷ ದಿಕ್ಕಾಪಾಲಾಗಿ, ನೋಟಾಕ್ಕಿಂತಲೂ (ಯಾರಿಗೂ ಹಾಕದ ಮತ) ಕಡಿಮೆ ಪ್ರಮಾಣದಲ್ಲಿ ಮತಗಳಿಸಿ ಒಂದೂ ಸ್ಥಾನ ಗೆಲ್ಲದೇ ತೀರಾ ಕಳಪೆ ಸಾಧನೆ ಮಾಡಿದೆ.

ಸಂಸದ ಅಸಾದುದ್ದೀನ್​ ಓವೈಸಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ ಬೆವರು ಹರಿಸಿದ್ದರು. ಇಲ್ಲಿ ಅನೇಕ ರ್ಯಾಲಿಗಳನ್ನು ಮಾಡಿದ್ದರು. ಈ ವೇಳೆ ಬಿಜೆಪಿ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷವನ್ನು ತೀವ್ರವಾಗಿ ಟೀಕಿಸಿದ್ದರು. ಅಲ್ಲದೇ, ಬಾಬು ಸಿಂಗ್ ಕುಶ್ವಾಹ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

2017 ಕ್ಕಿಂತಲೂ ಉತ್ತಮ: 100 ಸ್ಥಾನಗಳಲ್ಲಿ ಸ್ಪರ್ಧಿಸಿ ಸೋತಿರುವ ಓವೈಸಿ ಪಕ್ಷ, 2017ರ ಚುನಾವಣೆಗಿಂತಲೂ ಅತ್ಯಲ್ಪ ಪ್ರಮಾಣದಲ್ಲಿ ಮತಗಳಿಕೆಯಲ್ಲಿ ಚೇತರಿಕೆ ಕಂಡಿದೆ. 2017ರಲ್ಲಿ ಪಕ್ಷ 38 ಅಭ್ಯರ್ಥಿಗಳನ್ನು ಕಣಕ್ಕಿಳಿ ಸುಮಾರು 2 ಲಕ್ಷ ಮತಗಳನ್ನು ಪಡೆದಿದ್ದರೆ, ಈ ಬಾರಿ 100 ಅಭ್ಯರ್ಥಿಗಳು 22 ಲಕ್ಷ ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: 1 ಲಕ್ಷ+ ಕ್ಲಬ್​.. ಉತ್ತರಪ್ರದೇಶದಲ್ಲಿ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದವರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.