ETV Bharat / bharat

ಎಂ.ಕೆ.ಸ್ಟಾಲಿನ್ 70ನೇ ಹುಟ್ಟುಹಬ್ಬದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ವಿಪಕ್ಷಗಳು..

author img

By

Published : Mar 1, 2023, 10:39 PM IST

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ 70 ನೇ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮ - ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ

Congress President Kharge calls for opposition unity
ಎಂ.ಕೆ.ಸ್ಟಾಲಿನ್ ಅವರ 70 ನೇ ಹುಟ್ಟುಹಬ್ಬದಲ್ಲಿ ಒಗಟ್ಟ ಪ್ರದರ್ಶಿಸಿದ ವಿಪಕ್ಷಗಳು..

  • #WATCH | All like-minded opposition parties must come together in this fight...I never said who'll lead or who will become PM. It's not the question. We want to fight together unitedly, this is our desire..: Congress chief Mallikarjun Kharge at DMK's event in Chennai, Tamil Nadu pic.twitter.com/zNEqKax8cr

    — ANI (@ANI) March 1, 2023 " class="align-text-top noRightClick twitterSection" data=" ">

ಚೆನ್ನೈ(ತಮಿಳುನಾಡು): 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟನ್ನು ಪ್ರತಿಪಾದಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಯಾರು ನೇತೃತ್ವ ವಹಿಸುತ್ತಾರೆ ಅಥವಾ ಯಾರು ಪ್ರಧಾನಿಯಾಗುತ್ತಾರೆ" ಎನ್ನುವುದು ಈಗ ಮುಖ್ಯವಲ್ಲ, ಮುಂಬರುವ ಚುನಾವಣೆಯನ್ನು ಎದುರಿಸಲು ಸಮಾನ ಮನಸ್ಕ ಪಕ್ಷಗಳ ಜೊತೆ ಒಗ್ಗೂಡಿ ಹೋರಾಡಲು ಪಕ್ಷ ಉತ್ಸುಕವಾಗಿದೆ ಎಂದು ಹೇಳಿದರು.

ವಿಭಜಕ ಶಕ್ತಿಗಳ ವಿರುದ್ಧ ಎಲ್ಲಾ ಸಮಾನ ಮನಸ್ಕ ವಿರೋಧ ಪಕ್ಷಗಳು ಒಗ್ಗೂಡಬೇಕು. ಯಾರು ಮುನ್ನಡೆಸಲಿದ್ದಾರೆ ಅಥವಾ ಯಾರು ಪ್ರಧಾನಿಯಾಗುತ್ತಾರೆ ಎಂದು ನಾನು ಎಂದಿಗೂ ಹೇಳಿಲ್ಲ. ಇದು ಪ್ರಶ್ನೆಯಲ್ಲ. ನಾವು ಒಗ್ಗಟ್ಟಿನಿಂದ ಹೋರಾಡಲು ಬಯಸುತ್ತೇವೆ, ಇದು ನಮ್ಮ ಬಯಕೆ" ಎಂದು ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ 70 ನೇ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ಹೇಳಿದರು.

  • Tamil Nadu | A huge crowd gathers to participate in a program organised in Chennai for the 70th birthday celebrations of CM MK Stalin

    Opposition leaders, including NC chief Farooq Abdullah & Congress chief Mallikarjun Kharge, have arrived in Chennai to participate in the program pic.twitter.com/7xCb1hYAcT

    — ANI (@ANI) March 1, 2023 " class="align-text-top noRightClick twitterSection" data=" ">

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಭಾರತ ಯಾತ್ರಾ ಜೋಡೋ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಜೆಪಿಯೇತರ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಖರ್ಗೆಯವರು ನೀಡಿದ್ದ ಹೇಳಿಕೆ ಅವರು ಬುಧವಾರ ನೀಡಿರುವ ಹೇಳಿಕೆಗೂ ವ್ಯತಿರಿಕ್ತವಾಗಿದೆ. ಬಿಜೆಪಿಯೇತರ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ನಾಯಕತ್ವದಲ್ಲಿ ತರುತ್ತೇವೆ, ನಮ್ಮಲ್ಲಿ ಆ ಶಕ್ತಿ ಇದೆ ಎಂದು ಖರ್ಗೆ ಈ ಹಿಂದೆ ಹೇಳಿದರು. ಕೆಲವು ವಿರೋಧ ಪಕ್ಷಗಳೂ ರಾಜ್ಯಗಳಲ್ಲಿ ಪ್ರತಿಸ್ಪರ್ಧಿಗಳಾಗಿವೆ. 2024 ರ ಲೋಕಸಭಾ ಚುನಾವಣೆಗೆ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ವಿರೋಧ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿವೆ.

ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಯಶಸ್ವಿಯಾಗಿದ್ದು, 2024ರ ಲೋಕಸಭೆ ಚುನಾವಣೆ ಗೆಲುವಿಗೆ ಎರಡು ಪಕ್ಷಗಳು ಅಡಿಪಾಯ ಹಾಕಬೇಕು ಎಂದು ಖರ್ಗೆ ಇದೇ ವೇಳೆ ಹೇಳಿದರು. ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ 2004, 2009 ರಲ್ಲಿ ಲೋಕಸಭಾ ಗೆಲುವು ಹಾಗೂ 2006 ಮತ್ತು 2021 ರಲ್ಲಿ ವಿಧಾನಸಭಾ ವಿಜಯಗಳಿಗೆ ಕಾರಣವಾಯಿತು. ನಾವು ನಮ್ಮ ಮೈತ್ರಿಯನ್ನು ಬಲಪಡಿಸುವುದನ್ನು ಮುಂದುವರಿಸಬೇಕು ಮತ್ತು ಯುಪಿಎ ಮೈತ್ರಿಕೂಟಕ್ಕೆ 2024 ರ ಲೋಕಸಭಾ ಗೆಲುವಿಗೆ ಅಡಿಪಾಯ ಹಾಕಬೇಕು" ಎಂದು ಅವರು ಕರೆ ನೀಡಿದರು.

ಲೋಕಸಭಾ ಚುನಾವಣೆ ಭಾರತದ ಭವಿಷ್ಯಕ್ಕೆ ನಿರ್ಣಾಯಕ: ಫೆಬ್ರವರಿ 27 ರಂದು ನಾಗಾಲ್ಯಾಂಡ್‌ನಲ್ಲಿ ಚುನಾವಣೆಗೆ ನಡೆದ ರ‍್ಯಾಲಿಯಲ್ಲಿ, 2024 ರಲ್ಲಿ ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ಮೈತ್ರಿ ಸರ್ಕಾರವನ್ನು ಕಾಂಗ್ರೆಸ್ ಮುನ್ನಡೆಸುತ್ತದೆ ಎಂದು ಖರ್ಗೆ ಹೇಳಿದ್ದರು. ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ತನ್ನ ಪೂರ್ಣ ಅಧಿವೇಶನದಲ್ಲಿ ಅಂಗೀಕರಿಸಿದ ರಾಜಕೀಯ ನಿರ್ಣಯದಲ್ಲಿ, ಈ ವರ್ಷ ಒಂಬತ್ತು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳು ಮತ್ತು 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಭಾರತದ ಭವಿಷ್ಯಕ್ಕೆ ನಿರ್ಣಾಯಕ. ಸೈದ್ಧಾಂತಿಕ ಆಧಾರದ ಮೇಲೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿನ ತುರ್ತು ಅವಶ್ಯಕತೆಯಿದೆ ಎಂದು ಕಾಂಗ್ರೆಸ್​ ಪಕ್ಷ ಹೇಳಿತ್ತು.

ಸಮಾನ ಮನಸ್ಕ ಜಾತ್ಯತೀತ ಶಕ್ತಿಗಳನ್ನು ಗುರುತಿ, ಸಜ್ಜುಗೊಳಿಸಲು ಕಾಂಗ್ರೆಸ್ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ತಿಳಿಸಿತ್ತು. ಇದರ ಬದಲಾಗಿ ತೃತೀಯ ರಂಗದ ರಚನೆಯು ಬಿಜೆಪಿಗೆ ಅನುಕೂಲವನ್ನು ನೀಡುತ್ತದೆ ಎಂದು ನಿರ್ಣಯದಲ್ಲಿ ಅಭಿಪ್ರಾಯಟ್ಟಿದೆ

  • Stalin, it's time, come to the national scene&build the nation as you've built this state. To (Mallikarjun) Kharge Ji, I'll say,let's forget who's going to become the PM. Let's first win elections, then think who'll become PM. PM doesn't matter, nation matters: Farooq Abdullah pic.twitter.com/nbZxYocFJW

    — ANI (@ANI) March 1, 2023 " class="align-text-top noRightClick twitterSection" data=" ">

