ETV Bharat / bharat

ಭಾರತದಲ್ಲಿ ಒಮಿಕ್ರೋನ್ ರೂಪಾಂತರಿ ಪತ್ತೆಯಾಗಿಲ್ಲ, ಎದುರಿಸಲು ನಾವು ಸಿದ್ಧ : ಕೇಂದ್ರ ಸರ್ಕಾರ

author img

By

Published : Nov 30, 2021, 4:16 PM IST

Updated : Nov 30, 2021, 4:31 PM IST

ಭಾರತದಲ್ಲಿ ಈವರೆಗೆ ಕೋವಿಡ್‌ ರೂಪಾಂತರಿ ತಳಿ ಒಮಿಕ್ರೋನ್​ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮಾನ್ಸುಖ್ ಮಾಂಡವೀಯಾ ರಾಜ್ಯಸಭೆಗೆ ತಿಳಿಸಿದರು..

Mansukh Mandaviya in Rajya Sabha
Mansukh Mandaviya in Rajya Sabha

ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ ರೂಪಾಂತರಿ ಒಮಿಕ್ರೋನ್ ಪತ್ತೆಯಾಗುತ್ತಿದ್ದಂತೆ ಭಾರತ ಸೇರಿದಂತೆ ಅನೇಕ ದೇಶಗಳು ಆತಂಕಕ್ಕೆ ಒಳಗಾಗಿವೆ.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪಾಲ್ಗೊಂಡು ಈ ಕುರಿತು ಮಾತನಾಡಿದ ಸಚಿವ ಮಾನ್ಸುಖ್ ಮಾಂಡವೀಯಾ, ದೇಶದಲ್ಲಿ ಈವರೆಗೆ ಒಮಿಕ್ರೋನ್​​ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಹೊಸಬಗೆಯ ಸೋಂಕು 14 ದೇಶಗಳಲ್ಲಿ ಕಂಡು ಬಂದಿದೆ. ಭಾರತದಲ್ಲಿ ಒಮಿಕ್ರೋನ್​​ ಪತ್ತೆಯಾಗಿಲ್ಲ. ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ಇದೇ ವೇಳೆ, ದೇಶದಲ್ಲಿ ಕೋವಿಡ್​ ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೆ, ಸಂಪೂರ್ಣವಾಗಿ ಹೋಗಿಲ್ಲ. ಈವರೆಗೆ 124 ಕೋಟಿ ಕೋವಿಡ್​ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ದೇವೇಗೌಡರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸಿದ ಪ್ರಧಾನಿ ಮೋದಿ

ಒಮಿಕ್ರೋನ್ ಸೋಂಕು​​ ದಕ್ಷಿಣ ಆಫ್ರಿಕಾ, ಲಂಡನ್, ಜರ್ಮನ್​, ಜಪಾನ್​, ಹಾಂಕಾಂಗ್​​ ಸೇರಿದಂತೆ 12 ದೇಶಗಳಲ್ಲಿ ಕಾಣಿಸಿದೆ ಎಂದು ತಿಳಿಸಿದರು.

ಇದೇ ವಿಚಾರವಾಗಿ ನಿನ್ನೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಈ ರೂಪಾಂತರಿ ಹಿಂದಿನ ಸೋಂಕಿಗಿಂತಲೂ ಹೆಚ್ಚು ಅಪಾಯಕಾರಿ. ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀಳುವ ಸಾಧ್ಯತೆಯೂ ಇದೆ. ಇದನ್ನು ಎದುರಿಸಲು ವಿಶ್ವ ಸನ್ನದ್ಧಗೊಳ್ಳಬೇಕು ಎಂದು ಎಚ್ಚರಿಸಿದೆ.

Last Updated : Nov 30, 2021, 4:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.