ETV Bharat / bharat

ಅಧಿಕಾರಿಗಳ ಭರ್ಜರಿ ಬೇಟೆ.. ಮುಂಬೈ ಏರ್​ಪೋರ್ಟ್​ನಲ್ಲಿ 4 ಕೆಜಿಗೂ ಅಧಿಕ ಅಕ್ರಮ ಚಿನ್ನ ವಶಕ್ಕೆ

author img

By

Published : Dec 5, 2022, 8:48 AM IST

Updated : Dec 5, 2022, 10:04 AM IST

ನವೆಂಬರ್ 13 ರಂದು ಕಸ್ಟಮ್ಸ್ ಅಧಿಕಾರಿಗಳು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 32 ಕೋಟಿ ರೂಪಾಯಿ ಮೌಲ್ಯದ 61 ಕೆಜಿ ಚಿನ್ನ ವಶಪಡಿಸಿಕೊಂಡಿದ್ದರು.

4712 grams of gold seized at Mumbai airport
ಮುಂಬೈ ಏರ್ ಪೋರ್ಟ್​ನಲ್ಲಿ 4712 ಗ್ರಾಂ ಚಿನ್ನ ವಶ

ಮುಂಬೈ: ಎರಡು ದಿನಗಳ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ 1.17 ಕೋಟಿ ಮೌಲ್ಯದ ಎರಡೂವರೆ ಕೆಜಿ ಚಿನ್ನವನ್ನು ಕಸ್ಟಮ್ಸ್​ ಇಲಾಖೆ ವಶಪಡಿಸಿಕೊಂಡಿತ್ತು. ಈ ಪ್ರಕರಣದಲ್ಲಿ ದಕ್ಷಿಣ ಮುಂಬೈ ನಿವಾಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣ ಇನ್ನೂ ತಾಜಾ ಆಗಿರುವಾಗಲೆ, ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಸುಮಾರು 2.5 ಕೋಟಿ ರೂ. ಮೌಲ್ಯದ ಒಟ್ಟು 4712 ಗ್ರಾಂ ಅಕ್ರಮ ಚಿನ್ನ ವಶಪಡಿಸಿಕೊಂಡಿದೆ.

ಮೊದಲ ಪ್ರಕರಣದಲ್ಲಿ ವಿಶೇಷ ವಿನ್ಯಾಸದ ಒಳ ಉಡುಪುಗಳಲ್ಲಿ ಬಚ್ಚಿಟ್ಟಿದ್ದ 1872 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದ್ದು, ಇನ್ನೊಂದು ಪ್ರಕರಣದಲ್ಲಿ ವಿಮಾನದ ಶೌಚಾಲಯದಲ್ಲಿ ಬಟ್ಟೆಯಲ್ಲಿ ಬಚ್ಚಿಟ್ಟಿದ್ದ 2840 ಗ್ರಾಂ ಚಿನ್ನಾಭರಣವನ್ನು ಕಸ್ಟಮ್ಸ್​ ಅಧಿಕಾರಿಗಳು ನಡೆಸಿದ ಶೋಧದ ವೇಳೆ ವಶಪಡಿಸಿಕೊಳ್ಳಲಾಗಿದೆ. ಎರಡು ವಿಭಿನ್ನ ಪ್ರಕರಣಗಳಲ್ಲಿ 4712 ಗ್ರಾಂ ಅಕ್ರಮ ಚಿನ್ನ ವಶಪಡಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಚಿನ್ನವನ್ನು ಎಲ್ಲಿಂದ ತರಲಾಗಿದೆ ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕಸ್ಟಮ್ಸ್​ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 13 ರಂದು ಕಸ್ಟಮ್ಸ್ ಅಧಿಕಾರಿಗಳು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 32 ಕೋಟಿ ರೂಪಾಯಿ ಮೌಲ್ಯದ 61 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಒಂದೇ ದಿನದಲ್ಲಿ ಇಲಾಖೆ ಶಪಡಿಸಿಕೊಂಡ ಅತ್ಯಧಿಕ ಮೌಲ್ಯದ ಚಿನ್ನ ಇದಾಗಿತ್ತು.

ಇದನ್ನೂ ಓದಿ: ಚಪ್ಪಲಿ, ಬನಿಯನ್, ಕಾರ್ಟನ್ ಬಾಕ್ಸ್​ನಲ್ಲಿಟ್ಟು ಗೋಲ್ಡ್​ ಸ್ಮಗ್ಲಿಂಗ್.. ಮಂಗಳೂರು ಏರ್​ಪೋರ್ಟ್​ನಲ್ಲಿ ಚಿನ್ನ ವಶಕ್ಕೆ

Last Updated : Dec 5, 2022, 10:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.