ETV Bharat / bharat

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಪ್ರಕಟ.. ನೀರಜ್ ಚೋಪ್ರಾಗೆ ಖೇಲ್​ ರತ್ನ

author img

By

Published : Nov 3, 2021, 7:26 AM IST

Updated : Nov 3, 2021, 8:01 AM IST

ಮಂಗಳವಾರದಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟವಾಗಿದೆ. ಪ್ರಶಸ್ತಿ ಪುರಸ್ಕೃತರು ನವೆಂಬರ್ 13, 2021ರಂದು ರಾಷ್ಟ್ರಪತಿಗಳಿಂದ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ..

Neeraj Chopra, Lovlina Borgohain among Khel Ratna winners; 35 Arjuna awardees
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಪ್ರಕಟ.....ನೀರಜ್ ಚೋಪ್ರಾಗೆ ಖೇಲ್​ ರತ್ನ

ನವದೆಹಲಿ : ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮಂಗಳವಾರದಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಪ್ರಮುಖ ಖೇಲ್ ರತ್ನ ವಿಜೇತರ ಪಟ್ಟಿಯಲ್ಲಿ ಒಲಿಂಪಿಯನ್ ನೀರಜ್ ಚೋಪ್ರಾ, ಲೊವ್ಲಿನಾ ಬೊರ್ಗೊಹೈನ್ ಮತ್ತು ರವಿ ದಹಿಯಾ ಸೇರಿದ್ದಾರೆ. 35 ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಭಾರತದ ಹೆಚ್ಚಿನ ಪ್ಯಾರಾಲಿಂಪಿಕ್ ಪದಕ ವಿಜೇತರು ಮತ್ತು ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಮಿಥಾಲಿ ರಾಜ್ ಸೇರಿದ್ದಾರೆ.

ಪ್ರಶಸ್ತಿ ಪುರಸ್ಕೃತರು ನವೆಂಬರ್ 13, 2021ರಂದು (ಶನಿವಾರ) ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ವಿಶೇಷವಾಗಿ ಆಯೋಜಿಸಲಾಗುವ ಸಮಾರಂಭದಲ್ಲಿ ರಾಷ್ಟ್ರಪತಿಗಳಿಂದ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಕೋವಿಡ್​ನಿಂದಾಗಿ ಕಳೆದ ವರ್ಷ ಪ್ರಶಸ್ತಿ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸಲಾಗಿತ್ತು.

ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿಗೆ ಸೇರಿಸಲಾಗಿದೆ. ದ್ರೋಣಾಚಾರ್ಯ ಪ್ರಶಸ್ತಿಗೆ ಒಟ್ಟು 10 ಕೋಚ್‌ಗಳನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪುರಸ್ಕೃತರು : ಜೀವಮಾನದ ಸಾಧನೆಯ ವಿಭಾಗದಲ್ಲಿ ಟಿ.ಪಿ.ಔಸೆಫ್ (ಅಥ್ಲೆಟಿಕ್ಸ್), ಸರ್ಕಾರ್ ತಲ್ವಾರ್ (ಕ್ರಿಕೆಟ್), ಸರ್ಪಾಲ್ ಸಿಂಗ್ (ಹಾಕಿ), ಅಶನ್ ಕುಮಾರ್ (ಕಬಡ್ಡಿ) ಮತ್ತು ತಪನ್ ಕುಮಾರ್ ಪಾಣಿಗ್ರಾಹಿ (ಈಜು) ಅವರನ್ನು ಗೌರವಕ್ಕೆ ಆಯ್ಕೆ ಮಾಡಲಾಗಿದೆ. ದ್ರೋಣಾಚಾರ್ಯ ಪ್ರಶಸ್ತಿ ವಿಭಾಗದಲ್ಲಿ ರಾಧಾಕೃಷ್ಣನ್ ನಾಯರ್ ಪಿ (ಅಥ್ಲೆಟಿಕ್ಸ್), ಸಂಧ್ಯಾ ಗುರುಂಗ್ (ಬಾಕ್ಸಿಂಗ್), ಪ್ರೀತಮ್ ಸಿವಾಚ್ (ಹಾಕಿ), ಜೈ ಪ್ರಕಾಶ್ ನೌಟಿಯಾಲ್ (ಪ್ಯಾರಾ ಶೂಟಿಂಗ್) ಮತ್ತು ಸುಬ್ರಮಣಿಯನ್ ರಾಮನ್ (ಟೇಬಲ್ ಟೆನಿಸ್) ಇದ್ದಾರೆ.

