ETV Bharat / bharat

ಶೂನ್ಯ ಬಂಡವಾಳದಲ್ಲಿ ವಿಷ ಮುಕ್ತ ಕೃಷಿ; 2 ಎಕರೆ ಜಾಗದಲ್ಲಿ ರೈತನಿಗೆ ಕೈತುಂಬಾ ಪ್ರತಿ'ಫಲ'

author img

By

Published : Jul 24, 2021, 6:03 AM IST

ಹರಿಯಾಣದ ಕರ್ನಾಲ್ ಜಿಲ್ಲೆಯ ನಾಸಿರ್​ಪುರ ಗ್ರಾಮದ ರೈತ ಜಗತ್​ರಾಮ್ ಕೂಡ ಇದೇ ರೀತಿಯ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಅದರಿಂದಾಗಿ ಅವರು ವಿಷ ಮುಕ್ತ ಕೃಷಿ ಮಾಡಲು ನಿರ್ಧರಿಸಿದರು. 13 ವರ್ಷಗಳ ಹಿಂದೆ ಅವರು ಆರಂಭಿಸಿದ ಕೃಷಿ ಇಂದು ಇತರರಿಗೆ ಸ್ಫೂರ್ತಿಯಾಗಿದೆ.

Organic farming in Haryana
ವಿಷ ಮುಕ್ತ ಬೆಳೆ

ಕರ್ನಾಲ್ (ಹರಿಯಾಣ): ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚಾಗಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಬಳಸುವ ಕೀಟನಾಶಕಗಳೇ ಇದರ ಹಿಂದಿನ ಪ್ರಮುಖ ಕಾರಣವೆಂದು ಬಿಡಿಸಿ ಹೇಳಬೇಕಿಲ್ಲ.

ಕೀಟಗಳನ್ನು ತೊಡೆದುಹಾಕಲು ರೈತರು ಕೀಟನಾಶಕಗಳನ್ನು ಬಳಸುತ್ತಾರೆ. ಇದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹರಿಯಾಣದ ಕರ್ನಾಲ್ ಜಿಲ್ಲೆಯ ನಾಸಿರ್​ಪುರ ಗ್ರಾಮದ ರೈತ ಜಗತ್​ರಾಮ್ ಕೂಡ ಇದೇ ರೀತಿಯ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಅದರಿಂದಾಗಿ ಅವರು ವಿಷಮುಕ್ತ ಕೃಷಿ ಮಾಡಲು ನಿರ್ಧರಿಸಿದರು. 13 ವರ್ಷಗಳ ಹಿಂದೆ ಅವರು ಆರಂಭಿಸಿದ ಕೃಷಿ ಇಂದು ಇತರರಿಗೆ ಸ್ಫೂರ್ತಿಯಾಗಿದೆ.

ಶೂನ್ಯ ಬಂಡವಾಳ ಕೃಷಿ ಆರಂಭಿಸಿದ ರೈತ

ಶೂನ್ಯ ಬಂಡವಾಳ ಕೃಷಿಯ ಬಗ್ಗೆ ತಿಳಿದುಕೊಳ್ಳಲು ನೂರಾರು ರೈತರು ಜತ್​ರಾಮ್​ ಅವರ ಹೊಲಕ್ಕೆ ಭೇಟಿ ನೀಡುತ್ತಾರೆ. ಅವರು ಶೂನ್ಯ ಬಜೆಟ್ ಕೃಷಿ ಮತ್ತು ಸಾವಯವ ಕೃಷಿಯ ತಂತ್ರಗಳನ್ನು ಇತರ ರೈತರಿಗೆ ಸಹ ಕಲಿಸುತ್ತಿದ್ದಾರೆ. ಇದರಿಂದ ರೈತರು ಶುದ್ಧ ಸಾವಯವ ಉತ್ಪನ್ನಗಳನ್ನು ತಯಾರಿಸಬಹುದು. ಅಲ್ಲದೇ ವಿಷಪೂರಿತ ಆಹಾರವನ್ನು ತಟ್ಟೆಯಿಂದ ತೆಗೆದು ಹಾಕಲು ಸಹಕಾರಿಯಾಗಿದೆ.

ರೈತ ಜಗತ್​ರಾಮ್​ ಅವರ ಪ್ರಕಾರ, ಅವರ ಕುಟುಂಬ ಸದಸ್ಯರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರು. ಕೀಟನಾಶಕಗಳನ್ನು ಒಳಗೊಂಡಿರುವ ಆಹಾರವೇ ಇದಕ್ಕೆ ಕಾರಣವಾಗಿತ್ತು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ವಿಷರಹಿತ ಕೃಷಿ ಮಾಡಲು ಅವರು ನಿರ್ಧರಿಸಿದರು.

ಕೀಟನಾಶಕಗಳೊಂದಿಗೆ ಸಾಗುವಳಿ ವೆಚ್ಚ ಹೆಚ್ಚು ಮತ್ತು ಲಾಭ ಕಡಿಮೆ. ಅದೇ ಸಮಯದಲ್ಲಿ, ಸಾವಯವ ಕೃಷಿಯ ವೆಚ್ಚವೂ ಕಡಿಮೆ ಮತ್ತು ಲಾಭವೂ ಹೆಚ್ಚಾಗಿದೆ.

ರೈತ ಜಗತ್​ರಾಮ್ 13 ವರ್ಷಗಳ ಹಿಂದೆ ಶೂನ್ಯ ಬಂಡವಾಳ ಕೃಷಿಯನ್ನು ಅಳವಡಿಸಿಕೊಂಡರು. ಈಗ ಅವರು ಶೂನ್ಯ ಬಜೆಟ್ ಕೃಷಿಯಿಂದ 2 ಎಕರೆ ಪ್ರದೇಶದಲ್ಲಿ ಪ್ರತಿ ತಿಂಗಳು ಲಕ್ಷಗಟ್ಟಲೆ ಹಣವನ್ನು ಗಳಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.