ETV Bharat / bharat

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪಿತ್ತಕೋಶದಲ್ಲಿ ಸಮಸ್ಯೆ

author img

By

Published : Mar 29, 2021, 11:24 AM IST

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪಿತ್ತಕೋಶದಲ್ಲಿ ಸಮಸ್ಯೆ ಇರುವ ಹಿನ್ನೆಲೆ ಅವರನ್ನು ಮಾರ್ಚ್ 31 ರಂದು ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಎನ್‌ಸಿಪಿ ನಾಯಕ ನವಾಬ್ ಮಲಿಕ್ ತಿಳಿಸಿದ್ದಾರೆ.

NCP chief Sharad Pawar latest news
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪಿತ್ತಕೋಶದಲ್ಲಿ ಸಮಸ್ಯೆ

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಿನ್ನೆ ಸಂಜೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರನ್ನು ತಪಾಸಣೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ವೇಳೆ ಅವರ ಪಿತ್ತಕೋಶದಲ್ಲಿ ಸಮಸ್ಯೆ ಇರುವುದು ತಿಳಿದು ಬಂದಿದೆ ಎಂದು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಹೇಳಿದ್ದಾರೆ.

ಇದನ್ನೂ ಓದಿ: ಸರ್ಪಂಚ್​​​ ಸೇರಿ ಒಂದೇ ಗ್ರಾಮದ 170 ಮಂದಿಗೆ ಕೊರೊನಾ: ಊರಿಗೆ ಊರೇ ಈಗ ಕಂಟೇನ್ಮೆಂಟ್​ ಝೋನ್​

ಶರದ್ ಪವಾರ್ ಅವರನ್ನು ಮಾರ್ಚ್ 31 ರಂದು ಆಸ್ಪತ್ರೆಗೆ ದಾಖಲಿಸಲಾಗುವುದು. ಈ ವೇಳೆ ಅವರಿಗೆ ಎಂಡೋಸ್ಕೋಪಿ ಮತ್ತು ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಅನಾರೋಗ್ಯದ ಕಾರಣ ಮುಂದಿನ ಅವರ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳು ರದ್ದಾಗಿವೆ ಎಂದು ಎನ್‌ಸಿಪಿ ನಾಯಕ ನವಾಬ್ ಮಲಿಕ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.