ETV Bharat / bharat

ಗುಜರಾತ್ ಕರಾವಳಿಯಲ್ಲಿ 2,000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಎನ್‌ಸಿಬಿ

author img

By

Published : Feb 13, 2022, 12:04 PM IST

ನಾಲ್ಕು ದಿನಗಳ ಕಾಲ ಭಾರತೀಯ ನೌಕಾಪಡೆ ಜೊತೆ ಸೇರಿ ಎನ್‌ಸಿಬಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್ ಕರಾವಳಿಯಲ್ಲಿ 2,000 ಕೋಟಿ ರೂ. ಮೌಲ್ಯದ 800 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

drug
drug

ಗಾಂಧಿನಗರ (ಗುಜರಾತ್): ಭಾರತೀಯ ನೌಕಾಪಡೆ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶನಿವಾರ ಅರಬ್ಬಿ ಸಮುದ್ರದ ಗುಜರಾತ್ ಕರಾವಳಿಯಲ್ಲಿ ಹಡಗೊಂದರಿಂದ ಬರೋಬ್ಬರಿ 800 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾದಕ ವಸ್ತುಗಳ ಮೌಲ್ಯ 2,000 ಕೋಟಿ ರೂ. ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಂಡ 800 ಕೆಜಿ ಡ್ರಗ್ಸ್ ಪೈಕಿ ಉತ್ತಮ ಗುಣಮಟ್ಟದ ಹಶಿಶ್ ಅಥವಾ ಚರಸ್ 529 ಕೆಜಿಗಿಂತಲೂ ಹೆಚ್ಚಿದ್ದು, ಅತ್ಯುತ್ತಮ ಗುಣಮಟ್ಟದ ಕ್ರಿಸ್ಟಲ್ ಮೆಥಾಂಫೆಟಮೈನ್ 234 ಕೆಜಿಗಿಂತಲೂ ಅಧಿಕವಿದೆ. ಉಳಿದಂತೆ 15 ಕೆಜಿ ಹೆರಾಯಿನ್ ಆಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಾಂಜಾ ಅಮಲು: ಆಂಧ್ರದಿಂದ ತಂದು ಮಾರಾಟ, ಮಾಲುಸಹಿತ ಮೂವರ ಬಂಧನ

ಸಮುದ್ರ ಮಾರ್ಗವಾಗಿ ಭಾರಿ ಪ್ರಮಾಣದ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೌಕಾ ಗುಪ್ತಚರ ಘಟಕ ಹಂಚಿಕೊಂಡ ಎನ್​ಸಿಬಿ ನಾಲ್ಕು ದಿನಗಳ ಕಾಲ ಜಂಟಿ ಕಾರ್ಯಾಚರಣೆ ನಡೆಸಿದೆ. ಮಾದಕವಸ್ತುಗಳನ್ನು ಪಾಕಿಸ್ತಾನದಿಂದ ಲೋಡ್ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ಗುಜರಾತ್‌ನ ಪೋರಬಂದರ್ ಬಂದರಿಗೆ ಸಾಗಿಸಲಾಗುತ್ತಿತ್ತು ಎಂದು ಎನ್‌ಸಿಬಿ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.