ETV Bharat / bharat

ಉದ್ಯಮಿ ಮನೆ ಮೇಲೆ ದಾಳಿ.. CGST ಅಧಿಕಾರಿಗಳ ತಂಡದ ಮೇಲೆ ಮಾರಣಾಂತಿಕ ಹಲ್ಲೆ

author img

By

Published : Aug 13, 2022, 4:01 PM IST

ಉದ್ಯಮಿಯೋರ್ವರ ನಿವಾಸದ ಮೇಲೆ ದಾಳಿ ನಡೆಸಿದ್ದ ಸಿಜಿಎಸ್​​ಟಿ ಅಧಿಕಾರಿಗಳ ಮೇಲೆ ದಾಳಿ ನಡೆಸಿರುವ ಘಟನೆ ಪಂಜಾಬ್​ನ ಲೂಧಿಯಾನದಲ್ಲಿ ನಡೆದಿದೆ.

CGST officials attacked in Ludhiana
CGST officials attacked in Ludhiana

ಲೂಧಿಯಾನ (ಪಂಜಾಬ್​): ಉದ್ಯಮಿಯೋರ್ವರ ನಿವಾಸದ ಮೇಲೆ ದಾಳಿ ನಡೆಸುವ ಉದ್ದೇಶದಿಂದ ತೆರಳಿದ್ದ ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ(CGST) ಮೇಲೆ ಹಲ್ಲೆ ನಡೆಸಲಾಗಿದೆ. ಪಂಜಾಬ್​ನ ಲೂಧಿಯಾನದಲ್ಲಿ ಈ ಘಟನೆ ನಡೆದಿದ್ದು, ಕೆಲವೊಂದು ವಿಡಿಯೋ ಹೊರಬಿದ್ದಿವೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಲೂಧಿಯಾನದಲ್ಲಿರುವ ಉದ್ಯಮಿಯೋರ್ವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಲು ತೆರಳಿದ್ದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ದಾಳಿ ನಡೆಸಿದ್ದು, ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಸಿಜಿಎಸ್​​ಟಿ ತಂಡದ ಇನ್ಸ್​ಪೆಕ್ಟರ್ ರೋಹಿತ್​ ಮೀನಾ ನೀಡಿರುವ ಮಾಹಿತಿ ಪ್ರಕಾರ, ಉದ್ಯಮಿ ಯಶಪಾಲ್ ಮೆಹ್ತಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ, ಮೆಹ್ತಾ ಕುಟುಂಬದ ಸದಸ್ಯರು ಹಲ್ಲೆ ನಡೆಸಿದ್ದು, ಕಲ್ಲು ತೂರಾಟ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಯಶಪಾಲ್ ಮೆಹ್ತಾ ಅವರ ಸೊಸೆ, ಮಗ, ಮಗಳು ಹಾಗೂ ಇತರೆ ಸಂಬಂಧಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಅಧಿಕಾರಿಗಳನ್ನು ನಿಂದಿಸಿದ್ದಾರೆ. ನಿವಾಸದಿಂದ ಹೊರಬರಲು ಮುಂದಾದ ವೇಳೆ ದಾರಿ ತಡೆದಿರುವ ಘಟನೆ ಸಹ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

CGST ಅಧಿಕಾರಿಗಳ ತಂಡದ ಮೇಲೆ ಮಾರಣಾಂತಿಕ ಹಲ್ಲೆ

ಇದನ್ನೂ ಓದಿ: ವಿಷರಹಿತ ಹಾವು, ಆಮೆ, ಕೋತಿಗಳ ಅಕ್ರಮ ಸಾಗಣೆ.. ಚೆನ್ನೈ ಏರ್​ಪೋರ್ಟ್​​ನಲ್ಲಿ ಆರೋಪಿ ಬಂಧನ

ಸಿಜಿಎಸ್​​ಟಿ ತಂಡದ ಕಾರ್ಯಕ್ಕೆ ಅಡ್ಡಿಪಡಿಸಿರುವ ಕಾರಣ ಕುಟುಂಬದ ಸದಸ್ಯರ ವಿರುದ್ಧ ಅವೆನ್ಯೂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನೆಯ ಕೆಲವೊಂದು ವಿಡಿಯೋಗಳು ಇದೀಗ ಹೊರಬಿದ್ದಿವೆ.

ಪ್ರಕರಣದಲ್ಲಿ ಯಶಪಾಲ್​ ಮೆಹ್ತಾ, ಅವರ ಸೊಸೆ ಅಲ್ಕಾ ಮೆಹ್ತಾ, ಮಗ ಸುಗಂಧನ್ ಮೆಹ್ತಾ, ಮಗಳು ಹಾಗೂ ಇತರೆ ಕೆಲ ಸದಸ್ಯರ ವಿರುದ್ಧ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 332 ಮತ್ತು 427 ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.