ಒಲಿಂಪಿಕ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಅರ್ಜುನ ಪ್ರಶಸ್ತಿಯನ್ನು ಪಡೆದ ಕೇವಲ ಒಂದು ವರ್ಷದ ನಂತರ ಖೇಲ್ ರತ್ನವನ್ನು ಸ್ವೀಕರಿಸಲಿದ್ದಾರೆ. ಸಜ್ಜನ್ ಸಿಂಗ್ (ಕುಸ್ತಿ), ಮಾಜಿ ವಿಶ್ವ ಮತ್ತು ಏಷ್ಯನ್ ಚಾಂಪಿಯನ್ ಬಾಕ್ಸರ್ ಲೇಖಾ ಕೆ.ಸಿ, ಅಭಿಜಿತ್ ಕುಂಟೆ (ಚೆಸ್), ದವೀಂದರ್ ಸಿಂಗ್ ಗಾರ್ಚಾ (ಹಾಕಿ) ಮತ್ತು ವಿಕಾಸ್ ಕುಮಾರ್ (ಕಬಡ್ಡಿ) ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರು: ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿ ಕುಮಾರ್ (ಕುಸ್ತಿ), ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಪಿಆರ್ ಶ್ರೀಜೇಶ್ (ಹಾಕಿ), ಅವನಿ ಲೆಖರಾ (ಪ್ಯಾರಾ ಶೂಟಿಂಗ್), ಸುಮಿತ್ ಆಂಟಿಲ್ (ಪ್ಯಾರಾ ಅಥ್ಲೆಟಿಕ್ಸ್), ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್ ), ಕೃಷ್ಣ ನಗರ (ಪ್ಯಾರಾ ಬ್ಯಾಡ್ಮಿಂಟನ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನಿಲ್ ಛೆಟ್ರಿ (ಫುಟ್ಬಾಲ್), ಮನ್ಪ್ರೀತ್ ಸಿಂಗ್ (ಹಾಕಿ).

ಅರ್ಜುನ ಪ್ರಶಸ್ತಿ ಪುರಸ್ಕೃತರು: ಅರ್ಪಿಂದರ್ ಸಿಂಗ್ (ಅಥ್ಲೆಟಿಕ್ಸ್), ಸಿಮ್ರಂಜಿತ್ ಕೌರ್ (ಬಾಕ್ಸಿಂಗ್), ಶಿಖರ್ ಧವನ್ (ಕ್ರಿಕೆಟ್), ಸಿಎ ಭವಾನಿ ದೇವಿ (ಫೆನ್ಸಿಂಗ್), ಮೋನಿಕಾ (ಹಾಕಿ), ವಂದನಾ ಕಟಾರಿಯಾ (ಹಾಕಿ), ಸಂದೀಪ್ ನರ್ವಾಲ್ (ಕಬಡ್ಡಿ), ಹಿಮಾನಿ ಉತ್ತಮ್ ಪರಬ್ (ಮಲ್ಲಖಾಂಬ್ ), ಅಭಿಷೇಕ್ ವರ್ಮಾ (ಶೂಟಿಂಗ್), ಅಂಕಿತಾ ರೈನಾ (ಟೆನಿಸ್), ದೀಪಕ್ ಪುನಿಯಾ (ಕುಸ್ತಿ), ದಿಲ್‌ಪ್ರೀತ್ ಸಿಂಗ್ (ಹಾಕಿ), ಹರ್ಮನ್ ಪ್ರೀತ್ ಸಿಂಗ್ (ಹಾಕಿ), ರೂಪಿಂದರ್ ಪಾಲ್ ಸಿಂಗ್ (ಹಾಕಿ), ಸುರೇಂದರ್ ಕುಮಾರ್ (ಹಾಕಿ), ಅಮಿತ್ ರೋಹಿದಾಸ್ (ಹಾಕಿ ), ಬೀರೇಂದ್ರ ಲಾಕ್ರಾ (ಹಾಕಿ), ಸುಮಿತ್ (ಹಾಕಿ), ನೀಲಕಂಠ ಶರ್ಮಾ (ಹಾಕಿ), ಹಾರ್ದಿಕ್ ಸಿಂಗ್ (ಹಾಕಿ), ವಿವೇಕ್ ಸಾಗರ್ ಪ್ರಸಾದ್ (ಹಾಕಿ), ಗುರ್ಜಂತ್ ಸಿಂಗ್ (ಹಾಕಿ), ಮನ್ದೀಪ್ ಸಿಂಗ್ (ಹಾಕಿ), ಶಂಶೇರ್ ಸಿಂಗ್ (ಹಾಕಿ), ಲಲಿತ್ ಕುಮಾರ್ ಉಪಾಧ್ಯಾಯ (ಹಾಕಿ), ವರುಣ್ ಕುಮಾರ್ (ಹಾಕಿ), ಸಿಮ್ರಂಜೀತ್ ಸಿಂಗ್ (ಹಾಕಿ), ಯೋಗೇಶ್ ಕಥುನಿಯಾ (ಪ್ಯಾರಾ ಅಥ್ಲೆಟಿಕ್ಸ್) ನಿಶಾದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಸುಹಾಶ್ ಯತಿರಾಜ್ (ಪ್ಯಾರಾ ಬ್ಯಾಡ್ಮಿಂಟನ್) ಸಿಂಗ್ರಾಜ್ ಅಧಾನ (ಪ್ಯಾರಾ ಶೂಟಿಂಗ್ ), ಭಾವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್), ಹರ್ವಿಂದರ್ ಸಿಂಗ್ (ಪ್ಯಾರಾ ಆರ್ಚರಿ) ಮತ್ತು ಶರದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್)

Last Updated : Nov 3, 2021, 8:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.