ಎನ್‌ಡಿಎ ಎದುರಿಸಲು ಒಗ್ಗಟ್ಟಿನ ಪ್ರತಿಪಕ್ಷದ ತುರ್ತು ಅವಶ್ಯಕ: "ಜಾತ್ಯತೀತ ಮತ್ತು ಸಮಾಜವಾದಿ ಶಕ್ತಿಗಳ ಏಕತೆಯು ಕಾಂಗ್ರೆಸ್ ಪಕ್ಷದ ಭವಿಷ್ಯದ ಹೆಗ್ಗುರುತಾಗಿದೆ. ಸಮಾನ ಮನಸ್ಕ ಜಾತ್ಯತೀತ ಶಕ್ತಿಗಳನ್ನು ಗುರುತಿಸಲು, ಸಜ್ಜುಗೊಳಿಸಲು ಮತ್ತು ಒಗ್ಗೂಡಿಸಲು ಕಾಂಗ್ರೆಸ್ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ನಮ್ಮ ಸಿದ್ಧಾಂತವನ್ನು ಒಪ್ಪುವ ಜಾತ್ಯತೀತ ಪ್ರಾದೇಶಿಕ ಶಕ್ತಿಗಳನ್ನು ನಾವು ಒಳಗೊಳ್ಳಬೇಕು. ಸಾಮಾನ್ಯ ಸೈದ್ಧಾಂತಿಕ ಆಧಾರದ ಮೇಲೆ ಎನ್‌ಡಿಎಯನ್ನು ಎದುರಿಸಲು ಒಗ್ಗಟ್ಟಿನ ಪ್ರತಿಪಕ್ಷದ ತುರ್ತು ಅವಶ್ಯಕತೆಯಿದೆ. ನಿರುದ್ಯೋಗ, ಬಡತನ ನಿರ್ಮೂಲನೆ, ಹಣದುಬ್ಬರ, ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿ, ರಾಷ್ಟ್ರೀಯ ಭದ್ರತೆ ಮುಂತಾದ ವಿಷಯಗಳನ್ನು ಒಳಗೊಂಡಿರುವ ಅತಿದೊಡ್ಡ ಜನಸಂಪರ್ಕ ಕಾರ್ಯಕ್ರಮವನ್ನು ಅನುಸರಿಸಿ ಕಾಂಗ್ರೆಸ್ 2024 ರ ವಿಷನ್ ಡಾಕ್ಯುಮೆಂಟ್ ಅನ್ನು ಸಿದ್ಧಪಡಿಸಲಿದೆ ಎಂದು ನಿರ್ಣಯದಲ್ಲಿ ತಿಳಿಸಿದೆ.

  • I'm working as CM by the order of Tamil Nadu's people, I'm working as DMK president by the order of cadres. I'm not an orator like Perarignar Anna, I am not a writer like Kalaignar but I can work hard like them: Tamil Nadu CM MK Stalin, in Chennai at an event on his 70th birthday pic.twitter.com/8Tl7oL22ev

    — ANI (@ANI) March 1, 2023 " class="align-text-top noRightClick twitterSection" data=" ">

ನಾವೆಲ್ಲ ಒಗ್ಗಟ್ಟಿನ ಹೋರಾಟ ಮಾಡಬೇಕು: ತಮ್ಮ 70 ನೇ ಹುಟ್ಟುಹಬ್ಬದಂದು ಆಯೋಜಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಿಜೆಪಿಯನ್ನು ವಿರೋಧಿಸುವ ಎಲ್ಲ ರಾಜಕೀಯ ಪಕ್ಷಗಳು ಸರಳ ಚುನಾವಣಾ ಅಂಕಗಣಿತ ತರ್ಕವನ್ನು ಅರ್ಥಮಾಡಿಕೊಂಡು ಒಗ್ಗಟ್ಟಾಗಿ ನಿಲ್ಲುವಂತೆ ವಿನಂತಿಸಿದರು. 2024 ರ ಲೋಕಸಭಾ ಚುನಾವಣೆ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಅಲ್ಲ, ಆದರೆ ಯಾರನ್ನು ಸೋಲಿಸಬೇಕು ಎಂಬುದರ ಬಗ್ಗೆ ನಾವು ನಿರ್ಣಯಿಸಬೇಕಿದೆ ಎಂದು ಸ್ಟಾಲಿನ್​ ಒತ್ತಿ ಹೇಳಿದರು.

  • Tamil Nadu | Main agenda of a country are unemployment, inflation, assault on consitutional & hijack of all consitutional insitutions. We have seen in past & they have not been following the consitition at all: Bihar Deputy CM Tejashwi Yadav at the DMK event in Chennai pic.twitter.com/m1BpFQ9MlW

    — ANI (@ANI) March 1, 2023 " class="align-text-top noRightClick twitterSection" data=" ">

ಇನ್ನು ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್​, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್​ ಅಬ್ದುಲ್ಲಾ ಸೇರಿದಂತೆ ಇತರ ಪ್ರಮುಖ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ:ಶಾಸಕರೊಂದಿಗೆ ಕೇಜ್ರಿವಾಲ್ ತುರ್ತು ಸಭೆ: ಸೌರಭ್ ಮತ್ತು ಅತಿಶಿ ಸಚಿವರನ್ನಾಗಿ ಮಾಡಲು ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.