ETV Bharat / bharat

Omicron@77: ಈವರೆಗೆ 77 ದೇಶಗಳಿಗೆ ಹರಡಿದ ಒಮಿಕ್ರಾನ್​: ಭಾರತದಲ್ಲಿ 77 ಕೇಸ್​ಗಳು ಪತ್ತೆ

author img

By

Published : Dec 16, 2021, 12:27 PM IST

ಒಮಿಕ್ರಾನ್​ ರೂಪಾಂತರಿಯು ಹಿಂದಿನ ರೂಪಾಂತರಿಗಿಂತಲೂ ಬಹಳ ವೇಗವಾಗಿ ಹರಡುತ್ತಿದೆ. ಜನರು ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದನ್ನು ಕಂಡು ನಾವು ಕಳವಳಗೊಂಡಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

Omicron
ಒಮಿಕ್ರಾನ್

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್​ನ ಹೊಸ ರೂಪಾಂತರಿ ಒಮಿಕ್ರಾನ್​ ಭಾರತ ಸೇರಿದಂತೆ 77 ರಾಷ್ಟ್ರಗಳಿಗೆ ಹರಡಿದೆ. ಭಾರತದಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಇದೀಗ ಹೊಸ ರೂಪಾಂತರಿ ಪ್ರಕರಣಗಳ ಸಂಖ್ಯೆ 77ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳು

ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಒಮಿಕ್ರಾನ್​ ಸೋಂಕಿತರು ಪತ್ತೆಯಾಗಿದ್ದು, ಈವರೆಗೆ 32 ಪ್ರಕರಣಗಳು ವರದಿಯಾಗಿವೆ. 17 ಕೇಸ್​​ಗಳೊಂದಿಗೆ ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10, ಕೇರಳದಲ್ಲಿ 5, ಗುಜರಾತ್​ -4, ಕರ್ನಾಟಕ-3, ತೆಲಂಗಾಣ-2, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಚಂಡೀಗಢದಲ್ಲಿ ತಲಾ ಒಂದೊಂದು ಕೇಸ್​ ಪತ್ತೆಯಾಗಿದೆ.

'ಲಸಿಕೆ ಕೇವಲ ಒಂದು ಸಾಧನ'

WHO statement on Omicron: ಒಮಿಕ್ರಾನ್​ ರೂಪಾಂತರಿಯು ಹಿಂದಿನ ರೂಪಾಂತರಿಗಿಂತಲೂ ಬಹಳ ವೇಗವಾಗಿ ಹರಡುತ್ತಿದೆ. ಜನರು ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದನ್ನು ಕಂಡು ನಾವು ಕಳವಳಗೊಂಡಿದ್ದೇವೆ. ಸದ್ಯ 77 ದೇಶಗಳಿಗೆ ಒಮಿಕ್ರಾನ್​ ಸೋಂಕು ಹರಡಿರುವುದು ತಿಳಿದು ಬಂದಿದೆ. ಸಾಂಕ್ರಾಮಿಕದ ವಿರುದ್ಧ ಹೋರಾಡಲು 'ಲಸಿಕೆ' ಕೇವಲ ಒಂದು ಸಾಧನವಾಗಿದೆ. ಆದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದೇ ಎಲ್ಲದಕ್ಕಿಂತ ಮುಖ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ತಲ್ಲಣ; ದೆಹಲಿಯಲ್ಲಿ ಒಮಿಕ್ರಾನ್‌ ಪ್ರಕರಣಗಳು 10ಕ್ಕೆ ಏರಿಕೆ

ಜನವರಿ ಮಧ್ಯದ ವೇಳೆಗೆ ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳಲ್ಲಿ ಒಮಿಕ್ರಾನ್ ತನ್ನ ಪರಿಣಾಮ ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಈ ಬಾರಿ ಕೂಡ ಹೊಸ ವರ್ಷದ ಆಚರಣೆ ಕಡಿವಾಣ ಬೀಳಬಹುದು. ಯುರೋಪಿಯನ್ ಯೂನಿಯನ್ ತನ್ನ ಜನಸಂಖ್ಯೆಯ ಶೇ.66.6 ರಷ್ಟು ಮಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ನೀಡಿದ್ದು, ಒಮಿಕ್ರಾನ್ ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.