ETV Bharat / bharat

ಪತಿ - ಪತ್ನಿ ನಡುವಣ ಜಗಳ: ಇಬ್ಬರು ಹೆಣ್ಣುಮಕ್ಕಳು, ಪತ್ನಿ ಕೊಲೆ ಮಾಡಿದ ಪಾಪಿ ಗಂಡ

author img

By

Published : Jun 6, 2022, 12:06 PM IST

ಹೆಂಡತಿ ಜೊತೆ ಜಗಳವಾಡಿರುವ ಗಂಡನೊಬ್ಬ, ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಕಟ್ಟಿಕೊಂಡ ಪತ್ನಿಯ ಕೊಲೆ ಮಾಡಿ ಪರಾರಿಯಾಗಿದ್ದಾನೆ. ರಾಜಸ್ಥಾನದ ಉದಯಪುರದಲ್ಲಿ ಈ ಘಟನೆ ನಡೆದಿದೆ.

Husband killed His Wife And Daughters
Husband killed His Wife And Daughters

ಉದಯಪುರ(ರಾಜಸ್ಥಾನ): ಗಂಡ - ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನೋ ಮಾತು ಈಗ ಹಳೆಯದಾಗಿದೆ. ಈಗೀಗ ಪತಿ - ಪತ್ನಿ ಜಗಳ ಕೊಲೆಯಲ್ಲಿ ಅಂತ್ಯವಾಗುತ್ತಿರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಅದಕ್ಕೆ ಉದಾಹರಣೆ ಎಂಬ ರೀತಿಯಲ್ಲಿ ರಾಜಸ್ಥಾನದ ಉದಯಪುರದಲ್ಲೊಂದು ಘಟನೆ ನಡೆದಿದೆ.

ಸಣ್ಣ ಕಾರಣಕ್ಕಾಗಿ ಗಂಡ - ಹೆಂಡತಿ ನಡುವೆ ಆರಂಭಗೊಂಡಿರುವ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಉದಯಪುರ ಜಿಲ್ಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನ ಪಾಪಿ ಗಂಡ ಕೊಲೆ ಮಾಡಿದ್ದಾನೆ. ಕೊಟ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೊಟ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಸಬೂರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಜೊತೆ ಜಗಳವಾಡಿದ್ದಾನೆ. ಇದು ತಾರಕ್ಕೇರಿದ್ದು, ಇದರ ಬೆನ್ನಲ್ಲೇ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಜೊತೆಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಅಮಾನವೀಯತೆ : 17 ವರ್ಷದ ಬಾಲಕನಿಗೆ ಥಳಿಸಿದ ವಿಡಿಯೋ ವೈರಲ್​!

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಗಂಡ - ಹೆಂಡತಿ ಜಗಳದ ನಂತರ ಮಹಿಳೆ ತನ್ನ ಪುಟ್ಟ ಮಗುವಿನೊಂದಿಗೆ ಮನೆಯ ಮುಂದಿನ ಅಂಗಳದಲ್ಲಿ ಮಲಗಿದ್ದಳು. ಈ ವೇಳೆ, ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ಅಲ್ಲಿಗೆ ಆಗಮಿಸಿ, ಮಕ್ಕಳಾದ ನಾನಿ, ಸುಮಿತ್ರಾ ಹಾಗೂ ಪತ್ನಿ ಕಾಳಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ಇದನ್ನ ನೋಡಿರುವ ಮತ್ತೋರ್ವ ಹಿರಿಯ ಮಗ ಮನೆಯಿಂದ ಹೊರ ಬಂದಿದ್ದಾನೆ.

ಮಾಹಿತಿ ಪಡೆದುಕೊಂಡ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಜೊತೆಗೆ ಪರಾರಿಯಾಗಿರುವ ವ್ಯಕ್ತಿಗೋಸ್ಕರ ಶೋಧಕಾರ್ಯ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.