ETV Bharat / bharat

ಸಪ್ನಾ ಗಿಲ್ ಸೆಲ್ಫಿ ವಿವಾದ ಪ್ರಕರಣ: ಪೃಥ್ವಿ ಶಾಗೆ ಮುಂಬೈ ಹೈಕೋರ್ಟ್ ನೋಟಿಸ್

author img

By

Published : Apr 13, 2023, 10:23 PM IST

ಸಪ್ನಾ ಘೇಲ್ ಮತ್ತು ಪೃಥ್ವಿ ಶಾ ನಡುವಿನ ಜಗಳ ಪ್ರಕರಣದ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್​ ಪೃಥ್ವಿ ಶಾಗೆ ನೋಟಿಸ್ ನೀಡಿದೆ.

ಸಪ್ನಾ ಘೇಲ್ ಮತ್ತು ಪೃಥ್ವಿ ಶಾ
ಸಪ್ನಾ ಘೇಲ್ ಮತ್ತು ಪೃಥ್ವಿ ಶಾ

ಮುಂಬೈ (ಮಹಾರಾಷ್ಟ್ರ) : ಸೋಷಿಯಲ್ ಮೀಡಿಯಾ ತಾರೆ ಸಪ್ನಾ ಘೇಲ್ ಮತ್ತು ಕ್ರಿಕೆಟಿಗ ಪೃಥ್ವಿ ಶಾ ನಡುವೆ ಸಾಂತಾಕ್ರೂಜ್‌ನ ಹೋಟೆಲ್‌ನ ಹೊರಗೆ ನಡೆದಿದ್ದ ಜಗಳ ಪ್ರಕರಣದ ವಿಚಾರಣೆಯನ್ನು ಇಂದು ಬಾಂಬೆ ಹೈಕೋರ್ಟ್​ ನಡೆಸಿತು. ವಿಚಾರಣೆ ವೇಳೆ ಸಪ್ನಾ ಗಿಲ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಬಾಂಬೆ ಹೈಕೋರ್ಟ್ ಪೃಥ್ವಿ ಶಾಗೆ ನೋಟಿಸ್ ಜಾರಿ ಮಾಡಿದೆ.

ಫೆಬ್ರವರಿಯಲ್ಲಿ ಪೃಥ್ವಿ ಶಾ ಮತ್ತು ಸಪ್ನಾ ಗಿಲ್ ನಡುವೆ ಸೆಲ್ಫಿಗೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಪೃಥ್ವಿ ಶಾ ಅವರು, ಸಪ್ನಾ ಗಿಲ್ ತನ್ನ ಮೇಲೆ ಮೇಲೆ ಬೇಸ್‌ಬಾಲ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಹೊರಿಸಿದ್ದರು. ಈ ಆರೋಪದ ನಂತರ ಸಪ್ನಾ ಮತ್ತು ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಸಪ್ನಾ ಅವರು ಪೃಥ್ವಿ ಮೇಲೆ ಮಾರಣಾಂತಿಕ ಆಯುಧದಿಂದ ಹಲ್ಲೆ ಮತ್ತು ಕಿರುಕುಳದ ಆರೋಪ ಹೊರಿಸಿ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪೃಥ್ವಿ ಶಾಗೆ ನೋಟಿಸ್: ಈ ಸಮಯದಲ್ಲಿ ಸಪ್ನಾ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಅರ್ಜಿ ವಿಚಾರಣೆ ನಡೆದಿದ್ದು, ಪೃಥ್ವಿ ಶಾಗೆ ಕೋರ್ಟ್ ನೋಟಿಸ್ ನೀಡಿದೆ.

ಹೊರಬರದ ಸತ್ಯ: ಇಂದಿನ ವಿಚಾರಣೆ ವೇಳೆ ಸಪ್ನಾ ಗಿಲ್ ಪರ ವಕೀಲ ಕಾಶಿಫ್ ಖಾನ್ ವಾದ ಮಂಡಿಸಿ, ಸಪ್ನಾ ಗಿಲ್ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಾಗಿದೆ. ಆದರೆ, ಹೋಟೆಲ್​ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಏನಾಗಿದೆ, ಅದರ ಬಗ್ಗೆ ನಿಜವಾದ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದ್ದರಿಂದ ಎಲ್ಲ ಘಟನೆಗಳ ಬಗ್ಗೆ ವಿವಿಧ ಆಯಾಮಗಳಿಂದಲೂ ತನಿಖೆಯಾಗಬೇಕು ಎಂದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪೃಥ್ವಿ ಶಾಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ : ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ: ನಾಲ್ಕನೇ ಆರೋಪಿ ಬಂಧಿಸಿದ ಪೊಲೀಸರು

ಹೋಟೆಲ್ ಮ್ಯಾನೇಜರ್​ಗೆ ದೂರು ನೀಡಿದ್ದ ಶಾ: ಫೆಬ್ರವರಿಯಲ್ಲಿ ಪೃಥ್ವಿ ಶಾ ತನ್ನ ಸ್ನೇಹಿತರೊಂದಿಗೆ ಮುಂಬೈನ ಹೋಟೆಲ್‌ಗೆ ಹೋಗಿದ್ದರು. ಅಲ್ಲಿ ಸಪ್ನಾ ಮತ್ತು ಅವರ ಸ್ನೇಹಿತರೊಬ್ಬರು ಸೆಲ್ಫಿಗಾಗಿ ಪದೇ ಪದೇ ಪೃಥ್ವಿ ಬಳಿ ಮನವಿ ಇಟ್ಟಿದ್ದರು. ಶಾ ಅವರು ಹೋಟೆಲ್ ಮ್ಯಾನೇಜರ್‌ಗೆ ದೂರು ನೀಡಿದ್ದರು. ಬಳಿಕ ಸಪ್ನಾ ಮತ್ತು ಅವರ ಸ್ನೇಹಿತನನ್ನು ಹೋಟೆಲ್‌ನಿಂದ ಹೊರಹಾಕಲಾಗಿತ್ತು. ಇದರಿಂದ ಕುಪಿತಗೊಂಡ ಸಪ್ನಾ, ಪೃಥ್ವಿ ಹೋಟೆಲ್‌ನಿಂದ ಹೊರಬಂದ ತಕ್ಷಣ ಅವರ ಕಾರನ್ನು ಹಿಂಬಾಲಿಸಿ, ರಸ್ತೆಯಲ್ಲೇ ಗಲಾಟೆ ಮಾಡಿ, ದಾಳಿ ಮಾಡಲು ಯತ್ನಿಸಿದ್ದರು.

ಇದನ್ನೂ ಓದಿ : "ಪೃಥ್ವಿ ಶಾ ಅನುಚಿತವಾಗಿ ವರ್ತಿಸಿದ್ದಾರೆ": ಸಪ್ನಾ ಗಿಲ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.