ಹೆರಿಗೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರುತ್​.. ಮಗುವಿನ ತಂದೆ ಬಗ್ಗೆ ಪ್ರತಿಕ್ರಿಯೆ ಏನು?

author img

By

Published : Sep 9, 2021, 1:52 PM IST

Nusrat Jahan

ಹೆರಿಗೆಯಾದ 15 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಟಿಎಂಸಿ ಸಂಸದೆ ನುಸ್ರುತ್ ಜಹಾನ್​ ಮಗುವಿನ ತಂದೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಮೊದಲ ಬಾರಿಗೆ ತನ್ನ ಮಗುವಿನ ತಂದೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.

ಕಳೆದ ನವೆಂಬರ್​ನಲ್ಲಿ ಪತಿಯಿಂದ ಬೇರೆಯಾಗಿದ್ದ ನಟಿ, ಆಗಸ್ಟ್ 26 ರಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜನಿಸಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್​ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹಾಗೇ ಮಗುವಿನ ತಂದೆಯ ಬಗ್ಗೆಯೂ ಮಾತನಾಡಿದ್ದಾರೆ.

ನಿನ್ನೆ ನುಸ್ರುತ್, ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವರಾಗಿಯೇ ಮಗುವಿನ ತಂದೆ ಬಗ್ಗೆ ಮಾತನಾಡಿದ್ದಾರೆ. ‘ನಿಮ್ಮ ಮಗುವನ್ನು ಸಾರ್ವಜನಿಕವಾಗಿ ತೋರಿಸುತ್ತೀರಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಶ್ನೆಯನ್ನು ನನ್ನ ಮಗುವಿನ ತಂದೆಯ ಬಳಿಯೇ ಕೇಳಬೇಕು. ಏಕೆಂದರೆ ಈ ಸಮಯದಲ್ಲಿ ಅವರು ಹೊರಗಿನ ಯಾರಿಗೂ ಮಗುವನ್ನು ನೋಡಲು ಬಿಡುತ್ತಿಲ್ಲ ಎಂದು ಹೇಳಿದರು.

ತುಂಬು ಗರ್ಭಿಣಿಯಾಗಿದ್ದ ನುಸ್ರತ್ ಜಹಾನ್​ರನ್ನು ಆಗಸ್ಟ್​ 25ರಂದು ಬೆಂಗಾಳಿ ನಟ ಯಶ್​ ದಾಸ್​​ಗುಪ್ತಾ ಕೋಲ್ಕತ್ತಾದ ನಿಯೋಟಾ ಆಸ್ಪತ್ರೆಗೆ ದಾಖಲಿಸಿದ್ದರು. ನುಸ್ರತ್​ ಮತ್ತು ಆಕೆಯ ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಯಶ್​ ಗುಪ್ತಾ ಮಾಹಿತಿ ನೀಡಿದ್ದರು.

ನುಸ್ರತ್ ಜಹಾನ್​ 2019ರ ಜೂನ್​ 19ರಲ್ಲಿ ಟರ್ಕಿಯಲ್ಲಿ ನಿಖಿಲ್​ ಜೈನ್ ಎಂಬುವರನ್ನು ವಿವಾಹವಾಗಿದ್ದರು. ಆದರೆ, 2021ರಲ್ಲಿ ತಮ್ಮ ಮದುವೆ ಜೀವನದ ಬಗ್ಗೆ ಮಾತನಾಡಿದ್ದ ಅವರು, ನಾವಿಬ್ಬರೂ ಟರ್ಕಿಯಲ್ಲಿ ವಿವಾಹವಾಗಿದ್ದೇವೆ. ಆದರೆ, ಭಾರತದ ಕಾನೂನಿನನ್ವಯ ಆ ವಿವಾಹ ಮಾನ್ಯವಾಗಿಲ್ಲ. ನಾವು 2020ರ ನವೆಂಬರ್​​ನಿಂದ ಪ್ರತ್ಯೇಕವಾಗಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ರದ್ದುಗೊಳಿಸಲು ಕಂಗನಾ ಮನವಿ: ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.