ಜೋಧಪುರ(ರಾಜಸ್ಥಾನ): ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರು ಸೋಮವಾರ ಡಾ.ನೂಪುರ್ ಭಾಟಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನೂಪುರ್ ಭಾಟಿ ಮಹಿಳಾ ವಕೀಲರಾಗಿ ರಾಜಸ್ಥಾನ ಹೈಕೋರ್ಟ್ನ ನ್ಯಾಯಮೂರ್ತಿಯಾದ ಎರಡನೇ ಮಹಿಳೆಯಾಗಿದ್ದಾರೆ. ಈ ಮೂಲಕ ಪತಿ - ಪತ್ನಿ ಒಂದೇ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡನೇ ದಂಪತಿ ಎನಿಸಿಕೊಂಡಿದ್ದಾರೆ. ಈಗ ರಾಜಸ್ಥಾನ ಹೈಕೋರ್ಟ್‌ನಲ್ಲಿ ವಕೀಲೆ ನಂತರ ನ್ಯಾಯಮೂರ್ತಿಗಳಾಗಿ ಡಾ.ನೂಪುರ್ ಭಾಟಿ ವಿಚಾರಣೆ ನಡೆಸಲಿದ್ದು ಇತಿಹಾಸ ನಿರ್ಮಿಸಿದ್ದಾರೆ.
ವಕೀಲೆ ನಂತರ ಡಾ. ನೂಪುರ್ ಭಾಟಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರ: ಜೋಧ್‌ಪುರ ಹೈಕೋರ್ಟ್‌ನಲ್ಲಿ ವಕೀಲೆಯಾಗಿದ್ದ ಅವರು, ನಂತರ ಡಾ. ನೂಪುರ್ ಭಾಟಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಪತಿ ಡಾ. ಪುಷ್ಪೇಂದ್ರ ಸಿಂಗ್ ಭಾಟಿ ಅವರು 16 ನವೆಂಬರ್ 2016 ರಂದು ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ಅವರ ಪತ್ನಿ ಡಾ.ನೂಪುರ್ ಭಾಟಿ ಕೂಡ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಇಬ್ಬರೂ ರಾಜಸ್ಥಾನ ಹೈಕೋರ್ಟ್ ಜೋಧ್‌ಪುರ ಮುಖ್ಯ ಪೀಠದಲ್ಲಿ ವಿಚಾರಣೆ ನಡೆಸಲಿದ್ದಾರೆ.
ಇದಕ್ಕೂ ಮೊದಲು, 6 ನವೆಂಬರ್ 2019 ರಂದು, ನ್ಯಾಯಮೂರ್ತಿ ಮಹೇಂದ್ರ ಗೋಯಲ್ ಅವರು ವಕೀಲರ ಕೋಟಾದಿಂದ ಪ್ರಮಾಣ ವಚನ ಸ್ವೀಕರಿಸಿದ್ದರು ಮತ್ತು ನ್ಯಾಯಾಂಗ ಅಧಿಕಾರಿಯಾಗಿದ್ದ ಅವರ ಪತ್ನಿ ಶುಭಾ ಮೆಹ್ತಾ ಅವರು 6 ಜೂನ್ 2022 ರಂದು ರಾಜಸ್ಥಾನ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದರು.
ರಾಜಸ್ಥಾನದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎರಡನೇ ದಂಪತಿ: ಜಸ್ಟಿಸ್ ಮಹೇಂದ್ರ ಗೋಯಲ್ ಮತ್ತು ಅವರ ಪತ್ನಿ ಶುಭಾ ಮೆಹ್ತಾ ಅವರು ಪತಿ - ಪತ್ನಿಯಾಗಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಮೊದಲ ದಂಪತಿಗಳಾಗಿದ್ದರೆ, ಈಗ ನ್ಯಾಯಮೂರ್ತಿ ಡಾ. ಪುಷ್ಪೇಂದ್ರ ಸಿಂಗ್ ಭಾಟಿ ಮತ್ತು ಅವರ ಪತ್ನಿ ನ್ಯಾಯಮೂರ್ತಿ ಡಾ. ನೂಪುರ್ ಭಾಟಿ ಅವರು ರಾಜಸ್ಥಾನದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎರಡನೇ ದಂಪತಿಯಾಗಿದ್ದಾರೆ. ಹೈಕೋರ್ಟ್‌ನಲ್ಲಿ ಎರಡು ಜೋಡಿ ದಂಪತಿ ನ್ಯಾಯಮೂರ್ತಿಗಳಾಗಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವುದು ರಾಜಸ್ಥಾನಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಅಲ್ಲಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಪತಿ ಮತ್ತು ಪತ್ನಿ ಇಬ್ಬರು ಒಟ್ಟಿಗೆ ಪ್ರಕರಣಗಳ ವಿಚಾರಣೆ ನಡೆಸುವ ದೇಶದ ಮೊದಲ ಹೈಕೋರ್ಟ್ ರಾಜಸ್ಥಾನ: ಪತಿ ಮತ್ತು ಪತ್ನಿ ಇಬ್ಬರೂ ಒಟ್ಟಿಗೆ ಪ್ರಕರಣಗಳ ವಿಚಾರಣೆ ನಡೆಸುವ ದೇಶದ ಮೊದಲ ಹೈಕೋರ್ಟ್ ರಾಜಸ್ಥಾನವಾಗಿದೆ. ರಾಜಸ್ಥಾನ ಹೈಕೋರ್ಟ್‌ನಲ್ಲಿ ಈಗ ಏಕಕಾಲದಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳು ಇರಲಿದ್ದಾರೆ. ನ್ಯಾಯಮೂರ್ತಿ ರೇಖಾ ಬೋರಾನಾ, ನ್ಯಾಯಮೂರ್ತಿ ಶುಭಾ ಮೆಹ್ತಾ ಮತ್ತು ಈಗ ನ್ಯಾಯಮೂರ್ತಿ ಡಾ.ನೂಪುರ್ ಭಾಟಿ ಕೂಡಾ ಕಾರ್ಯನಿರ್ವಹಿಸಲಿದ್ದಾರೆ.
ಇದನ್ನೂ ಓದಿ:ಫೋಟೋ ತೆಗೆದುಕೊಳ್ಳಲು ವಂದೇ ಭಾರತ್ ರೈಲು ಹತ್ತಿ ಒಳಗೆ ಸಿಲುಕಿಕೊಂಡ ವ್ಯಕ್ತಿ.. ವಿಡಿಯೋ ವೈರಲ್