ETV Bharat / bharat

ಬೆಳ್ಳಂಬೆಳಗ್ಗೆ ಪಿಎಫ್​ಐ ಕಾರ್ಯಕರ್ತರಿಗೆ ಎನ್​ಐಎ ಮತ್ತೆ ಶಾಕ್​.. ಎಂಟು ರಾಜ್ಯಗಳಲ್ಲಿ ತಲಾಶ್​

author img

By

Published : Sep 27, 2022, 8:06 AM IST

ಬೆಳ್ಳಂಬೆಳಗ್ಗೆ ಪಿಎಫ್​ಐ ಕಾರ್ಯಕರ್ತರಿಗೆ ಎನ್​ಐಎ ಮತ್ತೆ ಶಾಕ್​ ನೀಡಿದೆ. ಇತರ ತನಿಖಾ ಸಂಸ್ಥೆಗಳೊಂದಿಗೆ ಸೇರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲೆ ಮತ್ತೊಂದು ಸುತ್ತಿನ ದಾಳಿ ನಡೆಸುತ್ತಿದೆ. ಇದಕ್ಕೂ ಮುನ್ನ ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಪಿಎಫ್‌ಐ ವಿರುದ್ಧ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದವು.

NIA raids PFI offices across 8 states  several members detained  NIA raids on pfi  ಪಿಎಫ್​ಐ ಕಾರ್ಯಾಕರ್ತರಿಗೆ ಎನ್​ಐಎ ಮತ್ತೆ ಶಾಕ್  ಕರ್ನಾಟಕ ಸೇರಿ ಎಂಟು ರಾಜ್ಯಗಳಲ್ಲಿ ಶೋಧ  ರಾಷ್ಟ್ರೀಯ ತನಿಖಾ ಸಂಸ್ಥೆ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಬೆಳ್ಳಂಬೆಳಗ್ಗೆ ಪಿಎಫ್​ಐ ಕಾರ್ಯಾಕರ್ತರಿಗೆ ಎನ್​ಐಎ ಮತ್ತೆ ಶಾಕ್

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಇತರ ತನಿಖಾ ಸಂಸ್ಥೆಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲೆ ಎರಡನೇ ಸುತ್ತಿನ ದಾಳಿ ನಡೆಸುತ್ತಿವೆ. ಎನ್‌ಐಎ ಸಂಘಟನೆಯ ಮೇಲೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಎಂಟು ವಿವಿಧ ರಾಜ್ಯಗಳಲ್ಲಿ ಪಿಎಫ್‌ಐ ಮೇಲೆ ದಾಳಿ ನಡೆಸಲಾಗುತ್ತಿದ್ದು, ಹಲವಾರು ಪಿಎಫ್‌ಐ ಸದಸ್ಯರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ಗುರುವಾರ (ಸೆಪ್ಟೆಂಬರ್ 22) ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ದೆಹಲಿ, ಅಸ್ಸೋಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ, ಮಣಿಪುರ ಮತ್ತು ಉತ್ತರಪ್ರದೇಶ ಸೇರಿದಂತೆ 15 ರಾಜ್ಯಗಳ 93 ಸ್ಥಳಗಳಲ್ಲಿ ಪಿಎಫ್‌ಐ ವಿರುದ್ಧ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿತ್ತು. ಈ ವೇಳೆ 100 ಕ್ಕೂ ಹೆಚ್ಚು PFI ಸದಸ್ಯರು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ ಜನರನ್ನು ವಿವಿಧ ಪ್ರಕರಣಗಳಲ್ಲಿ ED, NIA ಮತ್ತು ರಾಜ್ಯ ಪೊಲೀಸರು ಬಂಧಿಸಿದ್ದಾರೆ.

ಭಯೋತ್ಪಾದನೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ, ಶಸ್ತ್ರಾಸ್ತ್ರ ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸುವುದು ಮತ್ತು ಜನರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದು ಎನ್​ಐಎ ಕೇರಳದ ನ್ಯಾಯಾಲಯಕ್ಕೆ ರಿಮಾಂಡ್​ ಪ್ರತಿ ಸಲ್ಲಿಸಿತ್ತು.

ಪುರಾವೆಗಳ ನಂತರ ಎನ್‌ಐಎ ದಾಖಲಿಸಿದ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಎಫ್‌ಐ ಉನ್ನತ ನಾಯಕರು ಮತ್ತು ಸದಸ್ಯರ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಿತ್ತು.

ಓದಿ: ಹುಬ್ಬಳ್ಳಿ: ಎನ್​ಐಎ ದಾಳಿ ಖಂಡಿಸಿ ಪ್ರತಿಭಟಿಸಿದ 51 ಮಂದಿ ವಿರುದ್ಧ ಎಫ್ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.