ETV Bharat / bharat

ಪಂಚರಾಜ್ಯಗಳ ಚುನಾವಣೆ ಎಫೆಕ್ಟ್​: 74 ದಿನಗಳಿಂದ ತೈಲ ದರ ಏರಿಸದ ಕೇಂದ್ರ ಸರ್ಕಾರ

author img

By

Published : Jan 18, 2022, 8:18 PM IST

ಇದಕ್ಕೂ ಮೊದಲು, ಅಂದರೆ 17 ಮಾರ್ಚ್ 2020 ರಿಂದ 6 ಜೂನ್ 2020 ರ ನಡುವೆ 82 ದಿನ ತೈಲ ದರ ಪರಿಷ್ಕರಣೆ ಮಾಡಿರಲಿಲ್ಲ. ಇದು ತೈಲ ದರ ಪರಿಷ್ಕರಣೆ ಮಾಡದ ಅತ್ಯಧಿಕ ದಿನಗಳಾಗಿವೆ.

petrol-diesel
ತೈಲ ದರ

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲದರ ಬ್ಯಾರೆಲ್​ಗೆ 87 ಡಾಲರ್​ ಏರಿಕೆ ಕಂಡರೂ, ಕೇಂದ್ರ ಸರ್ಕಾರ ದೇಶದಲ್ಲಿ ಕಳೆದ 74 ದಿನದಿಂದ ಪೆಟ್ರೋಲ್​, ಡೀಸೆಲ್ ದರ ಏರಿಕೆ ಮಾಡಿಲ್ಲ. ಇದು ಎರಡನೇ ಅತಿ ದೀರ್ಘಾವಧಿಯ ದರ ಏರಿಕೆ ಮಾಡದ ಅವಧಿಯಾಗಿದೆ.

ಅರಬ್​ನ ತೈಲ ಘಟಕದ ಮೇಲೆ ಯೆಮನ್​ನ ಹೌತಿ ದಾಳಿಕೋರರು ನಡೆಸಿದ ಡ್ರೋನ್​ ದಾಳಿಯಿಂದಾಗಿ ಉತ್ಪಾದನೆ ಮತ್ತು ಪೂರೈಕೆಯಲ್ಲಿ ವ್ಯತ್ಯಯ, ತೈಲ ಮಾನದಂಡ ಬದಲು ಕಾರಣ ಪ್ರತಿ ಬ್ಯಾರೆಲ್​ಗೆ 87.7 ಡಾಲರ್​ಗೆ ತಲುಪಿದೆ. ಇದು ದೇಶೀಯ ಇಂಧನ ದರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇತ್ತು. ಆದರೆ, ದೇಶದಲ್ಲಿ ಪಂಚರಾಜ್ಯ ಚುನಾವಣೆ ಕಾರಣ ಸರ್ಕಾರ ದರ ಏರಿಕೆ ಗೋಜಿಗೆ ಹೋಗಿಲ್ಲ.

ಇದಕ್ಕೂ ಮೊದಲು, ಅಂದರೆ 17 ಮಾರ್ಚ್ 2020 ರಿಂದ 6 ಜೂನ್ 2020 ರ ನಡುವೆ 82 ದಿನ ದರ ಪರಿಷ್ಕರಣೆ ಮಾಡಿರಲಿಲ್ಲ. ಇದು ತೈಲ ದರ ಪರಿಷ್ಕರಣೆ ಮಾಡದ ಅತ್ಯಧಿಕ ದಿನಗಳಾಗಿವೆ.

ದೆಹಲಿಯಲ್ಲಿ ಇದೀಗ ಪೆಟ್ರೋಲ್​ ದರ 95.41 ರೂಪಾಯಿ ಡೀಸೆಲ್ ಬೆಲೆ 86.67 ರೂಪಾಯಿ ಇದೆ. ಕೇಂದ್ರ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಕಡಿತ ಮಾಡುವುದಕ್ಕೂ ಮುನ್ನ ಪೆಟ್ರೋಲ್ ಬೆಲೆ ಲೀಟರ್‌ಗೆ 110.04 ರೂ.ಗೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಡೀಸೆಲ್ 98.42 ರೂ.ಗೆ ಬಂದಿತ್ತು.

2018 ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಬ್ಯಾರೆಲ್​​ಗೆ 5 ಡಾಲರ್​ ಏರಿಕೆ ಕಂಡರೂ ದೇಶದಲ್ಲಿ 19 ದಿನ ತೈಲದರ ಏರಿಕೆ ಮಾಡಿರಲಿಲ್ಲ. ಇದಕ್ಕೆ ಕಾರಣ ಕರ್ನಾಟಕ ವಿಧಾನಸಭೆ ಚುನಾವಣೆ. ಬಳಿಕ ಚುನಾವಣೆ ಮುಗಿಯುತ್ತಿದ್ದಂತೆಯೇ ತೈಲ ಕಂಪನಿಗಳು ದರ ಏರಿಕೆ ಮಾಡಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದವು.

ಇದನ್ನೂ ಓದಿ: ಸಂಕಷ್ಟದಲ್ಲಿದ್ದ ನೆರೆಯ ಶ್ರೀಲಂಕಾಗೆ ಭಾರತ ನೆರವಿನ ಹಸ್ತ; ತೈಲ ಖರೀದಿಗೆ $500 ಮಿಲಿಯನ್‌ ಸಾಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.