ETV Bharat / bharat

ತಂದೆ ಸಾವು, ತಾಯಿ ಅನಾರೋಗ್ಯ, 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ.. ಬಿಆರ್​ಎಸ್​ ಪಾರ್ಟಿಯಿಂದ ಅಣ್ತಮ್ಮ ಅಮಾನತು

author img

By

Published : Jun 22, 2023, 2:24 PM IST

ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಯಲ್ಲಿ ನಡೆದ 13 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾರ್ಯಕರ್ತರನ್ನು ಬಿಆರ್​ಎಸ್​ ಪಕ್ಷ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

Nizamabad Girl rape  Brothers have been suspended from the BRS party  13 ವರ್ಷದ ಬಾಲಕಿ ಮೇಲೆ ಅತ್ಯಾಚಾರ  ಬಿಆರ್​ಎಸ್​ ಪಾರ್ಟಿಯಿಂದ ಅಣ್ತಮ್ಮ ಅಮಾನತು  ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆ  ಬಾಲಕಿ ಮೇಲಿನ ಅತ್ಯಾಚಾರದ ಪ್ರಕರಣ  ಇಬ್ಬರು ಕಾರ್ಯಕರ್ತರನ್ನು ಬಿಆರ್​ಎಸ್​ ಪಕ್ಷ ಅಮಾನತು  ತಂದೆ ಇಲ್ಲದ ಮಗು  ಆಡಳಿತ ಪಕ್ಷದ ಕಾರ್ಯಕರ್ತ  ತಂದೆಯನ್ನು ಕಳೆದುಕೊಂಡಿರುವ ಬಾಲಕಿ  ಇಬ್ಬರ ವಿರುದ್ಧವೂ ಕಠಿಣ ಕ್ರಮ  ಶಾಸಕರು ಅತ್ಯಾಚಾರದ ವಿವರಗಳನ್ನು ಬಹಿರಂಗ
13 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ನಿಜಾಮಾಬಾದ್​, ತೆಲಂಗಾಣ: ತಂದೆ ಇಲ್ಲದ ಮಗು.. ಆಡಳಿತ ಪಕ್ಷದ ಕಾರ್ಯಕರ್ತನೊಬ್ಬ ಕರುಣೆ ತೋರದೇ ಮೃಗದಂತೆ ವರ್ತಿಸಿರುವುದು ಬೆಳಕಿಗೆ ಬಂದಿದೆ. ಪ್ರಪಂಚದ ಜ್ಞಾನ ಅರಿಯದ 13 ವರ್ಷದ ಹುಡುಗಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಸ್ಥಳೀಯ ಶಾಸಕರ ದೂರಿನ ಮೇರೆಗೆ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆ ನಿಜಾಮಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಒಂದೆಡೆ ಕಡು ಬಡತನ, ಮತ್ತೊಂದೆಡೆ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿರುವ ಬಾಲಕಿ.. ಇತ್ತ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಇನ್ನು ತಾಯಿ ಬಿಟ್ಟರೇ ಈ ಬಾಲಕಿಗೆ ಸಹೋದರರಾಗಲಿ, ಸಹೋದರಿಯರಾಗಲಿ ಯಾರೂ ಇಲ್ಲ. ಇಂತಹ ಪರಿಸ್ಥಿತಿಗಳ ನಡುವೆಯೂ ಎದೆಗುಂದದೆ ಹುಡುಗಿ ತನ್ನ ವ್ಯಾಸಂಗ ಮುಂದುವರಿಸಿದ್ದಾರೆ. ಎಲ್ಲವೂ ಸುಲಲಿತವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಆಕೆಯ ಪ್ರಯಾಣದಲ್ಲಿ ಅನಿರೀಕ್ಷಿತವಾಗಿ ಅಪಾಯವೊಂದು ಬಂದಿತು.

ಹೌದು, ಆಡಳಿತ ಪಕ್ಷದ ಕಾರ್ಯಕರ್ತನ ಕೈಗೆ ಸಿಕ್ಕ ಆ ಬಾಲಕಿ ನರಕಯಾತನೆ ಅನುಭವಿಸಿದ್ದಾರೆ. ಆಕೆಯ ಮೇಲೆ ಆತ ಕ್ರೂರವಾಗಿ ಅತ್ಯಾಚಾರವೆಸಗಿರುವುದು ತಿಳಿದುಬಂದಿದೆ. ಆದರೆ ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕ ಶಕೀಲ್ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಎಲ್ಲ ರೀತಿಯಿಂದಲೂ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರು ಅತ್ಯಾಚಾರದ ವಿವರಗಳನ್ನು ಬಹಿರಂಗಪಡಿಸಿದರು. 13 ವರ್ಷದ ಬಾಲಕಿಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಅಮಾನುಷವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಶಕೀಲ್ ಆರೋಪಿಸಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು. ಆರೋಪಿಗಳನ್ನು ಕಾನೂನು ಪ್ರಕಾರ ಗಲ್ಲಿಗೇರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಆಡಳಿತ ಪಕ್ಷದ ನಾಯಕ ಕೊತ್ತಪಲ್ಲಿ ರವೀಂದರ್ ಮತ್ತು ಅವರಿಗೆ ಸಹಾಯ ಮಾಡಿದ ಆರೋಪಿಯ ಸಹೋದರ ರಾಧಾಕೃಷ್ಣ ಅವರನ್ನು ತಕ್ಷಣ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.

ಇಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ರಾಧಾಕೃಷ್ಣ ಬಂದು ಸಂತ್ರಸ್ತೆಯ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾನೆ. ಅವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಶಾಸಕ ಶಕೀಲ್​ ಸರ್ಕಾರಕ್ಕೆ ಮನವಿ ಮಾಡಿದರು. ಬಾಲಕಿ ಬಡ ಕುಟುಂಬಕ್ಕೆ ಸೇರಿದವಳಾಗಿರುವುದರಿಂದ ಆಕೆಯ ಟ್ರಸ್ಟ್ ಮೂಲಕ ಪ್ರತಿ ತಿಂಗಳು ರೂ.6000 ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಆ ಹೆಣ್ಣುಮಗುವನ್ನು ಕಣ್ಣಿನಂತೆ ಕಾಪಾಡಲಾಗುವುದು ಎಂದರು.

ಪೊಲೀಸರ ತನಿಖೆ: ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ರವೀಂದರ್ ಹಾಗೂ ಆತನ ಸಹೋದರ ರಾಧಾಕೃಷ್ಣನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಾಸಕರ ಪತ್ನಿ ವೈದ್ಯಕೀಯ ಪರೀಕ್ಷೆಗಾಗಿ ಬಾಲಕಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಂಪೂರ್ಣ ತನಿಖೆಯ ನಂತರ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಅಪ್ರಾಪ್ತ ಮಲಮಗಳನ್ನೇ ಅತ್ಯಾಚಾರ ಮಾಡಿದ ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.