ETV Bharat / bharat

ಚಿನ್ನ ಕಳ್ಳಸಾಗಣೆ ಕೇಸ್​ನಲ್ಲಿ ಕೇರಳ ಸ್ಪೀಕರ್ ಹೆಸರು.. ಶ್ರೀರಾಮಕೃಷ್ಣನ್ ವಿರುದ್ಧ ನಿರ್ಣಯ ಮಂಡಿಸಿದ ಪ್ರತಿಪಕ್ಷ

author img

By

Published : Jan 21, 2021, 1:18 PM IST

Updated : Jan 21, 2021, 1:26 PM IST

ಬಹುಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ವಿಧಾನಸಭಾ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಹೆಸರು ಕೇಳಿಬಂದಿದ್ದು, ಸ್ಪೀಕರ್ ಸ್ಥಾನದಿಂದ ಅವರನ್ನು ಕೆಳಗಿಳಿಸುವಂತೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಿರ್ಣಯ ಮಂಡಿಸಿದೆ.

Kerala Assembly Speaker
ಕೇರಳ ಸ್ಪೀಕರ್

ತಿರುವನಂತಪುರಂ: ಕೇರಳದ ಬಹುಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇದೀಗ ಕೇರಳ ವಿಧಾನಸಭಾ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಹೆಸರು ಕೇಳಿಬಂದಿದೆ.

ವಿಧಾನಸಭೆಯಲ್ಲಿ ಈ ಬಗ್ಗೆ ಆಕ್ರೋಶ ಹೊರಹಾಕಿರುವ ಪ್ರತಿಪಕ್ಷವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್), ಶ್ರೀರಾಮಕೃಷ್ಣನ್ ವಿರುದ್ಧ ನಿರ್ಣಯ ಮಂಡಿಸಿದೆ. ಸ್ಪೀಕರ್ ಸ್ಥಾನದಿಂದ ಅವರನ್ನು ಕೆಳಗಿಳಿಸುವಂತೆ ಒತ್ತಾಯಿಸಿ ನಿರ್ಣಯ ಮಂಡಿಸಲಾಗಿದೆ. ಇದಕ್ಕೆ ಸ್ಪೀಕರ್​ ಉತ್ತರ ನೀಡಬೇಕೆಂದು 20 ನಿಮಿಷಗಳ ಕಾಲ ಕಾಲಾವಕಾಶವನ್ನು ಸದನದಲ್ಲಿ ನೀಡಲಾಗಿದೆ.

  • Kerala: The opposition UDF moves a resolution against Kerala assembly speaker P Sreeramakrishnan over his association with gold smuggling case accused. The House is discussing the resolution pic.twitter.com/DqGO4QwFdI

    — ANI (@ANI) January 21, 2021 " class="align-text-top noRightClick twitterSection" data=" ">

ಮಾಧ್ಯಮಗಳ ಊಹಾಪೋಹಗಳನ್ನು ಆಧರಿಸಿ ಸ್ಪೀಕರ್ ವಿರುದ್ಧ ಎದ್ದಿರುವ ಆರೋಪಕ್ಕೆ ರಾಜ್ಯ ವಿಧಾನಸಭೆಯಲ್ಲಿ ಚರ್ಚಿಸುವುದು, ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸಿಪಿಐ (ಎಂ) ಮುಖಂಡ ಎಸ್.ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾ: "ದೇಶದ್ರೋಹಿಗಳನ್ನು ಶೂಟ್ ಮಾಡಿ" ಎಂದ ಬಿಜೆಪಿ ಕಾರ್ಯಕರ್ತರ ಬಂಧನ

2019ರ ಜುಲೈ 5 ರಂದು ತಿರುವನಂತಪುರಂನಲ್ಲಿ 14.82 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದನ್ನು ಕಸ್ಟಮ್ಸ್​ ಅಧಿಕಾರಿಗಳು ಪತ್ತೆ ಮಾಡಿದ್ದರು. ಪ್ರಕರಣದ ತನಿಖೆಯನ್ನು ಇಡಿ ಹಾಗೂ ಸಿಬಿಐ ನಡೆಸುತ್ತಿದ್ದು, ಈಗಾಗಲೇ ಕೆಲ ಆರೋಪಿಗಳನ್ನು ಬಂಧಿಸಿದೆ.

Last Updated : Jan 21, 2021, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.